ಮಹೀಂದ್ರಾದಿಂದ ಬರಲಿವೆ ಅತ್ಯದ್ಭುತ ಕಾರುಗಳು: ಅದರಲ್ಲೊಂದು ದೊಡ್ಡ ಅಲೆಯನ್ನೇ ಎಬ್ಬಿಸುತ್ತೆ..!

ಮಹೀಂದ್ರಾ ಕಂಪನಿಯ ಕಾರುಗಳು ಈಗಾಗಲೇ ಭಾರತದಲ್ಲಿ ಸಾಕಷ್ಟು ಖ್ಯಾತಿಗಳಿಸಿವೆ. XUV700, ಸ್ಕಾರ್ಪಿಯೋ ಎನ್ ಎಸ್‌ಯುವಿಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದೀಗ, ಮುಂಬರುವ ಎರಡು - ಮೂರು ವರ್ಷಗಳಲ್ಲಿ ಕಂಪನಿಯು ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಬಹುನೀರಿಕ್ಷಿತ ಬೊಲೆರೋ ನಿಯೋದ ನವೀಕರಿಸಿದ ಆವೃತ್ತಿಯಾದ ಬೊಲೆರೋ ನಿಯೋ ಪ್ಲಸ್ (Bolero Neo Plus) ಸಿದ್ಧಪಡಿಸುವಲ್ಲಿ ಮಹೀಂದ್ರಾ ಕಂಪನಿ ನಿರತವಾಗಿದೆ. ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಗಿಂದ ಕೊಂಚ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಪ್ರಮುಖವಾಗಿ ಈ ಎಸ್‌ಯುವಿ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿರುತ್ತದೆ. ಜೊತೆಗೆ ಹತ್ತು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಖಂಡಿತ ಹೊಂದಿರುತ್ತದೆ.

ಮಹೀಂದ್ರಾದಿಂದ ಬರಲಿವೆ ಅತ್ಯದ್ಭುತ ಕಾರುಗಳು: ಅದರಲ್ಲೊಂದು ದೊಡ್ಡ ಅಲೆಯನ್ನೇ ಎಬ್ಬಿಸುತ್ತೆ..!

ಈ ಬೊಲೆರೋ ನಿಯೋ ಪ್ಲಸ್ ಹಿಂದಿನ ಮಾದರಿಯಂತೆ 1.5 - ಲೀಟರ್ ಡಿಸೇಲ್ ಎಂಜಿನ್ ಹೊಂದಿರಲಿದ್ದು, 100 hp ಪವರ್ ಉತ್ಪಾದಿಸಲಿದೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿರಲಿದೆ. ಆದರೆ, ಮತ್ತೊಂದು ವರದಿಯಂತೆ 2.2-ಲೀಟರ್ mHawk ಎಂಜಿನ್ ಪಡೆದಿರುವ ಸಾಧ್ಯತೆಯಿದೆ. RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನದೊಂದಿಗೆ 7-9 ಆಸನ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಬಹುದು.

ಮಹೀಂದ್ರಾ ಮುಂದಿನ ವರ್ಷ ಅಂದರೆ 2024ರಲ್ಲಿ ತನ್ನ ಜನಪ್ರಿಯ 5 ಡೋರ್ ಥಾರ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಇದು ಪೆಟ್ರೋಲ್, ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಮಾರುತಿ ಸುಜುಕಿ 5 ಡೋರ್ ಜಿಮ್ನಿ ಹಾಗೂ 5 ಡೋರ್ ಫೋರ್ಸ್ ಗೂರ್ಖಾಗೆ ಪ್ರತಿಸ್ಪರ್ಧಿಯಾಗಲಿದೆ. ಸುಮಾರು ರೂ.10 ಲಕ್ಷ ಆರಂಭಿಕ ದರದಲ್ಲಿ ಸಿಗುವ ನಿರೀಕ್ಷೆಯಿದೆ.

ನೂತನ ಮಹೀಂದ್ರಾ 5 ಡೋರ್ ಥಾರ್ ಎಸ್‌ಯುವಿಯ ಹೊರಭಾಗ, ಒಳಭಾಗದ ಡಿಸೈನ್, ಫೀಚರ್ಸ್ 3 ಡೋರ್ ಥಾರ್ ಗೆ ಹೋಲಿಕೆಯಾಗುತ್ತದೆ. ಆದರೆ, 300 ಎಂಎಂ ಹೆಚ್ಚಿನ ಉದ್ದದ ವೀಲ್ ಬೇಸ್ ಪಡೆದುಕೊಂಡಿದ್ದು, ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಬಹುತೇಕ ಯುವಕರು ಇಷ್ಟಪಟ್ಟು ಖರೀದಿಸಬಹುದು. ಸದ್ಯ, 3 ಡೋರ್ ಥಾರ್, ರೂ.9.99 ಲಕ್ಷ ಪ್ರಾರಂಭಿಕ ಆನ್-ರೋಡ್ ಬೆಲೆಯಲ್ಲಿ ಸಿಗಲಿದ್ದು, 2-ಲೀಟರ್ ಟರ್ಬೊ ಪೆಟ್ರೋಲ್, 2.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. 15.2 kmpl ಮೈಲೇಜ್ ನೀಡಲಿದೆ.

ಮಹೀಂದ್ರಾ ಕಂಪನಿ ನವೀಕರಿಸಿದ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಬೊಲೆರೋ ನಿಯೋವನ್ನು ಮುಂದಿನ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಿ ಕಾರೊಂದನ್ನು ನಿರ್ಮಿಸಲು ಮಹೀಂದ್ರಾ ಮುಂದಾಗಿದ್ದು, ಅದಕ್ಕೆ ಬಹುತೇಕ XUV500 ಎಂಬ ಹೆಸರಿಡಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಖಚಿತತೆ ಇಲ್ಲ.

ಇದೀಗ, ಮಹೀಂದ್ರಾ ಭಾರತದ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿ ಮಾಡಲ ಸಿದ್ದವಾಗಿದ್ದು, 'XUV700' ಇವಿ ಕಾರನ್ನು 2024ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು XUV.e8 ಕಾನ್ಸೆಪ್ಟ್ ಆಧರಿಸಿರಲಿದೆ. ಆದರೆ, ಈ ಕಾರಿನ ವೈಶಿಷ್ಟ್ಯ ಹಾಗೂ ವಿನ್ಯಾಸದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನೂತನ 'XUV700' 70 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಗರಿಷ್ಠ 500 ಕಿ.ಮೀ ರೇಂಜ್ ನೀಡಬಹುದು. ರೂ.20-25 ಲಕ್ಷದಿಂದ ಬೆಲೆಯಲ್ಲಿ ಸಿಗಬಹುದು.

ಒಟ್ಟಾರೆಯಾಗಿ ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ ಬೊಲೆರೋ ನಿಯೋ ಪ್ಲಸ್, 5 ಡೋರ್ ಥಾರ್ ಹಾಗೂ ಎಲೆಕ್ಟ್ರಿಕ್ ಕಾರು 'XUV700'ನ್ನು ಮುಂದಿನ ವರ್ಷ ಬಿಡುಗಡೆ ಮಾಡಲು ಹೊರಟಿದ್ದು, ಇವು ಬೇರೆ ಕಂಪನಿ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿವೆ. ಬೆಲೆಯು ಗ್ರಾಹಕರ ಕೈಗೆಟುಕುವಂತಿರಲಿದ್ದು, ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯ ಯುವ ಖರೀದಿದಾರನ್ನು ಸೆಳೆಯಬಹುದು.

Article Published On: Saturday, March 18, 2023, 16:24 [IST]
English summary
Upcoming mahindra suv india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+