Volkswagen: ಭಾರೀ ಉಡುಗೊರೆಯೊಂದಿಗೆ ಗ್ರಾಹಕರಿಗೆ ಸಿಹಿಸುದ್ದಿ ತಂದ ಫೋಕ್ಸ್‌ವೋಗನ್‌: ಲಿಮಿಟೆಡ್‌ ಎಡಿಷನ್‌ ಲಾಂಚ್

ಪ್ರಖ್ಯಾತ ಕಾರು ತಯಾರಿಕಾ ಕಂಪನಿಯಾದಂತಹ ಫೋಕ್ಸ್‌ವೋಗನ್ (Volkswagen)‌ ಇತ್ತೀಚೆಗಷ್ಟೇ ಹೊಸ ಟೈಗುನ್‌ ಮತ್ತು ವಿರ್ಟಸ್‌ ಹೊಸ ವೇರಿಯಂಟ್‌ಗಳನ್ನು ರಿವೀಲ್‌ ಮಾಡಿತ್ತು. ಇದೀಗ ಫೋಕ್ಸ್‌ವೋಗನ್‌ ತನ್ನ ಟೈಗುನ್‌ ಮತ್ತು ವಿರ್ಟಸ್ ಜಿಟಿ ಎಡ್ಜ್ ಎಂಬ ಸ್ಪೆಷಲ್ ಎಡಿಷನ್‌ ಅನ್ನು 16.79 ಎಕ್ಸ್‌ ಶೋ ರೂಂ ಬೆಲೆಗೆ ಬಿಡುಗಡೆ ಮಾಡಿದೆ.

ಹೊಸ ಟೈಗುನ್‌ ಮತ್ತು ವಿರ್ಟಸ್ ಜಿಟಿ ಎಡ್ಜ್ ವೇರಿಂಯಂಟ್‌ನ ಬಿಡುಗಡೆಯೊಂದಿಗೆ ಜಿಟಿ ಆವೃತ್ತಿಯು ಗ್ರಾಹಕರಿಗೆ ಮತ್ತಷ್ಟು ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ ಎಂಬುದು ಇದರ ವಿಶೇಷ. ಇದರಿಂದ ಫೋಕ್ಸ್‌ವೋಗನ್‌ ಟೈಗುನ್‌ ಮತ್ತು ವಿರ್ಟಸ್ ಕಾರಿನ ಅಭಿಮಾನಿಗಳು ಸಂತೋಷಗೊಳ್ಳುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.

Volkswagen launches new Taigun, Virtus variants

ಕೊನೆಗೂ ಫೋಕ್ಸ್‌ವೋಗನ್‌,‌ ವಿರ್ಟಸ್ ಜಿಟಿ ಎಡ್ಜ್ 6 ಸ್ಪೀಡ್ ಮ್ಯಾನುವಲ್‌ ಗೇರ್‌ನಲ್ಲಿ ಲಭ್ಯವಾಗಲಿದ್ದು ಇದನ್ನು ಕೆಲವೇ ಕೆಲವು ಸಮಯದವರೆಗೆ ಎಕ್ಸ್‌ ಶೋ ರೂಮ್‌ ಪರಿಚಯಾತ್ಮಕ ಬೆಲೆ ಸುಮಾರು 16.89 ಲಕ್ಷ ರೂಪಾಯಿಗಳಿಗೆ ಲಭ್ಯವಾಗಲಿದೆ. ಬೇಗ ಬುಕ್‌ ಮಾಡುವವರಿಗೆ ಫೋಕ್ಸ್‌ವೋಗನ್‌,‌ ವಿರ್ಟಸ್ ಜಿಟಿ ಎಡ್ಜ್ ಬೆಲೆಗೆ ಸಿಗಲಿದೆ.

ಇನ್ನು ಫೋಕ್ಸ್‌ವೋಗನ್‌ ಟೈಗುನ್‌ ಬಗ್ಗೆ ನೋಡುವುದಾದರೆ ಇದೂ ಸಹ ಹೊಸ ಆವೃತ್ತಿಗಳಲ್ಲಿ ಬರುತ್ತಿದ್ದು GT DSG ಮತ್ತು GT PLUS ಮ್ಯಾನುವಲ್‌ ಟ್ರಾನ್ಸ್‌ಮಿಷನ್‌ ಎಂದು ತಿಳಿದು ಬಂದಿದೆ. ಇನ್ನು ವೋಕ್ಸ್‌ವೋಗನ್ ಟೈಗುನ್‌ ಜಿಟಿ ಎಡ್ಜನ್ನು ಸಹ ಪರಿಚಯಾತ್ಮಕ ಮೊತ್ತಕ್ಕೆ ಬಿಡುಗಡೆಗೊಳಿಸಲಾಗಿದ್ದು ಇದರ ಬೆಲೆ ಸುಮಾರು 16.79 - 17.79 ಲಕ್ಷ ಎಕ್ಸ್‌ ಶೋ ರೂಂ.

Volkswagen launches new Taigun, Virtus variants

ಕಾರು ಪ್ರೇಮಿಗಳು ತುಂಬಾ ದಿನಗಳ ಕಾಯುವಿಕೆ ಫೋಕ್ಸ್‌ವೋಗನ್‌ ಟೈಗುನ್‌ ಮತ್ತು ವಿರ್ಟಸ್ ಜಿಟಿ ಎಡ್ಜ್ ಎರಡೂ ಕಾರುಗಳು ಲಾಂಚ್‌ ಆಗುವುದರ ಮೂಲಕ ಕೊನೆಯಾಗಿದ್ದು ಎಲ್ಲಾ ಮಾಹಿತಿಗಳು ಸಹ ಲಭ್ಯವಾಗಿದೆ. ಇದರಿಂದ ಫೋಕ್ಸ್‌ವೋಗನ್‌ ಪ್ರೀಯರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಂತೆ ಆಗಿದೆ.

ಫೋಕ್ಸ್‌ವೋಗನ್‌ ವಿರ್ಟಸ್ ಜಿಟಿ ಎಡ್ಜ್ ಸಹ ಜಿಟಿ ಪ್ಲಸ್‌ ಡಿಎಸ್‌ಜಿ ಮತ್ತು ಜಿಟಿ ಮ್ಯಾನುವಲ್‌ ಪ್ಲಸ್ ಆವೃತ್ತಿಗಳಲ್ಲಿ ಬಿಡುಗಡೆಯಾಗಿದ್ದು, ಡೀಪ್‌ ಬ್ಲ್ಯಾಕ್‌ ಪರ್ಲ್‌ ಬಣ್ಣದಲ್ಲಿ ಬಿಡುಗಡೆಯಾಗಿದೆ. ವೋಕ್ಸ್‌ವೋಗನ್ ಟೈಗುನ್ ಜಿಟಿ ಎಡ್ಜ್‌ ಡೀಪ್ ಬ್ಲ್ಯಾಕ್‌ ಪರ್ಲ್‌ ಮತ್ತು ಕಾರ್ಬನ್ ಸ್ಟೀಲ್‌ ಗ್ರೇ ಮ್ಯಾಟ್‌ ಫಿನಿಶ್‌ ಬಣ್ಣದಲ್ಲಿ ಲಭ್ಯವಿದೆ.

ಇನ್ನು ಜಿಟಿ ಎಡ್ಜ್‌ ಲಿಮಿಟೆಡ್‌ ಎಡಿಷನ್‌ನ ಎರಡೂ ವಾಹನವು ಗ್ರಾಹಕರ ಆನ್‌ಲೈನ್‌ ಬುಕಿಂಗ್‌ನ ಆಧಾರದ ಮೇಲೆಗೆ ನಿರ್ಮಿಸಲಾಗುತ್ತದೆ. ಎರಡೂ ವಾಹನಗಳ ಬುಕಿಂಗನ್ನು ಗ್ರಾಹಕರು ಕಂಪನಿಯ ಆನ್‌ಲೈನ್‌ ಸೈಟ್‌ನಲ್ಲಿ ಮಾಡಬಹುದಾಗಿದೆ. ಕಾರುಗಳ ಡೆಲಿವರಿಯನ್ನು ಇದೇ ವರ್ಷದ ಜುಲೈನಲ್ಲಿ ಆರಂಭವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 8, 2023, 18:17 [IST]
English summary
Volkswagen launches new taigun virtus variants
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+