ಹ್ಯುಂಡೈನ ಬೆಸ್ಟ್ 7-ಸೀಟರ್ ಕಾರು: ಭಾರೀ ಮೈಲೇಜ್‌ನ ಫ್ಯಾಮಿಲಿ ಕಾರ್ ಹ್ಯುಂಡೈ ಅಲ್ಕಾಜರ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ್ ಬಹುನಿರೀಕ್ಷಿತ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ (Hyundai Alcazar Facelift) ಎಸ್‍ಯುವಿ ಮಾದರಿಯನ್ನು ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಇದಕ್ಕೂ ಮುನ್ನ, ಕೊರಿಯನ್ ವಾಹನ ತಯಾರಕರು ಈ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಎಸ್‍ಯುವಿ ಮಾದರಿಯ ರಿಫ್ರೆಶ್ ವಿನ್ಯಾಸವನ್ನು ಅನಾವರಣಗೊಳಿಸಿದ್ದಾರೆ. ಈ ಅಲ್ಕಾಜರ್ ಎಸ್‍ಯುವಿ ಮಾದರಿಯು 6 ಮತ್ತು 7 ಸೀಟುಗಳ ಸಂರಚನೆಯಲ್ಲಿ ಲಭ್ಯವಿರುತ್ತದೆ. ಈ ಹೊಸ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಎಸ್‍ಯುವಿ ಮಾದರಿಯ ಒಳಭಾಗದ ವಿನ್ಯಾಸ, ಫೀಚರ್ಸ್ ಬಗ್ಗೆ ಮತ್ತು ಇತರ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೊಸ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ NFC ತಂತ್ರಜ್ಞಾನವನ್ನು ಒಳಗೊಂಡ ಡಿಜಿಟಲ್ ಕೀಯನ್ನು ಅಳವಡಿಸಲಾಗಿದೆ, ಇದು HMIL ಗೆ ಮೊದಲನೆಯದು. ಇದು ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್ ಅಥವಾ ಸ್ಮಾರ್ಟ್‌ವಾಚ್ ಬಳಸಿ ಎಸ್‍ಯುವಿಯನ್ನು ಲಾಕ್ ಮಾಡಲು, ಅನ್‌ಲಾಕ್ ಮಾಡಲು ಮತ್ತು ಚಾಲನೆ ಮಾಡಲು ಅನುಮತಿಸುತ್ತದೆ. ಡಿಜಿಟಲ್ ಕೀಯನ್ನು ಮೂರು ವಿಭಿನ್ನ ಬಳಕೆದಾರರೊಂದಿಗೆ ಅಥವಾ ಏಳು ಲಿಂಕ್ ಮಾಡಲಾದ ಸಾಧನಗಳೊಂದಿಗೆ ಏಕಕಾಲದಲ್ಲಿ ಹಂಚಿಕೊಳ್ಳಬಹುದು.

ಕೊರಿಯಾದ ಕಾರು ತಯಾರಕರ ಮೊದಲ ಮೂರು-ಸಾಲು ಎಸ್‍ಯುವಿಯಾಗಿ ಭಾರತದಲ್ಲಿ ಪಾದಾರ್ಪಣೆ ಮಾಡಿದ ಮೂರು ವರ್ಷಗಳ ನಂತರ ಅಲ್ಕಾಜರ್ ಎಸ್‍ಯುವಿ ತನ್ನ ಮೊದಲ ಪ್ರಮುಖ ನವೀಕರಣವನ್ನು ಸೆಪ್ಟೆಂಬರ್ 9 ರಂದು ಪಡೆಯುತ್ತದೆ. ಈ ಹಿಂದೆ, ಕಾರು ತಯಾರಕರು ಎಸ್‍ಯುವಿಯ ಮೊದಲ ನೋಟವನ್ನು ಹೊರಗಿನಿಂದ ಬಹಿರಂಗಪಡಿಸಿದ್ದರು.
ಹ್ಯುಂಡೈ ಈಗ ಅಧಿಕೃತವಾಗಿ 2024ರ ಅಲ್ಕಾಜಾರ್‌ನ ಒಳಭಾಗದ ಚಿತ್ರ ಬಹಿರಂಗವಾಗಿದೆ. ಮೂರು-ಸಾಲಿನ ಎಸ್‍ಯುವಿ ಡ್ಯುಯಲ್-ಟೋನ್ ಗೇರ್ ಮತ್ತು ಬ್ಲೂ ಥೀಮ್, ಡ್ಯುಯಲ್ 10.25-ಇಂಚಿನ ಡಿಸ್ ಪ್ಲೇಗಳು, ಮತ್ತುAC ಕಂಟ್ರೋಲ್ ಗಳಿಗಾಗಿ ಹೊಸ ಪ್ಯಾನೆಲ್ ಜೊತೆಗೆ ಬ್ರಷ್ಡ್ ಅಲ್ಯೂಮಿನಿಯಂ ಅನು ಹೊಂದಿದೆ. ಹೊಸ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್‌ನ ಕೆಲವು ಇತರ ಗಮನಾರ್ಹ ವೈಶಿಷ್ಟ್ಯಗಳು ಮುಂಭಾಗದ ಪ್ರಯಾಣಿಕರ ಸೀಟಕ್ಕೆ ಬಾಸ್-ಮೋಡ್ ಕಾರ್ಯವನ್ನು ಒಳಗೊಂಡಿರುತ್ತದೆ.

ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಡ್ರೈವರ್ ಸೀಟಿಗಾಗಿ ಮೆಮೊರಿ ಫಂಕ್ಷನ್, ಡ್ಯುಯಲ್ USB ಟೈಪ್-ಸಿ ಪೋರ್ಟ್‌ಗಳು, ಬೋಸ್-ಮೂಲದ ಮ್ಯೂಸಿಕ್ ಸಿಸ್ಟಂ ಮತ್ತ್ಯ್ 360 -ಡಿಗ್ರಿ ಕ್ಯಾಮೆರಾ ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿದೆ. ಇದರೊಂದಿಗೆ ಕಪ್ ಹೋಲ್ಡರ್‌ಗಳೊಂದಿಗೆ ಟ್ರೇಗಳು, ಹಿಂದಿನ ಡೋರ್ ಡಿಸ್ ಪ್ಲೇ ಮತ್ತು ಪನರೊಮಿಕ್ ಸನ್‌ರೂಫ್ ಅನ್ನು ಹೊಂದಿದೆ.
ಇನ್ನು ಈ ಹೊಸ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಎಸ್‍ಯುವಿ ಒಂದು ವಿಶಿಷ್ಟವಾದ ಮುಂಭಾಗದ ಫಾಸಿಕವನ್ನು ಹೊಂದಿದೆ. ಇದು ಮೈನ್ ಹೆಡ್‌ಲ್ಯಾಂಪ್ ಕ್ಲಸ್ಟರ್‌ಗಳ ಮೇಲೆ H- ಆಕಾರದ LED DRL ಗಳನ್ನು ಹೊಂದಿದೆ. ಗ್ರಿಲ್ ಅನ್ನು ಅದರ ಮೇಲೆ 3D ಹ್ಯುಂಡೈ ಲೋಗೋದೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಬಂಪರ್ ಅನ್ನು ಸ್ವಲ್ಪಮಟ್ಟಿಗೆ ರಿಫ್ರೆಶ್ ಮಾಡಲಾಗಿದೆ ಮತ್ತು ಈಗ ವಿಶಾಲವಾದ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿದೆ.

2024ರ ಹ್ಯುಂಡೈ ಅಲ್ಕಾಜಾರ್‌ನ ಸೈಡ್ ಪ್ರೊಫೈಲ್ ಹೆಚ್ಚಾಗಿ ಬದಲಾಗದೆ ಉಳಿದಿದೆ ಆದರೆ ಸೂಕ್ಷ್ಮವಾದ ನವೀಕರಣಗಳನ್ನು ಪಡೆಯುತ್ತದೆ. ಮಾದರಿಯು ಈಗ ಹೊಸ 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಟಾಪ್ ರೂಪಾಂತರಗಳಿಗೆ ಮತ್ತು 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಲೋ ರೂಪಾಂತರಗಳಲ್ಲಿ ನೀಡಲಾಗಿದೆ. ರೂಫ್ ರೈಲ್ ಗಳು ಹೊಸ ಡ್ಯುಯಲ್-ಟೋನ್ ವಿನ್ಯಾಸವನ್ನು ಸಹ ಹೊಂದಿವೆ.
ಈ ಹೊಸ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಕಾರು ಪ್ರಸ್ತುತವಿರುವ ಮಾದರಿಯಂತೆಯೇ (ಮಾಡೆಲ್) ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿರಲಿದೆ. ನೂತನ ಎಸ್‌ಯುವಿ ಕೂಡ 1.5-ಲೀಟರ್ ಟರ್ಬೊ ಜಿಡಿಐ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್‌ನ್ನು ಪಡೆದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಹಾಗೂ 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಆಟೋಮೆಟಿಕ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ ಎಂದು ವರದಿಯಾಗಿದೆ.


Click it and Unblock the Notifications








