ಸೂಪರ್ ಮೈಲೇಜ್, ಕಡಿಮೆ ಬೆಲೆಯಲ್ಲಿ ಬರುತ್ತಿವೆ ಮಾರುತಿ ಕಾರುಗಳು: ಬೈಕ್‌ಗಳಿಗೆ ಪೈಪೋಟಿ ನೀಡುತ್ತಾ?

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದೆ. ಮಾರುತಿ ಸುಜುಕಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯವನ್ನು ಹೊಂದಿದೆ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮಾರಾಟದಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಸಾಧಿಸಲು ತನ್ನ ಕಾರುಗಳ ಸರಣಿಯನ್ನು ವಿಸ್ತರಿಸಲು ಮುಂದಾಗಿದೆ. ಭಾರತೀಯ ಮಾರುಕಟ್ಟೆಲ್ಲಿ ಹೊಸ ಕಾರುಗಳ ಜೊತೆ ತನ್ನ ಸರಣಿಯಲ್ಲಿರುವ ಜನಪ್ರಿಯ ಕಾರುಗಳನ್ನು ನವೀಕರಿಸುತ್ತಿದೆ. ಮಾರುತಿ ಸುಜುಕಿ (Maruti Suzuk) ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗಕ್ಕೂ ಕೂಡ ಪ್ರವೇಶಿಸಲು ಸಜ್ಜಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

Upcoming Maruti Suzuki Cars

ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ಟ್: ಹೊಸ ಸ್ವಿಫ್ಟ್ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಬಾಹ್ಯ ಮತ್ತು ಒಳಭಾಗವನ್ನು ಹೊಂದಿರುತ್ತದೆ. ಈ ಕಾರು ವಿದೇಶದಲ್ಲಿ ಹಲವಾರು ಬಾರಿ ಪರೀಕ್ಷೆಗೆ ಒಳಗಾಗಿದೆ. ಈ ವರ್ಷದ ಅಂತ್ಯದ ಮೊದಲು ಅಥವಾ 2024 ರ ಆರಂಭದಲ್ಲಿ ಜಪಾನ್‌ನಲ್ಲಿ ಜಾಗತಿಕವಾಗಿ ಚೊಚ್ಚಲ ಪ್ರವೇಶ ಮಾಡಲಿದೆ. ಮುಂದಿನ ಕ್ಯಾಲೆಂಡರ್ ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ ಇದನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಈ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು 1.2 ಲೀಟರ್ ಮೂರು-ಸಿಲಿಂಡರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಶ್ರೇಣಿಯನ್ನು ಸೇರುತ್ತದೆ. ಈ ಕಾರಿನ ಮಿಡ್ ಸ್ಪೆಕ್ ಮತ್ತು ಟಾಪ್-ಎಂಡ್ ರೂಪಾಂತರಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಅಸ್ತಿತ್ವದಲ್ಲಿರುವ ಗ್ಯಾಸೋಲಿನ್ ಎಂಜಿನ್ ಅನ್ನು ಮುಂದುವರೆಸಬಹುದು. ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್ ಬಾಕ್ಸ್ ಮತ್ತು ಐದು-ಸ್ಪೀಡ್ AMT ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ನ್ಯೂ ಜನರೇಷನ್ ಮಾರುತಿ ಡಿಜೈರ್: ಸ್ವಿಫ್ಟ್‌ನಂತೆಯೇ, ನ್ಯೂ ಜನರೇಷನ್ ಡಿಜೈರ್ ಕಾರು ಒಳಗೆ ಮತ್ತು ಹೊರಗೆ ಪ್ರಮುಖ ಕೂಲಂಕುಷ ಪರೀಕ್ಷೆಗೆ ಒಳಪಡುತ್ತದೆ. ಇದು ಹ್ಯಾಚ್‌ಬ್ಯಾಕ್ ಸಹೋದರರೊಂದಿಗೆ ಹೋಲಿಕೆಗಳನ್ನು ಹೊಂದಿರುತ್ತದೆ. ಮೂರನೇ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ 2024 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. 2024ರ ಸ್ವಿಫ್ಟ್‌ನಲ್ಲಿ ಚೊಚ್ಚಲವಾಗಲಿರುವ ಅದೇ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಅನ್ನು ಬಳಸುತ್ತದೆ.

ಈ ಎರಡೂ ಕಾರುಗಳಲ್ಲಿ, ಹೊಸ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಗಳ ಸೇರ್ಪಡೆಯೊಂದಿಗೆ ಒಳಾಂಗಣವು ಹೆಚ್ಚು ದುಬಾರಿಯಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 35-40 ಕಿ.ಮೀ ನಷ್ಟು ಮೈಲೇಜ್ ಅನ್ನು ನೀಡಬಹುದು. ಇದು ಅತ್ಯಂತ ಉತ್ತಮ ಮೈಲೇಜ್ ಆಗಿರುತ್ತದೆ. ಇದರಿಂದ ಈ ಎರಡೂ ಕಾರುಗಳು ಹೆಚ್ಚಿನ ಗ್ರಾಹಕರ ಗಮನಸೆಳೆಯುದರಲ್ಲಿ ಅನುಮಾನವಿಲ್ಲ.

ಮಾರುತಿ ಸುಜುಕಿ EVX: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇದರಿಂದ ದೇಶದ ನಂ.1 ಕಾರು ತಯಾರಕರು ಕೂಡ ಮಾರುತಿ ಸುಜುಕಿ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಹೊಸ ವರದಿಯ ಪ್ರಕಾರ, ಭಾರತದ ಅತಿದೊಡ್ಡ ಕಾರು ತಯಾರಕರಿಂದ ಮೊದಲ ಎಲೆಕ್ಟ್ರಿಕ್ ವಾಹನವು ಅಕ್ಟೋಬರ್ 2025 ರಲ್ಲಿ ಪಾದಾರ್ಪಣೆ ಮಾಡಲಿದೆ. ಟೊಯೊಟಾದ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್‌ನ ಬಳಕೆ ಮಾಡುತ್ತದೆ.

ಇನ್ನು ಟೊಯೊಟಾ ಬ್ಯಾಡ್ಜ್ ಹೊಂದಿರುವ ಆವೃತ್ತಿಯು ಮಾರುತಿ ಸುಜುಕಿ EVX (Maruti Suzuki EVX) ನಂತರ ಸ್ವಲ್ಪಮಟ್ಟಿಗೆ ಬರುವ ನಿರೀಕ್ಷೆಯಿದೆ. ಈ EVX ಎಲೆಕ್ಟ್ರಿಕ್ ಎಸ್‍ಯುವಿಯ ಎರಡೂ ಆವೃತ್ತಿಗಳು ಗುಜರಾತ್‌ನಲ್ಲಿರುವ ಸುಜುಕಿಯ ಸೌಲಭ್ಯದಲ್ಲಿ ತಯಾರಿಸಲ್ಪಡುತ್ತವೆ. ಪ್ರಸ್ತುತ ಸುಜುಕಿ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲು ಮಾತ್ರ ಬಳಸುತ್ತಿರುವ ಗುಜರಾತ್‌ನಲ್ಲಿರುವ ಸ್ಥಾವರವನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಬಳಸಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Tuesday, August 29, 2023, 20:09 [IST]
English summary
Upcoming maruti suzuki cars swift dzire hybrid and evx details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+