TVS ಐಕ್ಯೂಬ್: ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ಸ್ಕೂಟರ್ ವಿತರಣೆ.. ಸರಿಯಾಗಿಯೇ ಠಕ್ಕರ್!
ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲಿ ಜನಪ್ರಿಯತೆಗಳಿಸುತ್ತಿವೆ. ಅದರಲ್ಲೂ ಸ್ಕೂಟರ್‌ಗಳು ಒಂದು ಹೆಜ್ಜೆ ಮುಂದೆ ಹೊಂದಿದ್ದು, ಪ್ರಖ್ಯಾತ ಕಂಪನಿ ಟಿವಿಎಸ್ ತನ್ನ ಮಾರಾಟವನ್ನು ದ್ವಿಗುಣಗೊಳಿಸಲು ಪ್ರಯತ್ನಿಸುತ್ತಿದ್ದು, ಮೆಗಾ ಡೆಲಿವರಿ ಮ್ಯಾರಥಾನ್ ನಡೆಸುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶದಲ್ಲಿ 10 ದಿನದಲ್ಲಿ 10 ಪ್ರಮುಖ ನಗರಗಳಲ್ಲಿ ಬರೋಬ್ಬರಿ 1,000 ಐಕ್ಯೂಬ್ ಸ್ಕೂಟರ್ ವಿತರಿಸಲು ಟಿವಿಎಸ್ ಮೋಟಾರ್ ತೀರ್ಮಾನ ಮಾಡಿದ್ದು, ಅದರ ಭಾಗವಾಗಿ ಬೆಂಗಳೂರಿನಲ್ಲಿ 100 ಸ್ಕೂಟರ್‌ಗಳನ್ನು ಡೆಲಿವರಿ ಮಾಡಿದೆ. ಈ ಮೂಲಕ ತನ್ನ ಪ್ರತಿಸ್ಪರ್ಧಿ ಕಂಪನಿಗಳಿಗೆ ಸರಿಯಾಗಿಯೇ ಠಕ್ಕರ್ ಕೊಡಲು ಮುಂದಾಗಿದೆ. ಗ್ರಾಹಕರು ಸಹ ಖುಷಿಯಿಂದಲೇ ಐಕ್ಯೂಬ್ ಸ್ಕೂಟರ್ ಗಳನ್ನು ವಿತರಣೆ ಪಡೆದಿದ್ದಾರೆ.

ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು ದೇಶೀಯ ಮಾರುಕಟ್ಟೆಯಲ್ಲಿ ಮೂರು ರೂಪಾಂತರದಲ್ಲಿ ಗ್ರಾಹಕರಿಗೆ ಕೈಗಟುಕುವ ಬೆಲೆಯಲ್ಲಿ ಸಿಗಲಿದೆ. ಐಕ್ಯೂಬ್ ರೂ.1,13,721, ಐಕ್ಯೂಬ್ S ರೂ.1,21,674 ದರವನ್ನು ಪಡೆದಿದೆ ಆದರೆ, ಟಾಪ್ ಎಂಡ್ ಮಾದರಿ ಐಕ್ಯೂಬ್ ST ರೂಪಾಂತರ ಇನ್ನೂ ಮಾರುಕಟ್ಟೆಯಲ್ಲಿ ಲಾಂಚ್ ಆಗಿಲ್ಲ. ಇಷ್ಟರಲ್ಲಿಯೇ ಬರಲಿದೆ.
ಸದ್ಯ, ಖರೀದಿಗೆ ದೊರೆಯುವ ಐಕ್ಯೂಬ್ ಹಾಗೂ ಐಕ್ಯೂಬ್ S ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಬಗ್ಗೆ ಹೇಳುವುದಾದರೆ, ಇವೆರೆಡು 3.04 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 km ರೇಂಜ್ ನೀಡಲಿವೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಪ್ ಎಂಡ್ ಐಕ್ಯೂಬ್ ST ವೇರಿಯೆಂಟ್ 145 km ರೇಂಜ್ ಕೊಡಲಿದೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಯಾವೆಲ್ಲ ವೈಶಿಷ್ಟ್ಯಗಳನ್ನು ಪಡೆದಿದೆ ಎಂಬುದನ್ನು ನೋಡುವುದಾದರೆ, ಇದು ಬಹುತೇಕ ಯುವ ಖರೀದಿದಾರರನ್ನೇ ಸೆಳೆಯುವಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಜೊತೆಗೆ ರೈಡಿಂಗ್ ಅಂಕಿಅಂಶ, ಬ್ಯಾಟರಿ ರೇಂಜ್ ಬಗ್ಗೆ ಸೇರಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇಯನ್ನು ಸಂಪರ್ಕಿಸಬಹುದು.
ಈ ಸ್ಕೂಟರ್, 75 km/h ಟಾಪ್ ಸ್ವೀಡ್ ಹೊಂದಿದ್ದು, ಕೇವಲ 4 ಗಂಟೆ 30 ನಿಮಿಷದಲ್ಲಿ ಇದರ ಬ್ಯಾಟರಿ 0 - 80% ಚಾರ್ಜ್ ಆಗುತ್ತದೆ. ಜೊತೆಗೆ ವಿವಿಧ ಬಣ್ಣಗಳ ಆಯ್ಕೆಯಲ್ಲೂ ಖರೀದಿಗೆ ಲಭ್ಯವಿದೆ. ಇನ್ನು, ಟಿವಿಎಸ್ ಕಂಪನಿ ಐಕ್ಯೂಬ್ ಮಾರಾಟದಲ್ಲೂ ಭಾರೀ ಸಾಧನೆ ಮಾಡಿದ್ದು, ಬಿಡುಗಡೆಯಾದಾಗಿನಿಂದ (2020) ಈವರೆಗೆ ಬರೋಬ್ಬರಿ 1 ಲಕ್ಷ ಯುನಿಟ್ ಸ್ಕೂಟರ್ ಸೇಲ್ ಮಾಡಿದೆ. ಕಳೆದ ತಿಂಗಳು ಉತ್ತಮ ಸಂಖ್ಯೆಯಲ್ಲಿ ಈ ಸ್ಕೂಟರ್ ಮಾರಾಟವಾಗಿದೆ.
ಒಟ್ಟಾರೆ, ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟವಾಗುವ ಪಟ್ಟಿಯಲ್ಲಿ ಟಿವಿಎಸ್ ಐಕ್ಯೂಬ್ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಕಂಪನಿಯು ಆರಂಭಿಸಿರುವ ಮೆಗಾ ಡೆಲಿವರಿ ಮ್ಯಾರಥಾನ್ ನಿಂದ ಈ ಸಂಖ್ಯೆ ದುಪ್ಪಟಾಗಲಿದೆ. ಮುಂಬರುವ ದಿನಗಳಲ್ಲಿ ಟಿವಿಎಸ್ ಐಕ್ಯೂಬ್ ST ರೂಪಾಂತರ ಬಿಡುಗಡೆಯಾಗಲಿದ್ದು, ಗ್ರಾಹರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದುದನ್ನು ಕಾದುನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications