ವಿಶ್ವದಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಟ್ಟ 614 km ರೇಂಜ್ ನೀಡುವ 'ಹ್ಯುಂಡೈ ಐಯೊನಿಕ್ 6' ಕಾರು
'ವರ್ಲ್ಡ್ ಕಾರ್ ಅವಾರ್ಡ್' ವಿಶ್ವಾದ್ಯಂತ ಕಾರುಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಸಾಧಕರಿಗೆ 'ನೊಬೆಲ್' ಗೌರವ ನೀಡುವ ರೀತಿಯಲ್ಲಿಯೇ ನಮ್ಮ ಜೀವನ ಅವಿಭಾಜ್ಯ ಅಂಗವಾಗಿರುವ ಕಾರುಗಳಿಗೆ ಈ ಅವಾರ್ಡ್ ಕೊಡಲಾಗುತ್ತದೆ. 2023ನೇ ಸಾಲಿನ ವರ್ಲ್ಡ್ ಕಾರ್ ಆಫ್ ದಿ ಇಯರ್' ಪ್ರಶಸ್ತಿಯನ್ನು 'ಹ್ಯುಂಡೈ ಐಯೊನಿಕ್ 6' ಇವಿ ತನ್ನ ಮುಡಿಗೇರಿಸಿಕೊಂಡಿದೆ.
ನ್ಯೂಯಾರ್ಕ್ ಇಂಟರ್‌ನ್ಯಾಷನಲ್ ಆಟೋ ಶೋನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿದ ಬಿಎಂಡಬ್ಲ್ಯೂ ಎಕ್ಸ್1 ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಕಿಯಾ Niro 3 ನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದೆ. ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೆ ಒಟ್ಟು 30 ಕಾರುಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ 10 ಕಾರುಗಳು ಫೈನಲ್‌ಗೆ ಬಂದಿದ್ದವು. ಅಂತಿಮವಾಗಿ ಹ್ಯುಂಡೈ ಐಯೊನಿಕ್ 6 ವಿಜಯಶಾಲಿಯಾಗಿದೆ.

ವರ್ಲ್ಡ್ ಕಾರ್ ಅವಾರ್ಡ್ ಪ್ರಶಸ್ತಿಯನ್ನು 6 ವಿಭಾಗಗಳಲ್ಲಿ ನೀಡಲಾಗುತ್ತದೆ. ಅವುಗಳೆಂದರೆ, ವರ್ಲ್ಡ್ ಕಾರ್ ಆಫ್ ದಿ ಇಯರ್, ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್, ವರ್ಲ್ಡ್ ಲಕ್ಸುರಿ ಕಾರ್, ವರ್ಲ್ಡ್ ಪರ್ಫಾರ್ಮೆನ್ಸ್ ಕಾರ್, ವರ್ಲ್ಡ್ ಅರ್ಬನ್ ಕಾರ್, ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್. 'ಹ್ಯುಂಡೈ ಐಯೊನಿಕ್ 6' ವರ್ಲ್ಡ್ ಕಾರ್ ಆಫ್ ದಿ ಇಯರ್, ಎಲೆಕ್ಟ್ರಿಕ್ ವೆಹಿಕಲ್ ಮತ್ತು ಕಾರ್ ಡಿಸೈನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಇನ್ನುಳಿದಂತೆ ವರ್ಲ್ಡ್ ಲಕ್ಸುರಿ ಕಾರ್ ಪ್ರಶಸ್ತಿಯನ್ನು 'ಲುಸಿಡ್ ಏರ್', ವರ್ಲ್ಡ್ ಪರ್ಫಾರ್ಮೆನ್ಸ್ ಕಾರ್ ಅವಾರ್ಡ್ ಅನ್ನು ಕಿಯಾ ಇವಿ6 ಜಿಟಿ ಹಾಗೂ ವರ್ಲ್ಡ್ ಅರ್ಬನ್ ಕಾರ್ ಪ್ರಶಸ್ತಿಯನ್ನು 'ಸಿಟ್ರಸ್ ಸಿ3' ಪಡೆದುಕೊಂಡಿದೆ. ಇನ್ನು, 32 ದೇಶಗಳ ಆಟೋಮೊಬೈಲ್ ಪತ್ರಕರ್ತರು ಒಳಗೊಂಡಂತೆ 100 ತೀರ್ಪುಗಾರರು ಪ್ರತಿಷ್ಠಿತ ಪ್ರಶಸ್ತಿಗಾಗಿ ವಿಜೇತ ಕಾರುಗಳನ್ನು ಆಯ್ಕೆ ಮಾಡುತ್ತಾರೆ.

'ವರ್ಲ್ಡ್ ಕಾರ್ ಪ್ರಶಸ್ತಿಗೆ ಅರ್ಹತೆ ಪಡೆಯಲು ಕಾರುಗಳು ವಿಶೇಷ ಮಾನದಂಡ ಪೂರೈಸಿರಬೇಕು. ಆ ಮಾದರಿಗಳನ್ನು ಕಾರು ತಯಾರಕ ಕಂಪನಿಗಳು ವರ್ಷಕ್ಕೆ ಕನಿಷ್ಠ 10,000 ಯುನಿಟ್ ಉತ್ಪಾದಿಸಬೇಕು. ಐಷಾರಾಮಿ ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿರಬೇಕು. ಜೊತೆಗೆ ಎರಡು ಪ್ರಮುಖ ದೇಶಗಳ ಮಾರುಕಟ್ಟೆಯಲ್ಲಿ ಮಾರಾಟವಾಗಬೇಕು ( ಚೀನಾ, ಯುರೋಪ್, ಭಾರತ, ಜಪಾನ್, ಕೊರಿಯಾ, ಲ್ಯಾಟಿನ್ ಅಮೆರಿಕ).
ಪ್ರತಿಷ್ಠಿತ 'ವರ್ಲ್ಡ್ ಕಾರ್ ಆಫ್ ದಿ ಇಯರ್' ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಹ್ಯುಂಡೈ ಐಯೊನಿಕ್ 6 ಬಗ್ಗೆ ಮಾತನಾಡುವುದಾದರೇ, ಇದೊಂದು ಎಲೆಕ್ಟ್ರಿಕ್ ಕಾರಾಗಿದ್ದು, ರೂ.65 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ 2025ರೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು 53kWh ಮತ್ತು 77kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 614 km ರೇಂಜ್ ನೀಡಲಿದೆ.
ಹ್ಯುಂಡೈ ಐಯೊನಿಕ್ 6 ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. 12.3 ಇಂಚಿನ ಡ್ಯುಯಲ್-ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್, 8 ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಆಂಬಿಯೆಂಟ್ ಲೈಟಿಂಗ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್ಸ್, ಲೈನ್ ಕೀಪ್, ಡಿಪಾರ್ಚರ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಷನ್ ವಾರ್ನಿಂಗ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ADAS ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications