ಬಿಡುಗಡೆಗೆ ಸಜ್ಜಾಗಿರುವ 2023 ಹೋಂಡಾ ಸಿಟಿ ಫೇಸ್‌ಲಿಫ್ಟ್‌ನಲ್ಲಿ ಇವೆಲ್ಲವನ್ನು ನಿರೀಕ್ಷಿಸಬಹುದು!

ಕಳೆದ ಎರಡು ದಶಕಗಳಿಂದ ಹೋಂಡಾ ಕಂಪನಿಯ ಪ್ರಮುಖ ಉತ್ಪನ್ನವಾದ ಸಿಟಿ ಸೆಡಾನ್ ಮಾದರಿಯು ಕಾಲ ಕಾಲಕ್ಕೆ ಹಲವು ಬದಲಾವಣೆಗಳನ್ನು ಪಡೆಯುತ್ತಾ ಇಂದಿಗೂ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ದಾಖಲಿಸುತ್ತಿದೆ. ಇದೀಗ ಹೋಂಡಾ ಕಂಪನಿಯು ಹೊಸ 2023 ಹೋಂಡಾ ಸಿಟಿ ಫೇಸ್‌ಲಿಫ್ಟ್ ಅನ್ನು ಈ ವರ್ಷದ ಮಾರ್ಚ್ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಈಗಾಗಲೇ ಇತರ ಬ್ರಾಂಡ್‌ಗಳು ಸೆಡಾನ್ ವಿಭಾಗದಲ್ಲಿ ಪ್ರೀಮಿಯಂ ಹಾಗೂ ಅತ್ಯಾಧುನಿಕ ತಂತ್ರಜ್ಙಾನ ಹೊಂದಿರುವ ಮಾದರಿಗಳನ್ನು ಪರಿಚಯಿಸುತ್ತಿರುವುದು ಹೋಂಡಾ ಸಿಟಿ ಫೇಸ್‌ಲಿಫ್ಟ್‌ ಆಗಮನಕ್ಕೆ ಕಾರಣವಾಗಿದೆ. ಸ್ಕೋಡಾ ಸ್ಲಾವಿಯಾ, ಹ್ಯುಂಡೈ ವೆರ್ನಾದಂತಹ ವಾಹನಗಳನ್ನು ಪೈಪೋಟಿಯಾಗಿ ತೆಗೆದುಕೊಂಡಿರುವ ಹೋಂಡಾದವರು ಮುಂಬರುವ ಸಿಟಿ ಸೆಡಾನ್ ಅನ್ನು ಅತ್ಯಾಧುನಿಕ ತಂತ್ರಜ್ಙಾನದೊಂದಿಗೆ ಪರಿಚಯಿಸಲು ಸಜ್ಜಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಹೋಂಡಾ ಸಿಟಿ ಸೆಡಾನ್‌ನಿಂದ ಏನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹೋಂಡಾ ಕಾರ್ಸ್ ಇಂಡಿಯಾ ಸಿಟಿ ಮಧ್ಯಮ ಗಾತ್ರದ ಸೆಡಾನ್‌ಗಾಗಿ ಮಿಡ್-ಲೈಫ್ ಫೇಸ್‌ಲಿಫ್ಟ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಐದನೇ ತಲೆಮಾರಿನ ಹೋಂಡಾ ಸಿಟಿಯನ್ನು ಜುಲೈ 2020 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈಗ ಕಾಲಕ್ಕನುಗುಣವಾದ ನವೀಕರಣದೊಂದಿಗೆ ಹೊಂಡಾ ಸಿಟಿ ಆಕರ್ಷಕ ಬದಲಾವಣೆಗಳು ಮತ್ತು ಕೆಲವು ಹೊಸ ರೂಪಾಂತರಗಳನ್ನು ಪಡೆಯಲು ಸಿದ್ಧವಾಗಿದೆ. 2023 ಹೋಂಡಾ ಸಿಟಿ ಫೇಸ್‌ಲಿಫ್ಟ್‌ನಿಂದ ಹಲವು ಅಂಶಗಳನ್ನು ನಾವು ನಿರೀಕ್ಷಿಸಬಹುದು.

ನಿರೀಕ್ಷಿತ 2023 ಹೋಂಡಾ ಸಿಟಿ ಫೇಸ್‌ಲಿಫ್ಟ್
ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳ ಜೊತೆಗೆ ಮರು-ವಿನ್ಯಾಸಗೊಳಿಸಿದ ಅಲಾಯ್ ವೀಲ್‌ಗಳಂತಹ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಒಳಭಾಗದಲ್ಲಿ, ಇದು ಹೊಸ ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್ ಮತ್ತು ಕೆಲವು ಇತರ ಆಧುನಿಕ ಫೀಚರ್‌ಗಳನ್ನು ಹೊಂದಿರಬಹುದು. ಕಂಪನಿಯು ಸಿಟಿಯ ವೇರಿಯಂಟ್ ಲೈನ್-ಅಪ್ ಅನ್ನು ನವೀಕರಿಸುವ ಭಾಗವಾಗಿ ಅದರ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಈಗ ಬಹು ಟ್ರಿಮ್ ಹಂತಗಳಲ್ಲಿ ನೀಡಲಾಗುವುದು.

ಎಂಜಿನ್ ಮತ್ತು ಗೇರ್‌ಬಾಕ್ಸ್
ಫೇಸ್‌ಲಿಫ್ಟೆಡ್ ಹೋಂಡಾ ಸಿಟಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು 119 bhp ಮತ್ತು 145 Nm ಪೀಕ್ ಟಾರ್ಕ್ ಅನ್ನು ಹೊರ ಹಾಕುತ್ತದೆ. ಜೊತೆಗೆ 6-ಸ್ಪೀಡ್ MT ಮತ್ತು CVT ಯೊಂದಿಗೆ ಜೋಡಿಸಲಾಗಿದೆ. ಇದು 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಸಹ ಪಡೆಯುತ್ತದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿರಲಿದ್ದು, ಇದರ ಸಂಯೋಜಿತ ಪವರ್ ಔಟ್‌ಪುಟ್ 124 bhp ಆಗಿದ್ದರೆ ಗರಿಷ್ಠ ಟಾರ್ಕ್ 253 Nm ಆಗಿರುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹೋಂಡಾ ಸಿಟಿಯ ಸಾಮಾನ್ಯ ಪೆಟ್ರೋಲ್ ರೂಪಾಂತರಗಳು ಪ್ರಸ್ತುತ ರೂ. 11.87 ಲಕ್ಷದಿಂದ ರೂ. 15.62 ಲಕ್ಷದವರೆಗೆ (ಎಕ್ಸ್‌ ಶೋರೂಂ) ಇವೆ. ಇದರ ಹೈಬ್ರಿಡ್ ರೂಪಾಂತರವು ರೂ. 19.89 ಲಕ್ಷದವರೆಗೆ ಎಕ್ಸ್ ಶೋ ರೂಂ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಮುಂಬರುವ ಫೇಸ್‌ಲಿಫ್ಟೆಡ್ ಮಾದರಿಯು ಪ್ರಸ್ತುತ ಬೆಲೆಗಳಿಗಿಂತ ಸ್ವಲ್ಪ ಪ್ರೀಮಿಯಂ ಆಗಿ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಹೋಂಡಾ ಸಿಟಿಯು ಸ್ಕೋಡಾ ಸ್ಲಾವಿಯಾ, ಹ್ಯುಂಡೈ ವೆರ್ನಾ ಇತ್ಯಾದಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಜಪಾನ್ ಮೂಲದ ಈ ಹೋಂಡಾ ಕಾರು ತಯಾರಕರು ತಮ್ಮ ಜನಪ್ರಿಯ ಸಿಟಿ ಸೆಡಾನ್ ಅನ್ನು ಮಾರುಕಟ್ಟೆಗೆ ತರುವ ಮೂಲಕ ಯಾವೆಲ್ಲಾ ಬದಲಾವಣೆಗಳನ್ನು ಮಾಡಲಿದ್ದಾರೆ ನೋಡಬೇಕಿದೆ. ಸದ್ಯ ಹೋಂಡಾ ಪ್ರಿಯರು ಈ ಫೇಸ್‌ಲಿಫ್ಟ್ ಮಾದರಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕಂಪನಿಯ ಪ್ರಕಾರ ಸಿಟಿ ಸೆಡಾನ್ ಬ್ರಾಂಡ್‌ನ ಪ್ರಮುಖ ಮಾದರಿಯಾಗಿರುವುದರಿಂದ ಈ ಬಾರಿಯ ಫೇಸ್‌ಲಿಫ್ಟ್ ಸಿಟಿ ಮಾದರಿಯು ಗ್ರಾಹಕರಿಗೆ ಎಲ್ಲಾ ವಿಧಗಳಲ್ಲೂ ಆಕರ್ಷಿಸಲಿದೆ ಎಂದು ಹೋಂಡಾದವರು ಹೇಳಿಕೊಂಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಟೆಲಿಗ್ರಾಮ್ ಚಾನಲ್‌ಗಳಿಗೆ ಸೇರಿ. ನಮ್ಮ Facebook, Instagram ಮತ್ತು YouTube ಪುಟಗಳೊಂದಿಗೆ ಸಂಪರ್ಕದಲ್ಲಿರಿ. ಈ ಮೂಲಕ ಪ್ರತಿ ದಿನದ ಆಟೋಮೋಟಿವ್ ಸುದ್ದಿಗಳ ಸಂಕ್ಷಿಪ್ತ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಿ.

Most Read Articles

Kannada
Read more on ಹೋಂಡಾ honda
English summary
What to expect from the soon to be launched 2023 honda city facelift
Story first published: Wednesday, January 25, 2023, 13:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X