ಭಾರೀ ಮೈಲೇಜ್‌ನ ಕಾರುಗಳನ್ನು ಬಿಡುಗಡೆಗೊಳಿಸಿ ಹೊಸ ಕ್ರಾಂತಿ ಮಾಡಲು ಸಜ್ಜಾಗುತ್ತಿದೆ ಮಾರುತಿ ಸುಜುಕಿ

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದೆ. ಮಾರುತಿ ಸುಜುಕಿ (Maruti Suzuki) ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರಯಾಣಿಕ ಕಾರು ಮಾರಾಟದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ.

ಮಾರುತಿ ಸುಜುಕಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಶ್ರೇಣಿಯನ್ನು ಪರಿಚಯಿಸುವ ಮೂಲಕ ಕಾರು ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಲು ಮುಂದಾಗಿದೆ. ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯ ಅಭಿವೃದ್ಧಿ ಹೊಂದುತ್ತಿರುವ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಇಂಡೋ-ಜಪಾನೀಸ್ ಕಾರು ದೈತ್ಯ ಈ ಅತ್ಯಾಕರ್ಷಕ ಹೊಸ ಮಾದರಿಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

Maruti Suzuki

ಮಾರುತಿ eVX: ಮಾರುತಿ ಸುಜುಕಿ ಮುಂಬರುವ eVX ಎಲೆಕ್ಟ್ರಿಕ್ ಎಸ್‍ಯುವಿಯೊಂದಿಗೆ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆಪ್ರವೇಶವನ್ನು ಮಾಡುತ್ತಿದೆ. ಇದನ್ನು ಕಾನ್ಸೆಪ್ಟ್ ರೂಪದಲ್ಲಿ ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲಾಯಿತು. ಈ ಮಾರುತಿ ಎಲೆಕ್ಟ್ರಿಕ್ ಕಾರು ನೋಡುಗರ ಗಮನಸೆಳೆಯಿತು. ಮಾರುತಿ eVX ಆವೃತ್ತಿಯು ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿಗಳಾದ ಟಾಟಾ ನೆಕ್ಸನ್, ಮಹೀಂದ್ರಾ ಎಕ್ಸ್‌ಯುವಿ400 ಮತ್ತು ಎಂಜಿ ಝಡ್‌ಎಸ್ ಇವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮಾರುತಿ ಇನ್ವಿಕ್ಟೋ: ಮಾರುತಿ ಸುಜುಕಿತನ್ನ ಹೊಸ ಮಾರುತಿ ಇನ್ವಿಕ್ಟೋ ಕಾರನ್ನು ಜುಲೈ 5 ರಂದು ಬಿಡುಗಡೆಗೊಳಿಸುವುದಾಗಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದು ಟೊಯೊಟಾ ಇನೋವಾ ಹೈಕ್ರಾಸ್‌ನ ಬ್ಯಾಡ್ಜ್-ಇಂಜಿನಿಯರಿಂಗ್ ಆವೃತ್ತಿಯಾದ ಇನ್ವಿಕ್ಟೋ ಪ್ರೀಮಿಯಂ ಎಂಪಿವಿಯಾಗಿದೆ. ಇದು ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ಮೇಲಿನ ಸ್ಥಾನದಲ್ಲಿರುತ್ತದೆ. ಇಇನ್ನು ಬಿಡುಗಡೆಯಾಗಲಿರುವ ಮಾರುತಿ ಇನ್ವಿಕ್ಟೋ ಎರಡೂವರೆ ತಿಂಗಳ ಅವಧಿಯಲ್ಲಿ ಬ್ರ್ಯಾಂಡ್‌ನ ಮೂರನೇ ಹೊಸ ಕಾರು ಆಗಿರುತ್ತದೆ.

Maruti Suzuki

ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್: ಹೊಸ ಮಾರುತಿ ಸ್ವಿಫ್ಟ್ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಬಾಹ್ಯ ಮತ್ತು ಒಳಭಾಗವನ್ನು ಹೊಂದಿರುತ್ತದೆ. ಈ ಕಾರು ವಿದೇಶದಲ್ಲಿ ಹಲವಾರು ಬಾರಿ ಪರೀಕ್ಷೆಗೆ ಒಳಗಾಗಿದೆ. ಈ ವರ್ಷದ ಅಂತ್ಯದ ಮೊದಲು ಅಥವಾ 2024 ರ ಆರಂಭದಲ್ಲಿ ಜಪಾನ್‌ನಲ್ಲಿ ಜಾಗತಿಕವಾಗಿ ಚೊಚ್ಚಲ ಪ್ರವೇಶ ಮಾಡಲಿದೆ. ಮುಂದಿನ ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ ಇದನ್ನು ಬಿಡುಗಡೆಗೊಳಿಸಬಹುದು.

ಈ ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು 1.2 ಲೀಟರ್ ಮೂರು-ಸಿಲಿಂಡರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಶ್ರೇಣಿಯನ್ನು ಸೇರುತ್ತದೆ. ಈ ಕಾರಿನ ಮಿಡ್ ಸ್ಪೆಕ್ ಮತ್ತು ಟಾಪ್-ಎಂಡ್ ರೂಪಾಂತರಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಅಸ್ತಿತ್ವದಲ್ಲಿರುವ ಗ್ಯಾಸೋಲಿನ್ ಎಂಜಿನ್ ಅನ್ನು ಮುಂದುವರೆಸಬಹುದು. ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್ ಬಾಕ್ಸ್ ಮತ್ತು ಐದು-ಸ್ಪೀಡ್ AMT ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

Maruti Suzuki

ನ್ಯೂ ಜನರೇಷನ್ ಮಾರುತಿ ಡಿಜೈರ್: ಸ್ವಿಫ್ಟ್‌ನಂತೆಯೇ, ನ್ಯೂ ಜನರೇಷನ್ ಡಿಜೈರ್ ಕಾರು ಒಳಗೆ ಮತ್ತು ಹೊರಗೆ ಪ್ರಮುಖ ಕೂಲಂಕುಷ ಪರೀಕ್ಷೆಗೆ ಒಳಪಡುತ್ತದೆ. ಇದು ಹ್ಯಾಚ್‌ಬ್ಯಾಕ್ ಸಹೋದರರೊಂದಿಗೆ ಹೋಲಿಕೆಗಳನ್ನು ಹೊಂದಿರುತ್ತದೆ. ಮೂರನೇ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ 2024 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. 2024ರ ಸ್ವಿಫ್ಟ್‌ನಲ್ಲಿ ಚೊಚ್ಚಲವಾಗಲಿರುವ ಅದೇ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿರುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳಲ್ಲಿ, ಹೊಸ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಗಳ ಸೇರ್ಪಡೆಯೊಂದಿಗೆ ಒಳಾಂಗಣವು ಹೆಚ್ಚು ದುಬಾರಿಯಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 35-40 ಕಿ.ಮೀ ನಷ್ಟು ಮೈಲೇಜ್ ಅನ್ನು ನೀಡಬಹುದು. ಇದು ಅತ್ಯಂತ ಉತ್ತಮ ಮೈಲೇಜ್ ಆಗಿರುತ್ತದೆ. ಇದರಿಂದ ಈ ಎರಡೂ ಕಾರುಗಳು ಗ್ರಾಹಕರ ಗಮನಸೆಳೆಬಹುದು.

Article Published On: Saturday, June 24, 2023, 15:02 [IST]
English summary
Upcoming maruti suzuki hybrid and electric cars details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+