ಬಹುನಿರೀಕ್ಷಿತ ಇನ್ವಿಕ್ಟೋ ಸ್ಟ್ರಾಂಗ್ ಹೈಬ್ರಿಡ್ & ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನಲ್ಲಿ ಮಾತ್ರ ಲಭ್ಯ: ಬಿಗ್ ಅಪ್‌ಡೇಟ್
ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಈ ವರ್ಷದ ಜುಲೈ ತಿಂಗಳು ಗಮನಾರ್ಹವಾಗಿದೆ. ಇದಕ್ಕೆ ಕಾರಣ ಮುಂದಿನ ತಿಂಗಳಲ್ಲಿ ಪ್ರಮುಖ ಮೂರು ಕಾರುಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಅವು ಯಾವುವು ಎಂದರೆ ಮೊದಲನೇಯದು ಮಾರುತಿ ಯ ಇನ್ವಿಕ್ಟೋ, ಹ್ಯುಂಡೈ ಎಕ್ಟ್ಸರ್ ಮತ್ತು ಕಿಯಾ ಸೆಲ್ಟಸ್ ಫೇಸ್‌ಲಿಫ್ಟ್.
ಮಾರುತಿ ಸುಜುಕಿಯು ಇನ್ವಿಕ್ಟೋ (Maruti Suzuki Invicto) ಎಂಪಿವಿಯನ್ನು ಜುಲೈ ಐದರಂದು ಮಾರುಕಟ್ಟೆಗೆ ತರಲಿದೆ. ಈ ಸಂಧರ್ಭದಲ್ಲಿ ಮಾರುತಿಯು ಇನ್ಚಿಕ್ಟೋ ವನ್ನು ಸಿಂಗಲ್ ಸ್ಟ್ರಾಂಗ್ ಹೈಬ್ರಿಡ್ ಇಂಜಿನ್ ಆಪ್ಷನ್‌ನಲ್ಲಿ ಲಬ್ಯವಿದೆ ಎಂದು ತಿಳಿದು ಬಂದಿದೆ. ನೆಕ್ಸಾ ಡೀಲರ್‌ಶಿಪ್ ಸದ್ಯಕ್ಕೆ ಈ ಇನ್ವಿಕ್ಟೋ ಸಿಂಗಲ್ ಸ್ಟ್ರಾಂಗ್ ಹೈಬ್ರಿಡ್ ಇಂಜಿನ್ ನ ಬುಕಿಂಗ್ ಅನ್ನು ಮಾಡಬಹುದಾಗಿದೆ.

ಇನ್ನು ಈ ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿ ಯು ಕಳೆದ ವರ್ಷವಷ್ಟೇ ಮಾರುಕಟ್ಟೆಗೆ ಕಾಲಿಟ್ಟ ಟೋಯೋಟಾ ಇನ್ನೋವಾ ಹೈಕ್ರಾಸ್‌ನ ರೀ ಬ್ಯಾಡ್ಜಿಂಗ್ ಆವೃತ್ತಿಯಾಗಿದೆ. ಆದರೆ ಮಾರುತಿ ಸುಜುಕಿ ಇನ್ವಿಕ್ಟೋವು, ಟೋಯೋಟಾ ಹೈಕ್ರಾಸ್ ನಲ್ಲಿ ಲಭ್ಯವಿರುವ ನಾನ್ ಹೈಬ್ರಿಡ್ ಪೆಟ್ರೋಲ್ ಇಂಜಿನ್ ಆಪ್ಷನ್ ನಲ್ಲಿ ಲಭ್ಯವಾಗುತ್ತಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗಿದೆ.
ಮಾರುಕಟ್ಟೆಗೆ ಸದ್ಯದಲ್ಲೇ ಕಾಲಿಡಲಿರುವ ಈಮಾರುತಿ ಸುಜುಕಿ ಇನ್ವಿಕ್ಟೋ ಕಾರು ಸಿಂಗಲ್ ಆಟೋಮ್ಯಾಟಿಕ್ ಟ್ರಾನ್ಮಿಷನ್ ಆಪ್ಷನ್ ನಲ್ಲೂ ಲಭ್ಯವಾಗಲಿದೆ. ಇದು ಮಾರುತಿ ಸುಜುಕಿ ಕಂಪನಿಯು ಇಲ್ಲಿಯವರೆಗೆ ಮಾರಿರುವ ಕಾರುಗಳಲ್ಲೇ ಬರೀ ಆಟೋಮ್ಯಾಟಿಕ್ ಟ್ರಾನ್ಮಿಷನ್‌ನಲ್ಲಿ ಮಾತ್ರ ಲಭ್ಯವಿರುವ ಮೊದಲ ಕಾರಾಗಿದೆ ಎಂಬುದು ಮುಖ್ಯ ವಿಚಾರ.
ಇನ್ನು ಇನ್ವಿಕ್ಟೋ ಕಾರು ಮಾರುತಿಯ ಫ್ಲ್ಯಾಗ್‌ಶಿಪ್ ಮಾಡೆಲ್ ಆಗಲಿದ್ದು ಈ ಕಾರಿನ ಬೆಲೆಯನ್ನು ಅಂದಾಜು ಮೊತ್ತ ಎಕ್ಸ್ ಶೋ ರೂಮ್ ಇಪ್ಪತ್ತ ನಾಲ್ಕು ಲಕ್ಷದಿಂದ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಕಂಪನಿಯ ಫ್ಲ್ಯಾಗ್‌ಶಿಪ್ ಕಾರು ಮಾರುತಿ ಗ್ರ್ಯಾಂಡ್ ವಿಟಾರಾ ಆಗಿದ್ದು ಇದರ ಬೆಲೆ ಎಕ್ಸ್ ಶೋ ರೂಮ್ 19.79 ಲಕ್ಷ ರೂಪಾಯಿಗಳಾಗಿದೆ.
ಮಾರುತಿ ಸುಜುಕಿ ಇನ್ವಿಕ್ಟೋ ವು ಈಗಿರುವ ಕಾರಾದ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾಗಿಂತ ಸುಮಾರು ನಾಲ್ಕು ಲಕ್ಷ ಹೆಚ್ಚು ಬೆಲೆ ಬಾಳಲಿದೆ. ಇದೇ ಕಾರಣದಿಂದ ಇನ್ವಿಕ್ಟೋ ಮಾರುತಿ ಸುಜುಕಿಯ ಪ್ರೀಮಿಯಂ ಕಾರು ಎಂಬ ಹಣೆ ಪಟ್ಟವನ್ನು ಹೊಂದಲಿದೆ ಎಂಬುದು ಪ್ರಮುಖ ಸಂಗತಿ.
ಇನ್ನು ಇನ್ವಿಕ್ಟೋ ವನ್ನು 11000 ಮತ್ತು 25000 ರೂ. ಗಳಂತೆ ನೆಕ್ಸಾ ಡೀಲರ್‌ಶಿಪ್‌ನಲ್ಲಿ ಮತ್ತು ವೆಬ್‌ಸೈಟ್‌ನಲ್ಲಿ ಪ್ರೀ ಬುಕ್ ಮಾಡಬಹುದಾಗಿದೆ. ಮುಂದಿನ ತಿಂಗಳು ಇದು ಲಾಂಚ್ ಆಗಲಿದ್ದು ಗ್ರಾಹಕರು ಇದನ್ನು ಹೇಗೆ ಸ್ವಾಗತಿಸಲಿದ್ದಾರೆ, ಈ ಕಾರು ಹೇಗೆ ಭಾರತೀಯರ ಮನ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications