Volkswagen ID.4: ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆ: ಹೊಸ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ಫೋಕ್ಸ್‌ವ್ಯಾಗನ್

ಜನಪ್ರಿಯ ಜರ್ಮನ್ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಕೇರಳದ ಕೊಚ್ಚಿ ನಗರದಲ್ಲಿ ತನ್ನ ವಾರ್ಷಿಕ ಬ್ರ್ಯಾಂಡ್ ಕಾನ್ಫರೆನ್ಸ್ 2023ರ ಸಮಾರಂಭದಲ್ಲಿ ID.4 ಎಲೆಕ್ಟ್ರಿಕ್ ಕ್ರಾಸ್‌ಒವರ್ ಅನ್ನು ಪ್ರದರ್ಶಿಸಿದೆ. ಕೊಚ್ಚಿಯಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಬ್ರ್ಯಾಂಡ್ ಸಮ್ಮೇಳನದಲ್ಲಿ ಕಂಡುಬಂದ ಫೋಕ್ಸ್‌ವ್ಯಾಗನ್ ID.4 ಟಾಪ್-ಸ್ಪೆಕ್ ಪರ್ಫಾಮೆನ್ಸ್-ಆಧಾರಿತ GTX ರೂಪಾಂತರವಾಗಿದೆ.

ಫೋಕ್ಸ್‌ವ್ಯಾಗನ್ ID.4 ಎಲೆಕ್ಟ್ರಿಕ್ ಕಾರಾನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಲವು ರೂಪಾಂತರಗಳಲ್ಲಿ ನೀಡಲಾಗುತ್ತದೆ, ಇದು ಫ್ಯೂರ್, ಫ್ಯೂರ್ ಪರ್ಫಾಮೆನ್ಸ್, ಪ್ರೊ ಮತ್ತು GTX ಆಗಿದೆ. ಈ ಎಲ್ಲಾ ರೂಪಾಂತರಗಳು ಸಿಂಗಲ್ ಮೋಟಾರ್ RWD ಸೆಟಪ್ ಅನ್ನು ಒಳಗೊಂಡಿದೆ. ಅಲ್ಲದೇ ಡ್ಯುಯಲ್-ಮೋಟರ್ AWD GTX ಅನ್ನು ಒಳಗೊಂಡಿದೆ. ಫೋಕ್ಸ್‌ವ್ಯಾಗನ್ ID.4 ಪ್ಯೂರ್ ಮತ್ತು ಪ್ಯೂರ್ ಪರ್ಫಾರ್ಮೆನ್ಸ್ ಎರಡೂ ರೂಪಾಂತರಗಳು ಸಿಂಗಲ್ ಚಾರ್ಜ್‌ನಲ್ಲಿ 346 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

Volkswagen ID.4

ಇದರಲ್ಲಿ ಪ್ಯೂರ್ ರೂಪಾಂತರವು 146 bhp ಪವರ್ ಮತ್ತು 220 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದು 10.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಪ್ಯೂರ್‌ನ ಬ್ಯಾಟರಿ ಪ್ಯಾಕ್ ಅನ್ನು 52kWh ಆಗಿದೆ. ಇನ್ನು ಪ್ಯೂರ್ ಪರ್ಫಾಮೆನ್ಸ್ ರೂಪಾಂತರದಲ್ಲಿ ಸಿಂಗಲ್ ಮೋಟಾರ್ RWD ಸೆಟಪ್ ಅನ್ನು ಹೊಂದಿದೆ.

ಇದು 168 bhp ಪವರ್ ಮತ್ತು 310Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ರೂಪಾಂತರವು 9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಪ್ಯೂರ್ ಪರ್ಫಾಮೆನ್ಸ್ ರೂಪಾಂತರವು ಅದೇ 52kWh ಬ್ಯಾಟರಿ ಪ್ಯಾಕ್ ಅನ್ನು ಸಹ ಹೊಂದಿದೆ. ಇನ್ನು ಫೋಕ್ಸ್‌ವ್ಯಾಗನ್ ID.4 ಪ್ರೊ ರೂಪಾಂತರವು ದೊಡ್ಡ 77kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

Volkswagen ID.4

ಇನ್ನು ಪ್ಯೂರ್ ಪರ್ಫಾಮೆನ್ಸ್ ರೂಪಾಂತರ 522 ಕಿ..ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಈ ID.4 ಪ್ರೊ ರೂಪಾಂತರದ ಮೋಟಾರ್ ಔಟ್‌ಪುಟ್ 201 bhp ಪವರ್ ಮತ್ತು 310 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ರೂಪಾಂತರವು 8.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ರೂಪಾಂತರದ ಟಾಪ್ ಸ್ಪೀಡ್ 160 ಕಿ.ಮೀ ಆಗಿದೆ.

ಇನ್ನು GTX ID.4 ಸಿಂಗಲ್ ಆಲ್-ವೀಲ್-ಡ್ರೈವ್ ಆವೃತ್ತಿಯಾಗಿದೆ ಮತ್ತು ಪ್ರೊನಂತೆಯೇ ಅದೇ 77kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ID.4 GTX ಸಿಂಗಲ್ ಚಾರ್ಜ್‌ನಲ್ಲಿ 482 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಫೋಕ್ಸ್‌ವ್ಯಾಗನ್ ID.4 GTX ನ ಡ್ಯುಯಲ್-ಮೋಟಾರ್ ಸೆಟಪ್ 295 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Volkswagen ID.4

ಫೋಕ್ಸ್‌ವ್ಯಾಗನ್ ID.4 GTX ರೂಪಂತರವು ಕೇವಲ 6.3 ಸೆಕೆಂಡುಗಳಲ್ಲಿ 0-100 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಈ ಮಾದರಿಯು 180 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಫೋಕ್ಸ್‌ವ್ಯಾಗನ್ ID.4 GTX ಮುಂಭಾಗ ಮತ್ತು ಹಿಂಭಾಗದಲ್ಲಿ ವಿಭಿನ್ನ LED ಲ್ಯಾಂಪ್ ಗಳು, GTX ಬ್ಯಾಡ್ಜ್‌ಗಳು ಮತ್ತು ಇತರ ವೈಶಿಷ್ಟ್ಯಗಳ ಜೊತೆಗೆ ಸ್ಪಾಯ್ಲರ್‌ನಂತಹ ಕೆಲವು ಹೆಚ್ಚು ಸ್ಪೋರ್ಟಿ ವಿನ್ಯಾಸ ಫೀಚರ್ಸ್ ಗಳನ್ನು ಪಡೆಯುತ್ತದೆ.

ID.4 GTX 12-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಕೆಂಪು ಕಾಂಟ್ರಾಸ್ಟ್ ಸ್ಟಿಚಿಂಗ್ ಮತ್ತು ಆಯ್ಕೆಯ ಸ್ಪೋರ್ಟ್ಸ್ ಸೀಟ್‌ಗಳೊಂದಿಗೆ ವಿಭಿನ್ನ ಒಳಾಂಗಣವನ್ನು ಸಹ ಹೊಂದಿದೆ. ಫೋಕ್ಸ್‌ವ್ಯಾಗನ್ ID.4 ಕಾರು ಭಾರತದಲ್ಲಿ ಈ ವರ್ಷ CBU ಆಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕ್ರಾಸ್ಒವರ್ ಸೀಮಿತ ಸಂಖ್ಯೆಯಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ. ಫೋಕ್ಸ್‌ವ್ಯಾಗನ್ ID.4 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಗರೆ, ಕಿಯಾ ಇವಿ6 ಎಲೆಕ್ಟ್ರಿಕ್ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, April 18, 2023, 14:15 [IST]
English summary
Volkswagen id4 crossover showcased in india range details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+