ಟಾಟಾ ಕರ್ವ್‌ಗೆ ಪೈಪೋಟಿ ನೀಡಲು ಬರುತ್ತಿದೆ ಸಿಟ್ರನ್ ಬಸಾಲ್ಟ್... ಬಿಡುಗಡೆ ಮುನ್ನ ಫೀಚರ್ಸ್ ಲೀಕ್!

ಪ್ರಮುಖ ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ ತನ್ನ ಬಸಾಲ್ಟ್‌ನ ಹೆಚ್ಚಿನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಹೊಸ ಬಸಾಲ್ಟ್ ಕಾರು' ಸಿಟ್ರನ್‌ನ ಇತರ ಕಾರು ಮಾದರಿಗಳಾದ C3, C3 ಏರ್‌ಕ್ರಾಸ್ ಮತ್ತು e-C3 ಕಾರುಗಳಂತೆ ಅದೇ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಹಾಗಾಗಿ ಮುಂಭಾಗದ ಡಿಸೈನ್ ಬಹುತೇಕ ಈ ಮಾದರಿಗಳನ್ನು ನೋಡಿದಂತಾಗುತ್ತದೆ. ಉಳಿದಂತೆ ಸಿಟ್ರನ್ ಬಸಾಲ್ಟ್‌ನ ವಿಶೇಷತೆಯೆಂದರೆ, ಇದು ಮುಖ್ಯವಾಗಿ ಕಾರಿನ ಹಿಂಭಾಗದಲ್ಲಿ ಬೂಟ್ ತೀಕ್ಷ್ಣವಾದ ರೂಫ್ ಲೈನ್‌ನಿಂದ ಪ್ರಾಬಲ್ಯ ಹೊಂದಿದೆ. ಇದರಿಂದಾಗಿ ಕಾರು ಎಸ್‌ಯುವಿ-ಕೂಪೆ ವಿನ್ಯಾಸವನ್ನು ನೀಡುತ್ತದೆ.

ಸಿಟ್ರನ್ ಬಸಾಲ್ಟ್ ಅನ್ನು ಆಗಸ್ಟ್‌ ತಿಂಗಳಿಲ್ಲಿ ಅನಾವರಣಗೊಳಿಸಲು ಸಜ್ಜುಗೊಳಿಸಲಾಗುತ್ತಿದೆ. ಇತ್ತೀಚಿನ ಟೀಸರ್ ಅದರ ಒಳಾಂಗಣದ ಬಗ್ಗೆ ಒಂದು ನೋಟವನ್ನು ನೀಡಿದೆ. ಪ್ರೀಮಿಯಂ ಇಂಟೀರಿಯರ್ ಬಗ್ಗೆ ಗ್ರಾಹಕರ ಆಸಕ್ತಿಯನ್ನು ಹೆಚ್ಚಿಸರುವ ಸಿಟ್ರನ್ ಬಸಾಲ್ಟ್, ಟಾಟಾ ಕರ್ವ್‌ಗೆ ಸರಿಯಾದ ಪ್ರತಿಸ್ಪರ್ಧಿ ಎನಿಸಿಕೊಂಡಿದೆ. ಸಿಟ್ರನ್‌ನಿಂದ ಈ ಮುಂಬರುವ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.

2024-citroen-basalt-expected-price-features-engine-details

ಸದ್ಯಕ್ಕೆ, ದೇಶಿಯ ಮಾರುಕಟ್ಟೆಯಲ್ಲಿ ಯಾವುದೇ ಎಸ್‌ಯುವಿ-ಕೂಪೆ ಮಾದರಿಗಳಿಲ್ಲ. ಆದರೆ ಈ ವಿಭಾಗವನ್ನು ಆಳಲು ಟಾಟಾ ಕೂಡ ತನ್ನ ಕರ್ವ್ ಎಸ್‌ಯುವಿಯನ್ನು ಅಖಾಡಕ್ಕೆ ಇಳಿಸುತ್ತಿದೆ. ಒಂದು ವೇಳೆ ಈ ಎರಡೂ ಎಸ್‌ಯುವಿ ಕೂಪೆಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾದರೆ ಮಾರುಕಟ್ಟೆ ಶೇಕ್ ಆಗಲಿದೆ. ಉತ್ತಮ ಬೇಡಿಕೆಯೊಂದಿಗೆ ಎರಡೂ ಕಾರುಗಳು ಆಟೋ ಉದ್ಯಮದಲ್ಲಿ ಮುನ್ನುಗ್ಗಲಿವೆ.

ಬಸಾಲ್ಟ್ ವಿನ್ಯಾಸ: ಸಿಟ್ರನ್ ಬಸಾಲ್ಟ್ ಮುಭಾಗವು ಸಿ3 ಏರ್ ಕ್ರಾಸ್ ವಿನ್ಯಾಸದೊಂದಗೆ ಬಂದರೂ, ಇದರಿಂದ ಪ್ರತ್ಯೇಕಿಸಲು ಕೆಲವು ವೈಶಿಷ್ಟ್ಯಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಪ್ರೊಡಕ್ಷನ್-ಸ್ಪೆಕ್ ಬಸಾಲ್ಟ್ ಸಣ್ಣ ಅಲಾಯ್ ವೀಲ್‌ಗಳು, ಹೊಸ ಟೈಲ್‌ಲ್ಯಾಂಪ್‌ಗಳಿಂದ ಹೊಸ ಲುಕ್ ಪಡೆದಿದೆ. ಹಾಗೆಯೇ ಹಿಂಭಾಗದ ಬೂಟ್ ಜಾಗವು ಬಹುತೇಕ ವಿಂಡ್‌ಶೀಲ್ಡ್ ಆವರಿಸುವ ಮೂಲಕ ಹೊಸ ವಿನ್ಯಾಸ ಪಡೆದಿದೆ.

2024-citroen-basalt-expected-price-features-engine-details

ಇಂಟೀರಿಯರ್: ಸಿಟ್ರನ್ ಬಸಾಲ್ಟ್ ನ ಒಳಾಂಗಣವು ಸಿ-3 ಏರ್ ಕ್ರಾಸ್‌ನಲ್ಲಿ ಕಂಡುಬರುವಂತೆಯೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‌ನೊಂದಿಗೆ ದೊಡ್ಡ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಹೊಂದಿರುತ್ತದೆ.

ಕ್ಯಾಬಿನ್ ಸೀಟುಗಳು ಮತ್ತು ಹೊಸ ಡ್ಯಾಶ್‌ಬೋರ್ಡ್‌ ಬೀಜ್ ಬಣ್ಣದ ಕ್ಯಾಬಿನ್ ಥೀಮ್ ಮತ್ತು ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಸೀಟುಗಳು ಹೊಂದಾಣಿಕೆ ಮಾಡಬಹುದಾದ ಹೆಡ್ ರೆಸ್ಟ್‌ಗಳನ್ನು ಪಡೆದಿವೆ. ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಯುನಿಟ್, ಹಿಂಭಾಗದ ಮಧ್ಯಭಾಗವು ಕಪ್ ಹೋಲ್ಡರ್‌ಗಳನ್ನು ಒಳಗೊಂಡು ಬರಲಿದೆ.

2024-citroen-basalt-expected-price-features-engine-details

ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ, ಇದು 6 ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ), ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಅನ್ನು ಪಡೆಯುವ ನಿರೀಕ್ಷೆಯಿದೆ. ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ, ವೈರ್ ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಸಹ ಇದು ಒಳಗೊಂಡಿರುವ ಸಾಧ್ಯತೆಯಿದೆ.

ಸಿಟ್ರನ್ ಸಿ-3 ಏರ್ ಕ್ರಾಸ್‌ನ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಸಾಲ್ಟ್‌ನಲ್ಲಿ ನೀಡಲಾಗಿದೆ. ಈ ಎಂಜಿನ್ 110 ಬಿಹೆಚ್‌ಪಿ ಪವರ್ ಮತ್ತು 205 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಬಸಾಲ್ಟ್ ಕಾರಿನ ಬೆಲೆಯು ಸಿಟ್ರನ್ ಸಿ-3 ಏರ್ ಕ್ರಾಸ್ ಬೆಲೆಗೆ ಸಮನಾಗಿರುತ್ತದೆ. ಸದ್ಯ ಈ ಕಾರಿನ ಬೆಲೆ ರೂ.10 ಲಕ್ಷದಿಂದ (ಎಕ್ಸ್ ಶೋರೂಂ) 15 ಲಕ್ಷದವರೆಗೆ ಇದೆ.

More from DriveSpark

Article Published On: Monday, July 29, 2024, 17:57 [IST]
English summary
2024 citroen basalt expected price features engine details
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+