Toyota Innova Crysta ಉತ್ಪಾದನೆ 2025 ರವರೆಗೆ ಮುಂದುವರಿಯಲಿದೆ... ಕಾರಣವೇನು?

ಭಾರತದಲ್ಲಿ ಟೊಯೋಟಾಗೆ ಭಾರೀ ಹೆಸರು ತಂದುಕೊಟ್ಟ ಇನ್ನೋವಾ ಕ್ರಿಸ್ಟಾ ಮಾದರಿಯನ್ನು ಕಳೆದ ವರ್ಷ ಸ್ಥಗಿತಗೊಳಿಸಿ ನವೀಕೃತ ಮಾದರಿಯಾದ ಇನ್ನೋವಾ ಹೈಕ್ರಾಸ್ ಅನ್ನು ಪರಿಚಯಿಸಲಾಯಿತು. ಆದರೆ ಗ್ರಾಹಕರ ಬೇಡಿಕೆಯಿಂದ ಟೊಯೋಟಾ ಇನ್ನೋವಾ ಕ್ರಿಸ್ಟಾವನ್ನು ಮರುಪರಿಚಯಿಸಿದೆಯಾದರೂ ಉತ್ಪಾದನೆಯಲ್ಲಿ ಭಾರೀ ವಿಳಂಭವಾಗುತ್ತಿದೆ ಎಂದು ತಿಳಿದುಬಂದಿದೆ.

ಟೊಯೊಟಾ ಇಂಡಿಯಾ ಫೆಬ್ರವರಿ 2023 ರಲ್ಲಿ ಇನ್ನೋವಾ ಕ್ರಿಸ್ಟಾವನ್ನು ಮರುಪರಿಚಯಿಸಿತು. ಇನ್ನೋವಾ ಹೆಸರಿನ ಅಡಿಯಲ್ಲಿ ಒಂದಲ್ಲ, ಎರಡು ವಿಭಿನ್ನ MPV ಗಳನ್ನು ಮಾರಾಟ ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿತು. ಈ ಮೂಲಕ ಯಾವುದೇ ಗ್ರಾಹಕರನ್ನು ಬಿಟ್ಟು ಕೊಡದೇ ಎರಡೂ ಮಾದರಿಗಳ ಮೂಲಕ ಹಿಡಿದಿಟ್ಟುಕೊಂಡಿದೆ. ಎರಡು ಮಾಡೆಲ್‌ಗಳನ್ನು ಒಟ್ಟಿಗೆ ಮಾರಾಟ ಮಾಡಲು ಪ್ರಮುಖ ಕಾರಣಗಳಲ್ಲಿ ಇದು ಒಂದಾಗಿದೆ. ಇವೆರಡೂ ವಿಭಿನ್ನ ಮಾದರಿಗಳಾಗಿದ್ದು ತನ್ನದೇ ಆದ್ಯತೆಯನ್ನು ಸೃಷ್ಟಿಸಿಕೊಂಡಿವೆ.

Production of Toyota Innova Crysta will continue till 2025

ಇನ್ನೋವಾ ಹೈಕ್ರಾಸ್ ಖಾಸಗಿ ಗ್ರಾಹಕರನ್ನು ಗುರಿಯಾಗಿಸಿಕೊಂಡಿದ್ದು, ಇದು ದೀರ್ಘ ವೈಶಿಷ್ಟ್ಯಗಳ ಪಟ್ಟಿ ಮತ್ತು ಪೆಟ್ರೋಲ್ ಹೈಬ್ರಿಡ್ ತಂತ್ರಜ್ಞಾನವನ್ನು ಒಳಗೊಂಡಿದೆ. ಮತ್ತೊಂದೆಡೆ, ಕ್ರಿಸ್ಟಾ 2016 ರಲ್ಲಿ ಪರಿಚಯಿಸಿದಾಗಿನಿಂದ ಡೀಸೆಲ್ ಎಂಜಿನ್ ಮತ್ತು ಒರಟಾದ ಸ್ವಭಾವದೊಂದಿಗೆ ಫ್ಲೀಟ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ. ಹೀಗೆ ಎರಡೂ ಮಾದರಿಗಳು ತನ್ನದೇ ವೈಶಿಷ್ಟ್ಯಗಳನ್ನು ಹೊಂದಿವೆ. ಇದೀಗ ಎರಡೂ ಮಾದರಿಗಳಿಗೂ ದಾಖಲೆಯ ಬುಕಿಂಗ್ಸ್ ಬಂದಿವೆಯಾದರೂ ಉತ್ಪಾದನೆಯಲ್ಲಿ ವಿಳಂಭವಾಗುತ್ತಿದ್ದು ಇದಕ್ಕೆ ಮುಖ್ಯ ಕಾರಣವನ್ನು ಇಲ್ಲಿ ತಿಳಿಯೋಣ.

ಮರುಪರಿಚಯಿಸಲಾದ Innova Crysta ಮತ್ತು ಹೊಸ Innova Hycross 60,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಬಾಕಿ ಉಳಿಸಿಕೊಂಡಿವೆ. ಹೈಕ್ರಾಸ್‌ನ ವಿತರಣೆಗಳು ಉತ್ತಮವಾಗಿವೆ. ಆದರೆ ಉನ್ನತ ಟ್ರಿಮ್‌ಗಳು ಪ್ರಮುಖ ಆರ್ಡರ್‌ಗಳನ್ನು ಒಳಗೊಂಡಿದ್ದು, ಜಾಗತಿಕ ಸೆಮಿಕಂಡಕ್ಟರ್ ಕೊರತೆಯು ಟೊಯೋಟಾಗೆ ದೊಡ್ಡ ಸವಾಲನ್ನು ತಂದೊಡ್ಡಿದೆ. ಇದು ಹೈಕ್ರಾಸ್‌ನ ಸುಸಜ್ಜಿತ ZX ಮತ್ತು ZX (O) ಟ್ರಿಮ್‌ಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಕಾರಣದಿಂದ ಈ ಟ್ರಿಮ್‌ಗಳಿಗಾಗಿ ಟೊಯೋಟಾ ಬುಕಿಂಗ್‌ಗಳಿಗೆ ವಿರಾಮ ನೀಡಿದೆ.

Production of Toyota Innova Crysta will continue till 2025

ಈ ಟ್ರಿಮ್‌ಗಳಿಗಾಗಿ ಸದ್ಯ ಕಾಯುವ ಅವಧಿಯು 24 ತಿಂಗಳವರೆಗೆ ವಿಸ್ತರಿಸಿದೆ. ವರದಿಯ ಪ್ರಕಾರ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ಇನ್ನೋವಾ ಅವಳಿಗಳಿಗೆ ಆರ್ಡರ್ ಬ್ಯಾಕ್‌ಲಾಗ್ ಅನ್ನು ನಿಗ್ರಹಿಸಲು ಮತ್ತು ಕಾಯುವ ಅವಧಿಯನ್ನು ಕಡಿಮೆ ಮಾಡಲು ತನ್ನ ಸ್ಥಾವರದಲ್ಲಿ ಮೂರನೇ ಶಿಫ್ಟ್ ಅನ್ನು ಕೂಡ ಆರಂಭಿಸಿದೆ. ಚಿಪ್‌ಗಳ ಕೊರತೆ ಇಲ್ಲದಿದ್ದರೆ, ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಕಂಪನಿಯು ಮೊದಲೇ ಶಿಫ್ಟ್ ಅನ್ನು ಸೇರಿಸುತ್ತಿತ್ತು. ಹಾಗಾಗಿ ಡೆಲಿವರಿ ನೀಡಲು ವಿಲಂಭವಾಗುತ್ತಿದೆ.

ಟೊಯೊಟಾ ಈ ಹಿಂದೆ ಇನ್ನೋವಾ ಕ್ರಿಸ್ಟಾ ಉತ್ಪಾದನೆಯನ್ನು ನಿಲ್ಲಿಸಲು ಯೋಜಿಸಿತ್ತು ಎಂದು ತಿಳಿದು ಬಂದಿದೆ, ಆದರೆ ಹೊಸ ಇನ್ನೋವಾ ಹೈಕ್ರಾಸ್‌ಗಾಗಿ ಸೆಮಿಕಂಡಕ್ಟರ್‌ಗಳ ಕೊರತೆಯು 2024 ರ ಅಂತ್ಯದವರೆಗೆ (ಮಾರ್ಚ್ 2024) ಉತ್ಪಾದನೆಯನ್ನು ಮುಂದುವರಿಸಲು ಒತ್ತಾಯಿಸಿದೆ. ಮೂಲಗಳು ಹೇಳುವಂತೆ, ಕ್ರಿಸ್ಟಾಗೆ ಬಲವಾದ ಮಾರುಕಟ್ಟೆ ನೀಡಿದರೆ, TKM (ಟೊಯೊಟಾ ಕಿರ್ಲಾಸ್ಕರ್ ಮೋಟಾರ್) ಇನ್ನೂ ಒಂದು ವರ್ಷದವರೆಗೆ ಮಾರಾಟವನ್ನು ಮುಂದುವರೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Production of Toyota Innova Crysta will continue till 2025

ಕ್ರಿಸ್ಟಾ 2.4-ಲೀಟರ್ ಡೀಸೆಲ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಒಂದೇ ಪವರ್‌ಟ್ರೇನ್ ನಲ್ಲಿ ಮಾತ್ರ ಲಭ್ಯವಿದೆ. ಇನ್ನೋವಾ ಕ್ರಿಸ್ಟಾವು ಫ್ಲೀಟ್ ಮಾಲೀಕರನ್ನು ಗುರಿಯಾಗಿಸಿಕೊಂಡಿದ್ದರೂ, ಖಾಸಗಿ ಖರೀದಿದಾರರಿಂದಲೂ ಯೋಗ್ಯವಾದ ಬುಕಿಂಗ್‌ಗಳಿವೆ. ಇನ್ನೋವಾ ಕ್ರಿಸ್ಟಾವನ್ನು 2016 ರಲ್ಲಿ ಮೊದಲ-ಜನ್ ಇನ್ನೋವಾಗೆ ಬದಲಿಯಾಗಿ ಪರಿಚಯಿಸಲಾಯಿತು. ಅಂದಿನಿಂದ, ಇದು ಜೂನ್ 2016 ಮತ್ತು ಡಿಸೆಂಬರ್ 2022 ರ ನಡುವೆ ನಾಲ್ಕು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ದೇಶದಲ್ಲಿ ಇನ್ನೋವಾ ಪರಂಪರೆಯನ್ನು ಮುಂದುವರೆಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Monday, April 24, 2023, 19:10 [IST]
English summary
Toyota innova crysta production delayed
Read more on toyota ಟೊಯೋಟಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+