Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV

2024ರ ಹೊಸ ಹುಂಡೈ ಕ್ರೆಟಾ (2024 Hyundai Creta Facelift) ಫೇಸ್‌ಲಿಫ್ಟ್ ದಾಖಲೆಯ ಬುಕ್ಕಿಂಗ್‌ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಆಸಕ್ತ ಗ್ರಾಹಕರು 25 ಸಾವಿರ ರೂ. ಕೊಟ್ಟು ಬುಕ್ ಮಾಡಬಹುದು. ಈ ಹೊಸ ಪ್ರೀಮಿಯಂ ಎಸ್‌ಯುವಿಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ಇಲ್ಲಿ ನೋಡೊಣ.

ಹ್ಯುಂಡೈ ಎರಡನೇ ತಲೆಮಾರಿನ ಕ್ರೆಟಾ ಬೆಲೆಯು ರೂ. 11 ಲಕ್ಷದಿಂದ ಪ್ರಾರಂಭವಾಗುತ್ತದೆ (ಪರಿಚಯಾತ್ಮಕ, ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ). ಅಂದರೆ SUV ಏಳು ವಿಭಿನ್ನ ಟ್ರಿಮ್‌ಗಳಲ್ಲಿ ಬರಲಿದ್ದು, ಇದರ ಮೂಲ E ವೇರಿಯೆಂಟ್‌ಗೆ 10,99,900 ಮತ್ತು SX(O) ಟಾಪ್ - ಎಂಡ್ ಮಾದರಿಗೆ ರೂ. 20.15 (ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ) ಬೆಲೆಯಿದೆ.

2024-hyundai-creta-facelift-comes-with-7-variants-3-engine-options

ಹೊಸ 2024ರ ಹ್ಯುಂಡೈ ಕ್ರೆಟಾದಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳಿದ್ದು, ಅದ್ದೂರಿ ಡಿಸೈನ್, ಆಧುನಿಕ ತಂತ್ರಜ್ಞಾನ, ಸುಧಾರಿತ ಫೀಚರ್‌ಗಳು, ಉತ್ತಮ ನಿರ್ಮಾಣ ಗುಣಮಟ್ಟದೊಂದಿಗೆ ಬಿಡುಗಡೆಯಾಗಿದೆ. ಇದೇ ಕಾರಣಕ್ಕೆ ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಎಸ್‌ಯುವಿ ಎಂದು ಸದ್ದು ಮಾಡುತ್ತಿದೆ. ಕಂಪನಿಯು 6 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್‌ಬೆಲ್ಟ್, ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳ ಜೊತೆಗೆ 70 ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಲೆವೆಲ್ -2 ADAS ಅನ್ನು ಸಹ ನೀಡಲಾಗಿದೆ. ಈ ಮೂಲಕ ಹೊಸ ಕ್ರೆಟಾ ಮೊದಲಿಗಿಂತ ಹೆಚ್ಚು ಸುರಕ್ಷಿತ ಕಾರಾಗಿ ಹೊರಹೊಮ್ಮಿದೆ.

ಎಂಜಿಂನ್: ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಜೊತೆಗೆ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ. ಇದರಲ್ಲಿ 6-speed MT, CVT ಹಾಗೂ 7-speed DCT ಮತ್ತು 6-speed MT, 6-speed AT ಆಯ್ಕೆಯನ್ನು ನೀಡಲಾಗಿದೆ.

2024-hyundai-creta-facelift-comes-with-7-variants-3-engine-options

ಇಂಟೀರಿಯರ್: ಹೊಸ ಹ್ಯುಂಡೈ CRETA ಉದ್ದವಾದ ಡ್ಯಾಶ್‌ಬೋರ್ಡ್‌ನೊಂದಿಗೆ ಇಂಟಿಗ್ರೇಟೆಡ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಕ್ಲಸ್ಟರ್ ಸ್ಕ್ರೀನ್‌ಗಳು, ಲೆಥೆರೆಟ್ ಡೋರ್ ಆರ್ಮ್‌ರೆಸ್ಟ್ ಕವರಿಂಗ್, ಲೆಥೆರೆಟ್ ಡಿ ಕಟ್ ಸ್ಟೀರಿಂಗ್ ವೀಲ್, ಆಧುನಿಕ ಗ್ರಾಫಿಕ್ಸ್‌ನೊಂದಿಗೆ ಪ್ರೀಮಿಯಂ ಲೆಥೆರೆಟ್ ಸೀಟ್‌ಗಳು, ಲೆಥೆರೆಟ್ ಸಿಫ್ಟರ್ ರೀಪ್ಡ್ ರೀಡಿಯಂಟ್ ಇಂಟೀರಿಯರ್‌ಗಳನ್ನು ಒಳಗೊಂಡಿದೆ. ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್, ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ. ಪ್ರಯಾಣಿಕರ ಬದಿಯ ಡ್ಯಾಶ್‌ಬೋರ್ಡ್‌ನ ಮೇಲಿನ ಈಗ ಪಿಯಾನೋ ಬ್ಲಾಕ್ ಪ್ಯಾನಲ್ ನೀಡಲಾಗಿದೆ.

ಇವಿಷ್ಟೇ ಅಲ್ಲದೇ ಹೊಸ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯ ಹೊರತಾಗಿ, ಕ್ರೆಟಾ ಫೇಸ್‌ಲಿಫ್ಟ್ ಅನ್ನು ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಡ್ಯುಯಲ್-ಝೋನ್ AC ಯೊಂದಿಗೆ ಒದಗಿಸಲಾಗಿದೆ. ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಅನ್ನು ನೀಡಲಾಗಿದೆ.

2024-hyundai-creta-facelift-comes-with-7-variants-3-engine-options

ವೇರಿಯೆಂಟ್-ಬಣ್ಣಗಳು: ಹೊಸ ಕ್ರೆಟಾ ಸ್ಟ್ರಾಂಗ್ ಎಮರ್ಲ್ಡ್ ಪರ್ಲ್, ಪೈರಿ ರೆಡ್, ರೇಂಜರ್, ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಬ್ಲಾಕ್ ರೂಫ್‌ನೊಂದಿಗೆ ಅಟ್ಲಾಸ್ ವೈಟ್ ಡ್ಯುಯಲ್ ಟೋನ್ ಶೇಡ್‌ನಲ್ಲಿ ಲಭ್ಯವಿದೆ. 7-ವೇರಿಯೆಂಟ್‌ಗಳು ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳನ್ನು ಒಳಗೊಂಡಿದೆ. ವಿವರವಾಗಿ ನೋಡುವುದಾದ್ರೆ E, EX, S, S(O), SX, SX Tech, SX(O) ಎಂಬ ವೇರಿಯೆಂಟ್‌ಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, April 20, 2024, 8:30 [IST]
English summary
2024 hyundai creta facelift comes with 7 variants 3 engine options
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+