Uber ಗ್ರಾಹಕರಿಗೆ ಇನ್ಮುಂದೆ ಹೊಸ ವೈಶಿಷ್ಟ್ಯದ ಅನುಭವ... ಸುರಕ್ಷತೆಯನ್ನು ಖಚಿಪಡಿಸಿಕೊಳ್ಳಿ

ಭಾರತವು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡು ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ವಿದೇಶಗಳಂತೆಯೇ ನಮ್ಮಲ್ಲಿಯೂ ತಂತ್ರಜ್ಞಾನದ ಅಳವಡಿಕೆ ವೇಗಗೊಳ್ಳುತ್ತಿದೆ. ಆಟೋ ವಲಯ ಕೂಡ ಕಾಲಕ್ಕೆ ತಕ್ಕಂತೆ ಹೊಸ ಆವಿಷ್ಕಾರಗಳೊಂದಿಗೆ ಮುನ್ನುಗ್ಗುತ್ತಿದ್ದರೇ, ನಾವು ಸಾಥ್ ಕೊಡುತ್ತೇವೆ ಎಂದು ಈಗ ಟ್ಯಾಕ್ಸಿ ಸಂಸ್ಥೆಗಳು ಕೂಡ ಕೈಜೋಡಿಸಿವೆ.

ದೇಶದ ಟ್ಯಾಕ್ಸಿ ಸೇವೆಯಲ್ಲಿ ಜನಪ್ರಿಯತೆ ಪಡೆದಿರುವ Uber, ಬಹಳ ಮುಖ್ಯವಾದ ಸುರಕ್ಷತಾ ಸಾಧನವನ್ನು ಕಡ್ಡಾಗೊಳಿಸಿದೆ. ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರನ್ನು ಸೀಟ್ ಬೆಲ್ಟ್ ಹಾಕಲು ಪ್ರೋತ್ಸಾಹಿಸುತ್ತಿದೆ. ಹೌದು ಕಾರಿನಲ್ಲಿ ಎಲ್ಲೇ ಕೂತರೂ ಅಪಘಾತವಾದಲ್ಲಿ ಸೀಟ್‌ ಬೆಲ್ಟ್ ಧರಿಸಿಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಉತ್ತಮ ಉದಾಹರೆಣೆ ಎಂದರೆ ಕಳೆದ ವರ್ಷ ಅಪಘಾತದಲ್ಲಿ ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವು.

Uber

ಇಂತಹ ಹಲವು ದುರ್ಘಟನೆಗಳ ಉದಾಹರಣೆಗಳಿವೆ, ಹಾಗಾಗಿ ತನ್ನ ಪ್ರಯಾಣಿಕರ ಸುರಕ್ಷತೆಯ ಸಲುವಾಗಿ Uber ಈಗ ಈ ವೈಶಿಷ್ಟ್ಯವನ್ನು ಪರಿಚಯಿಸಿದೆ. Uber ನ ಹೊಸ ಆಡಿಯೊ ಸೀಟ್‌ಬೆಲ್ಟ್ ರಿಮೈಂಡರ್ ವೈಶಿಷ್ಟ್ಯವನ್ನು ಪ್ರಯಾಣಿಕರು ತಮ್ಮ ಸೀಟ್ ಬೆಲ್ಟ್‌ಗಳನ್ನು ಧರಿಸಲು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಈ ವೈಶಿಷ್ಟ್ಯವನ್ನು ಮೊದಲಿಗೆ ತೆಲಂಗಾಣ ರಾಜ್ಯ ರಾಜಧಾನಿ ಹೈದರಾಬಾದ್‌ನಲ್ಲಿ ಪ್ರಾರಂಭಿಸಲಾಗಿದೆ. ಈ ಸುರಕ್ಷತಾ ವೈಶಿಷ್ಟ್ಯವನ್ನು ಪ್ರಸ್ತುತ ಭಾರತದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತಿರುವುದಾಗಿ ಕಂಪನಿ ತಿಳಿಸಿದೆ.

ಈ ವೈಶಿಷ್ಟ್ಯವು ಸವಾರರು ಕ್ಯಾಬ್ ಹತ್ತಿದ ತಕ್ಷಣ ಸೀಟ್ ಬೆಲ್ಟ್ ಧರಿಸುವಂತೆ ಎಚ್ಚರಿಸುತ್ತದೆ. ಹಾಗೆಯೇ ಚಾಲಕನ ಫೋನ್‌ನಲ್ಲಿ ಆಡಿಯೊ ರಿಮೈಂಡರ್ ಅನ್ನು ಪ್ಲೇ ಮಾಡುತ್ತದೆ ಎಂದು ಉಬರ್ ವಿವರಿಸಿದೆ. ಪ್ರಯಾಣಿಕರು ಉಬರ್ ರೈಡ್ ಬುಕ್ ಮಾಡಿ ವಾಹನವನ್ನು ಪ್ರವೇಶಿಸಿದ ನಂತರ ತಮ್ಮ ಸುರಕ್ಷತೆಗಾಗಿ ಬಕಲ್ ಅಪ್ ಮಾಡಲು ಕೇಳುತ್ತದೆ. ಪ್ರಯಾಣ ಪ್ರಾರಂಭವಾಗುವ ಮೊದಲು ತಮ್ಮ ಸೀಟ್ ಬೆಲ್ಟ್‌ಗಳನ್ನು ಜೋಡಿಸಲು ನೆನಪಿಸುವ ಇನ್ ಆಪ್ ಪುಶ್ ನೋಟಿಫಿಕೇಷನ್ ಅನ್ನು ಪ್ರಯಾಣಿಕರ ಫೋನ್ ಸ್ವೀಕರಿಸುತ್ತದೆ.

Uber ಗ್ರಾಹಕರಿಗೆ ಇನ್ಮುಂದೆ ಹೊಸ ವೈಶಿಷ್ಟ್ಯದ ಅನುಭವ... ಸುರಕ್ಷತೆಯನ್ನು ಖಚಿಪಡಿಸಿಕೊಳ್ಳಿ

Uber ಸದ್ಯ ವಾಯಿಸ್ ಮತ್ತು ಅಪ್ಲಿಕೇಶನ್‌ನಲ್ಲಿನ ನೋಟಿಫಿಕೇಷನ್ ಎರಡನ್ನೂ ಬಳಸುತ್ತಿದ್ದು, ಸವಾರರಿಗೆ ಹಿಂದಿನ ಸೀಟ್‌ಗಳಲ್ಲಿ ಸೀಟ್ ಬೆಲ್ಟ್‌ ಗಳನ್ನು ಧರಿಸಲು ನೆನಪಿಸುತ್ತದೆ. ಈ ವೈಶಿಷ್ಟ್ಯದೊಂದಿಗೆ, ಪ್ರಯಾಣಿಕರು ತಮ್ಮ ಸೀಟ್ ಬೆಲ್ಟ್‌ ಗಳನ್ನು ಜೋಡಿಸಲು ನಿರಂತರವಾಗಿ ನೆನಪಿಸಿಕೊಳ್ಳುವುದುರ ಜೊತೆಗೆ, ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಬಹುದು. ಈ ಮೂಲಕ Uber ತನ್ನ ಪ್ಲಾಟ್‌ ಫಾರ್ಮ್‌ನಲ್ಲಿ ಸುರಕ್ಷತೆಯನ್ನು ಹೆಚ್ಚಿಸಿ ಪ್ರಯಾಣಿಕರಿಗೆ ಉಂಟಾಗುವ ಗಾಯಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಈ ಕುರಿತು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಸುರಕ್ಷತಾ ಕಾರ್ಯಾಚರಣೆಗಳ ಮುಖ್ಯಸ್ಥ ಸೂರಜ್ ನಾಯರ್ ಮಾತನಾಡಿ, ಹೈದರಾಬಾದ್‌ಗೆ ಆಡಿಯೋ ಸೀಟ್‌ಬೆಲ್ಟ್ ರಿಮೈಂಡರ್ ವೈಶಿಷ್ಟ್ಯವನ್ನು ಪರಿಚಯಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಪ್ರಯಾಣಿಕರ ಸುರಕ್ಷತೆಯ ಕುರಿತಾದ ನಮ್ಮ ಕೆಲಸ ಎಂದಿಗೂ ನಿಲ್ಲುವುದಿಲ್ಲ. ಈ ಹೊಸ ವೈಶಿಷ್ಟ್ಯವು ಸವಾರರು ತಮ್ಮ ಸೀಟ್‌ಬೆಲ್ಟ್‌ಗಳನ್ನು ಧರಿಸಲು ಪ್ರೋತ್ಸಾಹಿಸಲು ಪರಿಣಾಮಕಾರಿ ಮಾರ್ಗವಾಗಿದೆ ಎಂದು ನಾವು ನಂಬುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Uber

ಪ್ರಸ್ತುತ ನಮ್ಮ ಉಬರ್ ಚಾಲಕರು ಕಾರುಗಳನ್ನು ವೇಗವಾಗಿ ಓಡಿಸುವುದಿಲ್ಲ ಆದರೂ ಪ್ರಯಾಣಿಕರ ಸುರಕ್ಷತೆಯ ಮುನ್ನೆಚ್ಚರಿಕೆಯಾಗಿ ಈ ಸೀಟ್‌ಬೆಲ್ಟ್ ವೈಶಿಷ್ಟ್ಯವನ್ನು ತರಲಾಗಿದೆ. ಟೆಕ್ ಸಕ್ರಿಯಗೊಳಿಸಿದ ವೈಶಿಷ್ಟ್ಯಗಳ ಮೂಲಕ ಪ್ಲಾಟ್‌ಫಾರ್ಮ್ ಸುರಕ್ಷತೆಯನ್ನು ಸುಧಾರಿಸುವ ಮಾರ್ಗಗಳನ್ನು ನಾವು ನಿರಂತರವಾಗಿ ನೋಡುತ್ತಿದ್ದೇವೆ. ರೈಡರ್‌ಗಳು ಮತ್ತು ಡ್ರೈವರ್‌ಗಳಿಗೆ ಸಮಾನವಾಗಿ ಅನುಭವವನ್ನು ಹೆಚ್ಚಿಸಲು ಬೆಂಬಲವನ್ನು ಬಲಪಡಿಸುತ್ತೇವೆ. ಹೈದರಾಬಾದ್‌ನಲ್ಲಿ ರಸ್ತೆ ಸುರಕ್ಷತೆಯ ಮೇಲೆ ಬೀರುವ ಸಕಾರಾತ್ಮಕ ಪರಿಣಾಮವನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಎಂದರು.

ಭಾರತದಲ್ಲಿ ಈ ಸೀಟ್‌ಬೆಲ್ಟ್ ರಿಮೈಂಡರ್ ವೈಶಿಷ್ಟ್ಯದ ಪರಿಚಯವು ಸುರಕ್ಷತೆ ಮತ್ತು ನಾವೀನ್ಯತೆಗೆ ಉಬರ್‌ನ ಬದ್ಧತೆಯನ್ನು ತೋರಿಸುತ್ತದೆ. ಈ ವೈಶಿಷ್ಟ್ಯವನ್ನು ಪ್ರಯಾಣಿಕರು ಹೇಗೆ ಸ್ವೀಕರಿಸುತ್ತಾರೆ ಮತ್ತು ಇತರ ದೇಶಗಳಲ್ಲಿ ಹೇಗೆ ಕಾರ್ಯಗತಗೊಳಿಸುತ್ತಾರೆ ಎಂಬುದನ್ನು ನೋಡಲು ಕಾಯಬೇಕಿದೆ. ಒಟ್ಟಾರೆಯಾಗಿ, ಉಬರ್‌ನ 'ಆಡಿಯೋ ಸೀಟ್‌ಬೆಲ್ಟ್ ರಿಮೈಂಡರ್' ಸವಾರಿಯ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಬಹುದು. ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ನೋಡಬೇಕಿದೆ.

More from DriveSpark

Article Published On: Thursday, April 13, 2023, 9:30 [IST]
English summary
Uber new seat belt reminder feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+