Volkswagen Virtus: ಬಹುನೀರಿಕ್ಷಿತ ಪೋಕ್ಸ್‌ವ್ಯಾಗನ್ ವರ್ಟಸ್ ಜಿಟಿ ಪ್ಲಸ್ MT, ಜಿಟಿ ಎಡ್ಜ್ ರೂಪಾಂತರಗಳು ಬಹಿರಂಗ
ಭಾರತದಲ್ಲಿ 'ಪೋಕ್ಸ್‌ವ್ಯಾಗನ್' ತನ್ನ ವರ್ಟಸ್ ಸೆಡಾನ್ ನ ಜಿಟಿ ಪ್ಲಸ್ MT, ಜಿಟಿ ಎಡ್ಜ್ ರೂಪಾಂತರಗಳನ್ನು ಅನಾವರಣಗೊಳಿಸಿದೆ. 'ಜಿಟಿ ಪ್ಲಸ್ ಎಂಟಿ' ಮ್ಯಾನುವಲ್ ಟಾಪ್ ಎಂಡ್ ವೇರಿಯೆಂಟ್ ಆಗಿದ್ದು, 'ಜಿಟಿ ಎಡ್ಜ್' ಸಾಕಷ್ಟು ಆಕರ್ಷಕ ಸ್ಟೈಲಿಂಗ್ ಅಂಶಗಳನ್ನು ಹೊಂದಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಪೋಕ್ಸ್‌ವ್ಯಾಗನ್ ವರ್ಟಸ್ ಜಿಟಿ ಪ್ಲಸ್ ಎಂಟಿ ರೂಪಾಂತರದಲ್ಲಿ 7 ಸ್ವೀಡ್ DSG ಟ್ವಿನ್ ಕ್ಲಚ್ ಗೇರ್‌ಬಾಕ್ಸ್ ಅನ್ನು 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯಾಗಿ ಬದಲಾಯಿಸಲಾಗಿದ್ದು, ಫ್ರಂಟ್ ವೀಲ್ ಗೆ ಪವರ್ ವರ್ಗಾಯಿಸುತ್ತದೆ. ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೇ, ವರ್ಟಸ್ ಜಿಟಿ ಪ್ಲಸ್ ಎಂಟಿ 1.5 ಲೀಟರ್ ಟರ್ಬೋಚಾರ್ಜ್ಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು,147.5 bhp ಪವರ್, 250 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಪೋಕ್ಸ್‌ವ್ಯಾಗನ್ ಕಂಪನಿ, ಈ ವರ್ಟಸ್ ಜಿಟಿ ಪ್ಲಸ್ ಮ್ಯಾನುವಲ್ ರೂಪಾಂತರದಲ್ಲಿಯು 16 ಇಂಚಿನ ಅಲಾಯ್ ವೀಲ್ಸ್ ನೀಡುವುದನ್ನು ಮುಂದುವರಿಸಿದ್ದು, ಇದು 205/55 R16 ಅಳತೆಯ ಟೈಯರ್ಸ್ ಹೊಂದಿದೆ. ಅಲ್ಲದೆ, ಹೊರಭಾಗದಿಂದಲೂ ನೋಡುವುದಕ್ಕೆ ಈ ಕಾರು, ಆಕರ್ಷಕವಾಗಿದ್ದು, ರೇರ್ ಬ್ರೇಕ್ ಕ್ಯಾಲಿಪರ್ಸ್, ಅತ್ಯಾಧುನಿಕ ಗ್ರಿಲ್ ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಪೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್ ನ ಜಿಟಿ ಪ್ಲಸ್ ಎಂಟಿ ರೂಪಾಂತರದ ಬಣ್ಣದ ಆಯ್ಕೆ ಬಗ್ಗೆ ಮಾತನಾಡುವುದಾದರೆ, ಇದು ಕಾರ್ಬನ್ ಸ್ಟೀಲ್ ಗ್ರೇ ರೂಫ್ ಒಳಗೊಂಡಿರುವ ಡುಯಲ್ ಟೋನ್ ಪೇಂಟ್ ಸ್ಕೀಮ್‌ನಲ್ಲಿ ಖರೀದಿಗೆ ಲಭ್ಯವಿದೆ. ಇದಕ್ಕೆ ಪುಷ್ಟಿ ನೀಡುವಂತೆ ವರ್ಟಸ್ ಜಿಟಿ ಪ್ಲಸ್ ಎಂಟಿ ರೂಪಾಂತರವನ್ನು ಡೀಪ್ ಬ್ಲ್ಯಾಕ್ ಎಂಬ ಹೊಸ ಬಣ್ಣದ ಆಯ್ಕೆಯಲ್ಲಿ ಪ್ರದರ್ಶಿಸಿದೆ.

ಈ ಕಾರಿನ ಒಳಭಾಗದ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಇದು ರೇವ್ ಗ್ಲಾಸಿ ಮತ್ತು ಡಾರ್ಕ್ ರೆಡ್ ಗ್ಲೋಸಿ ಎಂಬ ಎರಡು ಡೆಕೋರ್ ಥೀಮ್ ಹೊಂದಿದೆ. ಇದಿಷ್ಟೇ ಅಲ್ಲದೆ, 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8 ಇಂಚಿನ ಡಿಜಿಟಲ್ ಡ್ರೈವರ್ಸ್ ಕಾಕ್‌ಪಿಟ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಹಾಗೂ ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದೆ.
ಇನ್ನು, ಕೊಚ್ಚಿಯಲ್ಲಿ ನಡೆದ ತನ್ನ ವಾರ್ಷಿಕ ಸಮಾರಂಭದಲ್ಲಿ ಪೋಕ್ಸ್‌ವ್ಯಾಗನ್, ಜಿಟಿ ಪ್ಲಸ್ ಎಂಟಿ ರೂಪಾಂತರವನ್ನು ಮಾತ್ರವಲ್ಲದೆ, ಜಿಟಿ ಎಡ್ಜ್ ವೇರಿಯೆಂಟ್ ಅನ್ನು ಅನಾವರಣ ಮಾಡಿದೆ. ಇದು ಫ್ರಂಟ್, ರೇರ್ ಬಂಪರ್ಸ್. ಜೊತೆಗೆ ಫ್ರಂಟ್ ಫೆಂಡರ್‌ನಲ್ಲಿ GT ಬ್ಯಾಡ್ಜಿಂಗ್ ಅನ್ನು ಹೊಂದಿದ್ದು, ರೆಡ್ ಬ್ರೇಕ್ ಕ್ಯಾಲಿಪರ್ಸ್, 16 ಇಂಚಿನ 'ರೇಜರ್' ಅಲಾಯ್ ವೀಲ್ಸ್, ಅಲ್ಯೂಮಿನಿಯಂ ಪೆಡಲ್ಸ್, ಲೆಥೆರೆಟ್ ಅಪ್ಹೋಲ್‌ಸ್ಟರ್ಡ್ ಸೀಟ್‌ಗಳಲ್ಲಿ ರೆಡ್ ಕಾಂಟ್ರಾಸ್ಟ್ ಸ್ಟಿಚಿಂಗ್ ಅನ್ನು ಒಳಗೊಂಡಿದೆ.

ಪೋಕ್ಸ್‌ವ್ಯಾಗನ್ ಜಿಟಿ ಪ್ಲಸ್ ಮ್ಯಾನುವಲ್ ಹಾಗೂ ಜಿಟಿ ಎಡ್ಜ್ ರೂಪಾಂತರಗಳಿಗೆ ಬುಕಿಂಗ್ ಮೇ ತಿಂಗಳ ಮಧ್ಯ ಭಾಗದಲ್ಲಿ ಪ್ರಾರಂಭವಾಗುವ ನೀರಿಕ್ಷೆ ಇದ್ದು, ಬಹುತೇಕ ಜೂನ್ ತಿಂಗಳಲ್ಲಿ ಬಿಡುಗಡೆಯಾಗಬಹುದು. ಬೆಲೆ ವಿಚಾರವಾಗಿ ಕಂಪನಿ ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಹಿಂದಿನ ಮಾದರಿಗಳಂತೆ ಸುಮಾರು ರೂ.11 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು.
ಒಟ್ಟಾರೆಯಾಗಿ ಜರ್ಮನಿಯ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಫೋಕ್ಸ್‌ವ್ಯಾಗನ್ ಕಂಪನಿ, ವರ್ಟಸ್ ಜಿಟಿ ಪ್ಲಸ್ ಎಂಟಿ ಹಾಗೂ ಜಿಟಿ ಎಡ್ಜ್ ರೂಪಾಂತರದ ಜೊತೆಗೆ ID.4 ಎಲೆಕ್ಟ್ರಿಕ್ ಕ್ರಾಸ್‌ಒವರ್ ಕಾರನ್ನು ಪ್ರದರ್ಶಿಸಿದೆ. ಇವೆಲ್ಲವನ್ನು ಗಮನಿಸಿದಾಗ ಫೋಕ್ಸ್‌ವ್ಯಾಗನ್, ದೇಶೀಯ ಕಾರು ಮಾರುಕಟ್ಟೆಯಲ್ಲಿ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂಬುದು ಗೊತ್ತಾಗುತ್ತದೆ.


Click it and Unblock the Notifications








