ಮಧ್ಯಮ ವರ್ಗದವರಿಗಾಗಿ ಆಕರ್ಷಕ ಬೆಲೆ, ಲಕ್ಷುರಿ ಫೀಚರ್ಸ್‌ನಲ್ಲಿ ಬರಲಿದೆ ಹೊಸ ಹೋಂಡಾ ಕಾರು!

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ (Honda Cars India) ತನ್ನ ಮುಂಬರುವ ಮೂರನೇ ತಲೆಮಾರಿನ ಅಮೇಜ್ ಕಾರಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಬಿಡುಗಡೆಗೆ ಸಜ್ಜಾದ 2024ರ ಮಾರುತಿ ಸುಜುಕಿ ಡಿಜೈರ್ ಮಾದರಿಯು ಈ ಹೊಸ ಹೋಂಡಾ ಅಮೇಜ್ ಕಾರಿಗೆ ಪ್ರಬಲ ಪ್ರತಿಸ್ಪಧಿಯಾಗಲಿದ್ದು, ಈ ಹೊಸ ಡಿಜೈರ್ ನವೆಂಬರ್ 11ಕ್ಕೆ ಬಿಡುಗಡೆಯಾಗಲಿದೆ. ಮಾರುತಿ ಡಿಜೈರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾಡೆಲ್ ಆಗಿರುವುದರಿಂದ ಹೋಂಡಾ ಅಮೇಜ್ ಮಾದರಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ದೊಡ್ಡ ಸವಾಲು ಇದೆ.

ಹೋಂಡಾ ಅಮೇಜ್ (Honda Amaze) ಕಾರು 2013ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಮಾದರಿಯಾಗಿದೆ. ಈ ಹೋಂಡಾ ಅಮೇಜ್ ಸಬ್ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಉತ್ತಮ ಮಾರಾಟಗಾರರಲ್ಲಿ ಒಂದಾಗಿದೆ. ಮುಂಬರುವ ಮೂರನೇ ತಲೆಮಾರಿನ ಅಮೇಜ್ ಕಾರಿನಲ್ಲಿ ಬೋಲ್ಡ್ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಮೂರನೇ ತಲೆಮಾರಿನ ಹೋಂಡಾ ಅಮೇಜ್ ಬಗ್ಗೆ ಹೆಚ್ಚು ಬಹಿರಂಗಪಡಿಸಲಾಗಿಲ್ಲವಾದರೂ, ಈ ಸೆಡಾನ್ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

2024 Honda Amaze Teased

ಮೂರನೇ ತಲೆಮಾರಿನ ಹೋಂಡಾ ಅಮೇಜ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಅಮೇಜ್ ಮಾದರಿಗೆ ಸಿಟಿಯ ವಿನ್ಯಾಸ ಶೈಲಿಯನ್ನು ಹೊಂದಿರಲಿದೆ. ಮುಂಭಾಗದಲ್ಲಿ, ಹೊಸ ಅಮೇಜ್ ಮಧ್ಯದಲ್ಲಿ ಹೋಂಡಾ ಲೋಗೋದೊಂದಿಗೆ ದೊಡ್ಡ ಮತ್ತು ಅಗಲವಾದ ಗ್ರಿಲ್ ಅನ್ನು ಹೊಂದಿರುತ್ತದೆ.ಈ ಹೊಸ ಮಾದರಿಯ ಮುಂಭಾಗದ ಬಂಪರ್ ಅಗ್ರೇಸಿವ್ ಲೈನ್ ನೊಂದಿಗೆ ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ.

ಈ ಹೊಸ ಹೋಂಡಾ ಅಮೇಜ್ ಸೆಡಾನ್ ನಲ್ಲಿ ಸ್ಪೋರ್ಟಿ ಲುಕ್ ನೀಡಲು ಬಾನೆಟ್ ಕೂಡ ಮಸ್ಕಲರ್ ಕ್ರೀಸ್‌ಗಳನ್ನು ಹೊಂದಿರಲಿದೆ. ಈ 2024ರ ಹೋಂಡಾ ಅಮೇಜ್‌ನ ಹೆಡ್‌ಲೈಟ್ ಯುನಿಟ್ ಗಳು ಹೋಂಡಾ ಎಲಿವೇಟ್‌ನಲ್ಲಿ ಕಂಡುಬರುವಂತೆಯೇ ಇರುತ್ತವೆ ಎಂದು ಟೀಸರ್ ಚಿತ್ರ ನೋಡಿದಾಗ ಮತ್ತಷ್ಟು ಸುಳಿವು ಸಿಗುತ್ತದೆ.

ಹೋಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ Takuya Tsumura ಅವರು ಮತಾನಾಡಿ, ಹೋಂಡಾ ಅಮೇಜ್ ಯಾವಾಗಲೂ ಕಂಪನಿಗೆ ಮತ್ತು ಭಾರತದಲ್ಲಿನ ನಮ್ಮ ಗ್ರಾಹಕರಿಗೆ ವಿಶೇಷ ಮಾದರಿಯಾಗಿದೆ ಎಂದು ಹೇಳಿದ್ದಾರೆ. ಈ ಮಾದರಿಯ ಮೂರನೇ ತಲೆಮಾರಿನೊಂದಿಗೆ ಹೊಸ ಪ್ರೀಮಿಯಂ ಪ್ಯಾಕೇಜ್‌ಗಾಗಿ ಪ್ರಸ್ತುತ ಜನರೇಷನ್ ಮಾದರಿಗಿಂತ ವಿನ್ಯಾಸ ಭಾಷೆಯನ್ನು ಇನ್ನಷ್ಟು ಅತ್ಯಾಧುನಿಕಗೊಳಿಸಲು ಕಂಪನಿಯು ಬದ್ಧವಾಗಿದೆ ಎಂದು ಹೇಳಿದರು.

ವರದಿಗಳ ಪ್ರಕಾರ, ಮುಂಬರುವ ಮೂರನೇ ತಲೆಮಾರಿನ ಹೋಂಡಾ ಅಮೇಜ್ ಸಿಟಿ ಮತ್ತು ಎಲಿವೇಟ್ ಮಾದರಿಗಳಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ. ಆದರೂ ಕೆಲವು ಮಾರ್ಪಾಡುಗಳೊಂದಿಗೆ, ಗಮನಾರ್ಹವಾಗಿ ಕಡಿಮೆ ವೀಲ್‌ಬೇಸ್ ಅನ್ನು ಹೊಂದಿರುತ್ತದೆ. ಈ ಪ್ಲಾಟ್‌ಫಾರ್ಮ್ ಹೋಂಡಾ ತನ್ನ ಭಾರತದ ಸರಣಿಯಲ್ಲಿ ಎರಡು ಪ್ಲಾಟ್‌ಫಾರ್ಮ್‌ಗಳಿಂದ ಒಂದಕ್ಕೆ ಸುವ್ಯವಸ್ಥಿತಗೊಳಿಸಲು ಸಹಾಯವಾಗುತ್ತದೆ.

ಮೂರನೇ ತಲೆಮಾರಿನ ಹೋಂಡಾ ಅಮೇಜ್ ಕಾರಿನಲ್ಲಿ 1.2-ಲೀಟರ್, ನಾಲ್ಕು-ಸಿಲಿಂಡರ್, ನ್ಯಾಚುರಲ್ ನಾಲ್ಕು-ಸಿಲಿಂಡರ್, ನೈಸರ್ಗಿಕವಾಗಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಳ್ಳಬಹುದು. ಈ ಎಂಜಿನ್ 89 bhp ಮತ್ತು 110 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

ಹೋಂಡಾ ಭಾರತದಲ್ಲಿ ಡೀಸೆಲ್ ಎಂಜಿನ್‌ಗಳನ್ನು ಸ್ಥಗಿತಗೊಳಿಸುವುದರೊಂದಿಗೆ, ಹೊಸ ಅಮೇಜ್ ಪ್ರಸ್ತುತ ಮಾದರಿಯಂತೆಯೇ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರ ನೀಡುತ್ತದೆ. ಅಮೇಜ್ ಕಾರಿನಲ್ಲಿ ಸುರಕ್ಷತೆಗಾಗಿ ಇಬಿಡಿ, ISOFIX ಚೈಲ್ಡ್ ಸೀಟ್ ಆಂಕರ್‌ಗಳೊಂದಿಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸೀಟ್-ಬೆಲ್ಟ್ ರಿಮೈಂಡರ್ ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, November 4, 2024, 13:02 [IST]
English summary
2024 honda amaze teased ahead of launch details
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+