ಶೀಘ್ರದಲ್ಲೇ ಹ್ಯುಂಡೈ 7-ಸೀಟರ್ ಬಿಡುಗಡೆ: ಸನ್‌ರೂಫ್, 6-ಏರ್‌ಬ್ಯಾಗ್, ಡೀಸೆಲ್ ಎಂಜಿನ್ ಆಯ್ಕೆ!

ಆಟೋ ಉದ್ಯಮವು ನಿತ್ಯ ಹೊಸ ಅಪ್‌ಡೇಟ್‌ಗೊಂದಿಗೆ ವಾಹನ ಉತ್ಸಾಹಿಗಳಿಗೆ ಯಾವುದೋ ಒಂದು ಸಿಹಿ ಸುದ್ದಿ ಕೊಡುತ್ತಿರುತ್ತದೆ. ಇದೀಗ ಹ್ಯುಂಡೈ ಕಂಪನಿಯಿಂದ ಹೊಸ ಅಪ್‌ಡೇಟ್ ಹೊರಬಿದ್ದಿದೆ, ಕ್ರೆಟಾ ಎಸ್‌ಯುವಿಯ ದೊಡ್ಡಣ್ಣನೆಂದು ಜನಪ್ರಿಯತೆ ಪಡೆದಿರುವ ಹ್ಯುಂಡೈ ಅಲ್ಕಾಜಾರ್ ಫೇಸ್‌ಲಿಫ್ಟ್ ಅನ್ನು ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ. ಈ ಹೊಸ ನವೀಕೃತ ಎಸ್‌ಯುವಿ ಭಾರತದಾದ್ಯಂತ ಆಗಾಗ್ಗೆ ಪರೀಕ್ಷಿಸಲಾಗಿರುವ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಈ ನವೀಕರಿಸಿದ ಮೂರು ಸಾಲಿನ ಎಸ್‌ಯುವಿಯ ಫೇಸ್‌ಲಿಫ್ಟ್ ಬಗ್ಗೆ ನಮಗೆ ತಿಳಿದಿರುವ ಕೆಲವು ವಿಷಯಗಳು ಇಲ್ಲಿವೆ.

ಪ್ರತಿಸ್ಪರ್ಧಿಗಳು: ಮೊದಲೇ ಹೇಳಿದಂತೆ ನವೀಕರಿಸಿದ ಅಲ್ಕಾಜರ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಬಳಿಕ ಎಂಜಿ ಹೆಕ್ಟರ್ ಪ್ಲಸ್, ಮಹೀಂದ್ರಾ ಎಕ್ಸ್‌ಯುವಿ 700, ಟಾಟಾ ಸಫಾರಿ, ಕಿಯಾ ಕ್ಯಾರೆನ್ಸ್ ನಂತಹ ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಬಾರಿ ಬಿಡುಗಡೆಯಾಗಲಿರುವ ಹೊಸ ಅಲ್ಕಾಜಾರ್ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಇಲ್ಲಿ ಉಲ್ಲೇಖಿಸಿದ ಪ್ರತಿಸ್ಪರ್ಧಿಗಳ ವಿರುದ್ಧ ಭಾರೀ ಪೈಪೋಟಿ ನೀಡಲಿದೆ.

2024-hyundai-alcazar-facelift-expected-price-features-design-details

ಎಂಜಿನ್‌ನಲ್ಲಿ ಬದಲಾವಣೆ ಇಲ್ಲ: ಪ್ರಸ್ತುತ ಹ್ಯುಂಡೈ ಅಲ್ಕಾಜರ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಯುನಿಟ್‌ಗಳನ್ನು ಹೊಂದಿರಲಿದೆ. ಈ ಪವರ್ ಟ್ರೇನ್‌ಗಳು ಫೇಸ್‌ಲಿಫ್ಟ್ ಆವೃತ್ತಿಯಲ್ಲೂ ಬದಲಾಗದೆ ಉಳಿಯುವ ಸಾಧ್ಯತೆಯಿದೆ.

ಡಿಸೈನ್: ಮುಂಬರುವ ಅಲ್ಕಾಜಾರ್ ಫೇಸ್‌ಲಿಫ್ಟ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಕ್ರೆಟಾ ಫೇಸ್‌ಲಿಫ್ಟ್‌ನಂತೆ ಅದೇ ವಿನ್ಯಾಸವನ್ನು ಹೊಂದಿರುತ್ತದೆ. ಇದರ ಹೊರತಾಗಿ ಮರು ವಿನ್ಯಾಸಗೊಳಿಸಿದ ಗ್ರಿಲ್, ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್ಎಲ್‌ಗಳು, ನವೀಕರಿಸಿದ ಮುಂಭಾಗ ಮತ್ತು ಹಿಂಭಾಗದ ಬಂಪರ್, ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಹೊಸ ಟೈಲ್‌ಗೇಟ್ ಇರಲಿವೆ.

2024-hyundai-alcazar-facelift-expected-price-features-design-details

ಇಂಟೀರಿಯರ್: 2024ರ ಹ್ಯುಂಡೈ ಅಲ್ಕಾಜಾರ್ ಕಾರಿನ ಒಳಭಾಗದಲ್ಲಿ ಹಲವಾರು ಹೊಸ ಫೀಚರ್‌ಗಳನ್ನು ಅಳವಡಿಸುವ ಸಾಧ್ಯತೆಯಿದೆ. ಇವುಗಳಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎರಡು 10.25-ಇಂಚಿನ ಸ್ಕ್ರೀನ್‌ಗಳು, ADAS, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಪರಿಷ್ಕೃತ ಅಪ್ಹೋಲ್ಸ್ಟರಿ ಮತ್ತು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಸೇರಿವೆ.

ಇವಿಷ್ಟೇ ಅಲ್ಲದೇ 64-ಬಣ್ಣದ ಆಂಬಿಯೆಂಟ್ ಲೈಟಿಂಗ್, ಏರ್ ಪ್ಯೂರಿಫೈಯರ್, ಬೋಸ್ ಸೌಂಡ್ ಸಿಸ್ಟಮ್, ಬೃಹತ್ ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಇರಲಿದೆ. ಸುರಕ್ಷತೆ ವಿಷಯವಾಗಿ ಮಾತನಾಡುವುದಾದ್ರೆ 6 ಏರ್‌ಬ್ಯಾಗ್‌ಗಳೊಂದಿಗೆ ಬರಲಿದೆ, ಆದರೆ ಯಾವುದೇ ಕ್ರ್ಯಾಶ್ ಟೆಸ್ಟ್ ಏಜೆನ್ಸಿ ಇದುವರೆಗೆ ಹುಂಡೈ ಅಲ್ಕಾಜರ್ ಅನ್ನು ಪರೀಕ್ಷಿಸಿಲ್ಲ. ಶೀಘ್ರದಲ್ಲೇ ಭಾರತ್ NCAP ನಲ್ಲಿ ಪರೀಕ್ಷಿಸುವ ಸಾಧ್ಯತೆ ಇದೆ.

2024-hyundai-alcazar-facelift-expected-price-features-design-details

ನಿರೀಕ್ಷಿತ ಬೆಲೆ: ಹುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಬೆಲೆಗಳು ಆಯ್ಕೆ ಮಾಡಿದ ರೂಪಾಂತರವನ್ನು ಅವಲಂಬಿಸಿ ರೂ. 17.00 ಲಕ್ಷದಿಂದ ರೂ. 22.00 ಲಕ್ಷ (ಎಕ್ಸ್‌ ಶೋರೂಂ)ದವರೆಗೆ ಇರುವ ಸಾಧ್ಯತೆ ಇದೆ. ಅಲ್ಕಾಜರ್ ಅನ್ನು 6 ಮತ್ತು 7 - ಸೀಟರ್ ವಿನ್ಯಾಸಗಳಲ್ಲಿ ನೀಡಲಾಗುತ್ತದೆ.

ಈ ನವೀಕರಣಗಳ ಪರಿಚಯವು ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಸ್ಪರ್ಧಾತ್ಮಕ ಅಂಚನ್ನು ಕಾಪಾಡಿಕೊಳ್ಳಲು ಹ್ಯುಂಡೈ ಭಾರೀ ಪ್ರಯತ್ನ ನಡೆಸುತ್ತಿದೆ. ಬಿಡುಗಡೆ ಬಳಿಕ 2024 ಹ್ಯುಂಡೈ ಅಲ್ಕಾಜಾರ್ ಫೇಸ್‌ಲಿಫ್ಟ್ ಯಾವ ಮಟ್ಟಿಗೆ ಯಶಸ್ಸು ಕಾಣಲಿದೆ ಕಾದುನೋಡಬೇಕಿದೆ.

More from DriveSpark

Article Published On: Monday, July 29, 2024, 12:57 [IST]
English summary
2024 hyundai alcazar facelift expected price features design details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+