1.75 ಕೋಟಿ ರೂ.ಗೆ ಮಹೀಂದ್ರಾ XUV400 EV ಖರೀದಿಸಿದ ವ್ಯಕ್ತಿ ಯಾರು... ಹರಾಜಿನ ಹಣ ಏನಾಯ್ತು?

ಮಹೀಂದ್ರಾ XUV400 ಭಾರತದ ಬಹುನಿರೀಕ್ಷಿತ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಬುಕಿಂಗ್‌ಗಳು ಪ್ರಾರಂಭವಾಗಿರುವ ಈ ಕಾರಿಗೆ ದಿನ ಕಳೆದಂತೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ XUV400 ಎಲೆಕ್ಟ್ರಿಕ್ SUV ಅನ್ನು ಹರಾಜಿನಲ್ಲಿ ಮಾರಾಟ ಮಾಡುವುದಾಗಿ ಮಹೀಂದ್ರಾ ಈ ಹಿಂದೆ ಘೋಷಿಸಿತ್ತು.

ಅದರಂತೆ ಹರಾಜಿನಿಂದ ಬಂದ ಹಣವನ್ನು ಚಾರಿಟಿಗೆ ನೀಡಲು ಉದ್ದೇಶಿಸಲಾಗಿತ್ತು. ಈಗ, ಮಹೀಂದ್ರಾ ವಿಶೇಷ ಆವೃತ್ತಿಯ XUV400 ಸಾರ್ವಜನಿಕ ಸಮಾರಂಭದಲ್ಲಿ 1.75 ಕೋಟಿ ರೂ.ಗೆ ಹರಾಜು ಮಾಡಲಾಗಿದೆ. ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೈದರಾಬಾದ್ ಮೂಲದ ಕರುಣಾಕರ್ ಕುಂದವರಮ್ ಅವರಿಗೆ 1 ಕೋಟಿ 75 ಸಾವಿರ ರೂ.ಗೆ ಮಹೀಂದ್ರಾ XUV400 ವಿಶೇಷ ಆವೃತ್ತಿಯನ್ನು ಹಸ್ತಾಂತರಿಸಿದರು. ಸಾಮಾನ್ಯ ಮಾದರಿಗೆ ಹೋಲಿಸಿದರೆ, EV ಕೆಲವು ಮಾರ್ಪಾಡುಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.

 1.75 ಕೋಟಿ ರೂ.ಗೆ ಮಹೀಂದ್ರಾ XUV400 EV ಖರೀದಿಸಿದ ವ್ಯಕ್ತಿ ಯಾರು... ಹರಾಜಿನ ಹಣ ಏನಾಯ್ತು?

ಮಹೀಂದ್ರಾದ ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಸ್ ಮತ್ತು ಫ್ಯಾಷನ್ ಡಿಸೈನರ್ ರಿಮ್ಸಿಮ್ ದಾದು ಅವರು ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ವಿನ್ಯಾಸಗೊಳಿಸಿದ್ದಾರೆ. ಆನಂದ್ ಮಹೀಂದ್ರಾ ಅವರು ವಿಶೇಷ ಆವೃತ್ತಿಯ ಎಕ್ಸ್‌ಯುವಿ400 ಎಲೆಕ್ಟ್ರಿಕ್‌ನ ಕೀಯನ್ನು ಹೈದರಾಬಾದ್ ಮೂಲದ ಕರುಣಾಕರ್ ಕುಂದವರಂ ಅವರಿಗೆ ಹಸ್ತಾಂತರಿಸಿದರು. ಹರಾಜಿನಿಂದ ಬರುವ ಹಣವನ್ನು ಮಹೀಂದ್ರಾ ರೈಸ್ ಸಸ್ಟೈನಬಿಲಿಟಿ ಚಾಂಪಿಯನ್ ಪ್ರಶಸ್ತಿ ಮತ್ತು ಸಾಮಾಜಿಕ ಸೇವೆಗಳ ವಿಜೇತರಿಗೆ ವಿತರಿಸಲಾಗುವುದು ಎಂದು ಮಹೀಂದ್ರಾ ಹೇಳಿದೆ.

1.75 ಕೋಟಿ ರೂ.ಗೆ ಹರಾಜಾಗಿರುವ ಈ ವಿಶೇಷ ಆವೃತ್ತಿಯು ಸ್ಟ್ಯಾಂಡರ್ಡ್ ಮಾಡೆಲ್‌ಗಳಂತೆಯೇ ಬ್ಯಾಟರಿ ಪ್ಯಾಕ್ ಮತ್ತು ಶ್ರೇಣಿಯನ್ನು ಹೊಂದಿದೆ. ಮೊದಲ ನೋಟದಲ್ಲೇ ಈ ಕಾರು ವಿಶೇಷ ಆವೃತ್ತಿಯಾಗಿರುವುದನ್ನು ತಿಳಿಯಬಹುದು, ಈ XUV400 EV ಅನ್ನು ವಿಶೇಷ ನೀಲಿ ಬಣ್ಣದ ಆಯ್ಕೆಯಲ್ಲಿ ನಿರ್ಮಿಸಲಾಗಿದೆ. SUV ಗೆ ಕಾಪರ್ ಆಕ್ಸೆಂಟ್‌ಗಳು, ಬ್ಲಾಕ್ ಅಲಾಯ್ ವೀಲ್‌ಗಳು, ಕಾಪರ್ ರೂಫ್ ಮತ್ತು ಕಾರಿನಾದ್ಯಂತ ರಿಮ್ಸಿಮ್ ದಾದು x ಬೋಸ್ ಬ್ರ್ಯಾಂಡಿಂಗ್‌ನಂತಹ ಕೆಲವು ವಿಶೇಷ ವೈಶಿಷ್ಟ್ಯಗಳನ್ನು ನೋಡಬಹುದು.

 1.75 ಕೋಟಿ ರೂ.ಗೆ ಮಹೀಂದ್ರಾ XUV400 EV ಖರೀದಿಸಿದ ವ್ಯಕ್ತಿ ಯಾರು... ಹರಾಜಿನ ಹಣ ಏನಾಯ್ತು?

ಈ ಬ್ರ್ಯಾಂಡಿಂಗ್ ಕಾರಿನ ಒಳಭಾಗದಲ್ಲಿಯೂ ಕಾಣಿಸಿಕೊಳ್ಳುತ್ತದೆ. ವಿಜೇತರು ಪ್ರೀಮಿಯಂ ಡಫಲ್ ಬ್ಯಾಗ್, ಕೀ ಹೋಲ್ಡರ್‌ಗಳು ಮತ್ತು ಸೀಟ್ ಕವರ್‌ಗಳನ್ನು ಒಳಗೊಂಡಂತೆ ಹಲವಾರು ಟೂಲ್‌ಗಳನ್ನು ಸ್ವೀಕರಿಸುತ್ತಾರೆ. ಕಾಸ್ಮೆಟಿಕ್ ನವೀಕರಣಗಳನ್ನು ಬಿಟ್ಟರೆ, ವಾಹನವು ಯಾವುದೇ ಪ್ರಮುಖ ಯಾಂತ್ರಿಕ ಮಾರ್ಪಾಡುಗಳನ್ನು ಪಡೆದಿಲ್ಲ. ಉಳಿದಂತೆ ಮಹೀಂದ್ರಾ 2023 ಗಣರಾಜ್ಯೋತ್ಸವದಂದು ಹೊಸ XUV400 ಎಲೆಕ್ಟ್ರಿಕ್ ಕಾರಿಗಾಗಿ ಬುಕ್ಕಿಂಗ್‌ಗಳನ್ನು ಪ್ರಾರಂಭಿಸಿದೆ. ಕೇವಲ ನಾಲ್ಕು ದಿನಗಳಲ್ಲಿ 10,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸಂಗ್ರಹಿಸಿದೆ.

ಬುಕ್ಕಿಂಗ್ ಮಾಡಿದ ನಂತರ, ಎಲೆಕ್ಟ್ರಿಕ್ ಎಸ್‌ಯುವಿಯನ್ನು ಡೆಲಿವರಿ ಪಡೆಯಲು ಗ್ರಾಹಕರು ಸುಮಾರು ಆರು ತಿಂಗಳು ಕಾಯಬೇಕಾಗುತ್ತದೆ ಎಂದು ವರದಿಯಾಗಿದೆ. ಮಹೀಂದ್ರಾದ ಎಲೆಕ್ಟ್ರಿಕ್ ಕಾರು ಪ್ರಸ್ತುತ EC ಮತ್ತು EL ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಪ್ರಸ್ತುತ EV ಎಕ್ಸ್ ಶೋ ರೂಂ ಬೆಲೆ 15.99 ಲಕ್ಷ ರೂ.ಗಳಿಂದ 18.99 ಲಕ್ಷ ರೂ. ಇದೆ. ಇದು ಪರಿಚಯಾತ್ಮಕ ಬೆಲೆಯಾಗಿದ್ದು, ಶೀಘ್ರದಲ್ಲೇ ಬೆಲೆ ಪರಿಷ್ಕರಣೆಯಾಗಲಿದೆ ಎಂದು ಮಹೀಂದ್ರಾ ಸುಳಿವು ನೀಡಿದೆ.

 1.75 ಕೋಟಿ ರೂ.ಗೆ ಮಹೀಂದ್ರಾ XUV400 EV ಖರೀದಿಸಿದ ವ್ಯಕ್ತಿ ಯಾರು... ಹರಾಜಿನ ಹಣ ಏನಾಯ್ತು?

XUV400 EC ರೂಪಾಂತರಕ್ಕಾಗಿ 34.5 kWh ಬ್ಯಾಟರಿ ಪ್ಯಾಕ್ ಮತ್ತು 375 ಕಿ.ಮೀ ವ್ಯಾಪ್ತಿಯನ್ನು ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಎರಡನೇ EL ರೂಪಾಂತರವು 39.4 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು 456 ಕಿ.ಮೀ ವ್ಯಾಪ್ತಿಯನ್ನು ನೀಡುವುದಾಗಿ ಕಂಪನಿ ಕ್ಲೈಮ್ ಮಾಡಿದೆ. XUV400 EV ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದ್ದು ಇದು 150 bhp ಪವರ್ ಮತ್ತು 310 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ SUV ಕೇವಲ 8.3 ಸೆಕೆಂಡುಗಳಲ್ಲಿ 100 kmph ವೇಗವನ್ನು ತಲುಪುವುದಾಗಿ ಕಂಪನಿ ಹೇಳಿಕೊಂಡಿದೆ. ಗರಿಷ್ಠ 150 kmph ವೇಗವನ್ನು ತಲುಪುವ ಸಾಮರ್ಥ್ಯವನ್ನು ಇದಕ್ಕೆ ನೀಡಲಾಗಿದೆ. 50kW DC ಫಾಸ್ಟ್ ಚಾರ್ಜರ್ ಬಳಸಿ 50 ನಿಮಿಷಗಳಲ್ಲಿ ಬ್ಯಾಟರಿಯನ್ನು ಶೇ 80 ರಷ್ಟು ಚಾರ್ಜ್ ಮಾಡಬಹುದು. 7.2kW ಅಥವಾ 3.3kW AC ಚಾರ್ಜರ್ ಕ್ರಮವಾಗಿ 6 ​​ಗಂಟೆ 30 ನಿಮಿಷಗಳು ಮತ್ತು 13 ಗಂಟೆಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತವೆ.

Article Published On: Saturday, February 25, 2023, 11:30 [IST]
English summary
What did mahindra company do with the xuv400 auction money
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+