800 Km ಓಡುವ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್‌ ಕಂಪನಿ: ಟೆಸ್ಲಾಗೆ ನಡುಕ!

ಚೀನಾದ ಸ್ಮಾರ್ಟ್‌ಫೋನ್ ದೈತ್ಯ ಶಿಯೋಮಿ (Xiaomi), ತನ್ನ ಮೊದಲ ಎಲೆಕ್ಟ್ರಿಕ್ ಕಾರು ಎಸ್‌ಯು7 (SU7) ಮಾದರಿಯನ್ನು ಅನಾವರಣಗೊಳಿಸಿದೆ. ಈ ಹೊಸ ಶಿಯೋಮಿ ಎಸ್‌ಯು7 (Xiaomi SU7) ಎಲೆಕ್ಟ್ರಿಕ್ ಕಾರು, ವಿಶ್ವದಾದ್ಯಂತ ಹಲವು ಎಲೆಕ್ಟ್ರಿಕ್ ವಾಹನ ತಯಾರಕರು ಮಾರಾಟಗೊಳಿಸುವ ಇವಿಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಭರ್ಜರಿ ಕಾರ್ಯಕ್ಷಮತೆಯನ್ನು ಹೊಂದಿರಲಿದೆ. ಇದಕ್ಕೆ 'ಎಸ್‌ಯು' ಎಂಬ ಸಂಕ್ಷೇಪಣ (abbreviation)ವನ್ನು ಬಳಕೆ ಮಾಡಲಾಗಿದ್ದು, ಸ್ಪೀಡ್ ಅಲ್ಟ್ರಾ (Speed Ultra) ಎಂಬ ಅರ್ಥವನ್ನು ನೀಡುತ್ತದೆ. ಹೊಸ ಕಾರಿನ ಬಗ್ಗೆ ಮಾತನಾಡಿರುವ ಶಿಯೋಮಿ ಅಧ್ಯಕ್ಷ ಹಾಗೂ ಸಿಇಒ ಲೀ ಜುನ್ (Lei Jun), 'ತನ್ನ ಗ್ರಾಹಕರ ಆಸೆಯನ್ನು ಈಡೇರಿಸುವಂತೆ ನೂತನ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಲಾಗಿದೆ' ಎಂದು ಹೇಳಿದ್ದಾರೆ.

Xiaomi SU7

'ಪೋರ್ಷೆ (Porsche) ಮತ್ತು ಟೆಸ್ಲಾ(Tesla)ದಂತೆ ಉತ್ತಮ ಕನಸಿನ ಕಾರನ್ನು ತಯಾರಿಸುವುದು ಶಿಯೋಮಿ ಗುರಿಯಾಗಿದೆ. ಇದರ್ಥ ಶಿಯೋಮಿ ಯಾವುದೇ ಕಂಪನಿಗೊಳೊಂದಿಗೆ ಸ್ಪರ್ಧಿಸುವುದು ಅಲ್ಲ ಎಂದು ಲೀ ಜುನ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಆದರೂ, ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಟೆಸ್ಲಾಗೆ ಪ್ರಬಲ ಪೈಪೋಟಿ ನೀಡಲು ಶಿಯೋಮಿ ಸಿದ್ಧವಾಗುತ್ತಿದೆ ಎಂದು ಹೇಳಬಹುದು.

ಅಯಾಮಗಳು: ಹೊಸ ಎಸ್‌ಯು7 ಚಿತ್ರಗಳನ್ನು ನೋಡಿದಾಗ 'ಪೋರ್ಷೆ' ಕಾರಿನಂತೆ ಭಾಸವಾಗುತ್ತದೆ. ಈ ಎಲೆಕ್ಟ್ರಿಕ್ ಸೆಡಾನ್ 4 ಡೋರ್ ಆಯ್ಕೆಯನ್ನು ಹೊಂದಿದ್ದು, 4,997 ಎಂಎಂ ಉದ್ದ, 1,963 ಎಂಎಂ ಅಗಲ ಹಾಗೂ 1,455 ಎಂಎಂ ಎತ್ತರ, 3,000 ಎಂಎಂ ವಿಲ್‌ಬೇಸ್‌ ಪಡೆದಿರುಲಿದ್ದು, ಎರಡು ಬ್ಯಾಟರಿ ಕಾನ್ಫಿಗರೇಶನ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಈ ಶಿಯೋಮಿ ಎಸ್‌ಯು7 ಎಂಟ್ರಿ ಲೆವೆಲ್ ಮಾದರಿ 73.6 kWh ಹಾಗೂ ಟಾಪ್ ಎಂಡ್ ಮಾದರಿ 101 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರಲಿದೆ. ಈ ಕಾರಿಗಾಗಿ ಶಿಯೋಮಿ ವಿನೂತನ ಸಿಟಿಬಿ (ಸೇಲ್-ಟು-ಬಾಡಿ) ತಂತ್ರಜ್ಞಾನವನ್ನು ಅಧಿವೃದ್ದಿಪಡಿಸಿದ್ದು, ನೂತನ ಎಸ್‌ಯು7 ಎಲೆಕ್ಟ್ರಿಕ್ ಸೆಡಾನ್ ಸಂಪೂರ್ಣ ಚಾರ್ಜ್ ನಲ್ಲಿ 800 ಕಿ.ಮೀವರೆಗೆ ರೇಂಜ್ ನೀಡಲಿದೆ.

Xiaomi SU7

ಬ್ಯಾಟರಿ ಪ್ಯಾಕ್: ಶಿಯೋಮಿ ವಿ8 (V8) ಎಂಬ ರೂಪಾಂತರವನ್ನು ತಯಾರಿಸುತ್ತಿದ್ದು, ಇದು 150 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರಲಿದೆ. ಪೂರ್ತಿ ಚಾರ್ಜ್ ನಲ್ಲಿ 1,200 ಕಿಲೋಮೀಟರ್ ಕ್ರಮಿಸಲಿದ್ದು, 2025ರಲ್ಲಿ ಬಿಡುಗಡೆಯಾಗಬಹುದು. ನೂತನ ಶಿಯೋಮಿ ಎಸ್‌ಯು7 ಕಾರು ವಿ6 ಮತ್ತು ವಿ6 ಎಸ್ ಮೋಟಾರ್ ಆಯ್ಕೆಯನ್ನು ಹೊಂದಿರಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 299 hp ರಿಂದ 374 hp ಗರಿಷ್ಠ ಪವರ್ ಮತ್ತು 635 Nm ಪೀಕ್ ಟಾರ್ಕ್ ಉತ್ಪಾದಿಸಬಹುದು.

ಟಾಪ್ ಸ್ಪೀಡ್: ಈ ಕಾರಿನ ಎಂಟ್ರಿ ಲೆವೆಲ್ ಮಾದರಿ 210 kmph ಮತ್ತು ಟಾಪ್ ಎಂಡ್ ಮಾದರಿ 265 kmph ಗರಿಷ್ಠ ವೇಗವನ್ನು ಹೊಂದಿರಲಿದ್ದು, ಕ್ಯಾಬಿನ್ ಒಳಭಾಗವು ಹೆಚ್ಚು ವಿಶಾಲವಾಗಿರಲಿದೆ. ಅಲಾಯ್ ವೀಲ್ಸ್, ಸೆಲ್ಫ್ ಡ್ರೈವ್ ಟೆಕ್ನಲಾಜಿಯನ್ನು ಒಳಗೊಂಡುರುವ ಸಾಧ್ಯತೆಯಿದೆ. ಎಸ್‌ಯು7 ಸೆಡಾನ್ ಕೆಲವೇ ದಿನಗಳಲ್ಲಿ ಜಾಗತಿಕವಾಗಿ ಅನಾವರಣಗೊಳ್ಳಲಿದ್ದು, ಆ ನಂತರ ಭಾರತಕ್ಕೂ ಬರುವ ನೀರಿಕ್ಷೆಯಿದೆ.

Xiaomi SU7

ಪ್ರತಿಸ್ಪರ್ಧಿಗಳು: ಶಿಯೋಮಿ ಎಸ್‌ಯು7 ಟೆಸ್ಲಾದ ಮಾಡೆಲ್ 3, ಮಾಡೆಲ್ ಎಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇನ್ನು, ಟೆಸ್ಲಾ ಮುಂದಿನ ವರ್ಷದ ಜನವರಿಯಲ್ಲಿ ಭಾರತಕ್ಕೆ ತನ್ನ ಚೊಚ್ಚಲ ಪ್ರವೇಶವನ್ನು ಮಾಡಲಿದೆ. ಸ್ವತಃ ಕಂಪನಿಯ ಸಿಇಒ ಎಲೋನ್ ಮಸ್ಕ್ ಅವರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ನೀರಿಕ್ಷೆಯದ್ದು, ಗುಜರಾತ್ ರಾಜ್ಯದ ಸಾನಂದ್‌ನಲ್ಲಿ ಉತ್ಪಾದನಾ ಘಟಕವನ್ನು ಶುರು ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, December 30, 2023, 10:29 [IST]
English summary
Xiaomi su7 electric car revealed range details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+