ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1 ಲಕ್ಷಕ್ಕೂ ಹೆಚ್ಚು ಡಿಸ್ಕೌಂಟ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಫೋಕ್ಸ್‌ವ್ಯಾಗನ್ ಕಾರುಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಉತ್ತಮ ಅವಕಾಶವಾಗಿದೆ. ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯ ಮೇಲೆ ಬರೊಬ್ಬರಿ ರೂ. 1.40 ಲಕ್ಷಗಳವರೆಗೆ ಡಿಸ್ಕೌಂಟ್ ಅನ್ನು ನೀಡಲಾಗುತ್ತಿದೆ.

ಇನ್ನು ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನಲ್ಲಿ 20 ಲಕ್ಷ ರೂಪಾಯಿಗಳವರೆಗೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಇನ್ನು ಫೋಕ್ಸ್‌ವ್ಯಾಗನ್ ಟಿಗ್ವಾನ್ ಕಾರಿನ ಮೇಲೆಯು ರಿಯಾಯಿತಿಗಳನ್ನು ನೀಡುತ್ತಿದೆ. ಈ ರಿಯಾಯಿತಿಗಳು ಎಸ್‍ಯುವಿಗಳು ಮತ್ತು ಸೆಡಾನ್‌ಗಳ 2022 ಮತ್ತು 2023 ಮಾದರಿ ವರ್ಷಗಳಲ್ಲಿ ಮತ್ತು BS6 ಹಂತ 2-ಕಂಪ್ಲೈಂಟ್ ಮಾಡೆಲ್‌ಗಳಲ್ಲಿ ಅನ್ವಯಿಸುತ್ತವೆ. ಈ ಮೂಲಕ ಫೋಕ್ಸ್‌ವ್ಯಾಗನ್ ಕಂಪನಿಯು ತಮ್ಮ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.

Volkswagen tiguan

ಫೋಕ್ಸ್‌ವ್ಯಾಗನ್ ಟಿಗ್ವಾನ್: ಫೋಕ್ಸ್‌ವ್ಯಾಗನ್ ಟಿಗ್ವಾನ್ ಕಾರಿನ ಮೇಲೆ ರೂ. 30,000 ವರೆಗಿನ ರಿಯಾಯಿತಿಗಳನ್ನು ನೀಡುತ್ತದೆ. ಇದು 2023 ಅಲ್ಲದ BS6 ಹಂತ 2-ಕಾಂಪ್ಲೈಂಟ್ ಮಾಡೆಲ್‌ಗಳಲ್ಲಿ ಮಾತ್ರ ಲಭ್ಯವಿದೆ. ಖರೀದಿಯನ್ನು ಅಂತಿಮಗೊಳಿಸುವಾಗ ಖರೀದಿದಾರರು ಹೆಚ್ಚಿನ ರಿಯಾಯಿತಿಗಳನ್ನು ಕೇಳಬಹುದು ಎಂದು ವರದಿಗಳಾಗಿದೆ. ಈ ರಿಯಾಯಿತಿಗಳು ಡೀಲರ್‌ನಿಂದ ಡೀಲರ್‌ಗೆ ಬದಲಾಗಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಫೋಕ್ಸ್‌ವ್ಯಾಗನ್ ಡೀಲರ್‌ನೊಂದಿಗೆ ಪರಿಶೀಲಿಸುವುದು ಸೂಕ್ತವಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್: 2022ರ ಟೈಗನ್ ಮಾದರಿ ವರ್ಷಕ್ಕೆ , ರೂಪಾಂತರವನ್ನು ಅವಲಂಬಿಸಿ ರೂ.65,000 ದಿಂದ ರೂ.1.40 ಲಕ್ಷದವರೆಗೆ ರಿಯಾಯಿತಿ ನೀಡುತ್ತಿದ್ದಾರೆ. ಟೈಗನ್ ಎಸ್‍ಯುವಿ ಟಾಪ್‌ಲೈನ್ ಮ್ಯಾನ್ಯುವಲ್ ರೂಪಾಂತರದಲ್ಲಿ ಅತ್ಯಧಿಕ ರಿಯಾಯಿತಿ ಲಭ್ಯವಿದ್ದರೆ, ಕಂಫರ್ಟ್‌ಲೈನ್ ಮ್ಯಾನ್ಯುವಲ್ ರೂಪಾಂತರವು ಕಡಿಮೆ ರಿಯಾಯಿತಿಯನ್ನು ಪಡೆಯುತ್ತದೆ. 2023ರ ಮಾಡೆಲ್ ವರ್ಷದ ಟೈಗನ್ ಎಸ್‍ಯುವಿಯ ಮೇಲೆ 85,000 ರೂ.ವರೆಗಿನ ರಿಯಾಯಿತಿಯನ್ನು ನೀಡುತ್ತಿದೆ.

Volkswagen taigun

ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯ ಟಾಪ್‌ಲೈನ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ರೂಪಾಂತರಗಳಲ್ಲಿ ಹೆಚ್ಚಿನ ರಿಯಾಯಿತಿ ಲಭ್ಯವಿದೆ. ಇದಲ್ಲದೆ, BS6 ಹಂತ 2-ಕಂಪ್ಲೈಂಟ್ ಮಾಡೆಲ್‌ಗಳಿಗಾಗಿ, ಫೋಕ್ಸ್‌ವ್ಯಾಗನ್ ರೂ 65,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇದು ಭಾರತದಲ್ಲಿ ಫೋಕ್ಸ್‌ವ್ಯಾಗನ್‌ನಿಂದ ಕೈಗೆಟುವ ದರದ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಈ ಎಸ್‍ಯುವಿ 1.0 ಲೀಟರ್, ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಫೋಕ್ಸ್‌ವ್ಯಾಗನ್ ವರ್ಟಸ್: ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ಮೇಲೆ ಅತ್ಯಧಿಕ ರಿಯಾಯಿತಿ 1.20 ಲಕ್ಷದವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಈ ಕಾರಿನ ಕಂಫರ್ಟ್‌ಲೈನ್ ಮ್ಯಾನುವಲ್ ಮತ್ತು ಹೈಲೈನ್ ಮ್ಯಾನುವಲ್ ರೂಪಾಂತರಗಳ ಮೇಲೆಯು ರಿಯಾಯಿತಿ ನೀಡಲಾಗಿದೆ. ಇನ್ನು ವರ್ಟಸ್ GT Plus ಆಟೋಮ್ಯಾಟಿಕ್ ರೂಪಾಂತರಕ್ಕೆ ರೂ.20,000 ರಿಯಾಯಿತಿಯನ್ನು ನೀಡಲಾಗಿದೆ.

Volkswagen virtus

ಮತ್ತೊಂದೆಡೆ, 2023ರ ಮಾದರಿ ವರ್ಷದ ವರ್ಟಸ್ ಕಾರಿನ ಮೂರು ರೂಪಾಂತರಗಳಲ್ಲಿ 85,000 ರೂಗಳವರೆಗೆ ರಿಯಾಯಿತಿಗಳನ್ನು ಪಡೆಯುತ್ತದೆ. ಇನ್ನು Comforline ಮ್ಯಾನುಯಲ್, ಟಾಪ್‌ಲೈನ್ ಮ್ಯಾನುಯಲ್ ಮತ್ತು ಟಾಪ್‌ಲೈನ್ ಆಟೋಮ್ಯಾಟಿಕ್ ರೂಪಾಂತರಗಳಿಗೆ ರಿಯಾಯಿತಿಗಳನ್ನು ನೀಡಲಾಗುತ್ತಎ. ಇನ್ನು ಫೋಕ್ಸ್‌ವ್ಯಾಗನ್ BS6 ಹಂತ-2 ಕಂಪ್ಲೈಂಟ್ ಮಾಡೆಲ್‌ಗಳಲ್ಲಿ 55,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ನೀವು ಮರೆಯದಿರಿ.

More from DriveSpark

Article Published On: Thursday, June 22, 2023, 18:19 [IST]
English summary
Volkswagen tiguan virtus taigun discounts of over rs 1 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+