ಭಾರತೀಯ ವಾಹನ ಉದ್ಯಮವನ್ನು ಆಳುತ್ತಿವೆ ಈ 3 ಬ್ರಾಂಡ್‌ಗಳು: ಜೂನ್‌ ಮಾರಾಟ ವಿವರ!

ಕಳೆದ ತಿಂಗಳು (ಜೂನ್)ಎಲ್ಲಾ ಬ್ರಾಂಡ್‌ಗಳನ್ನು ಒಳಗೊಂಡಂತೆ ಒಟ್ಟು 3,40,784 ಯುನಿಟ್ ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದು, ಇದು 2023ರ ಜೂನ್‌ನಲ್ಲಿ ಮಾರಾಟವಾಗಿದ್ದ 3,28,710 ಕಾರುಗಳಿಗೆ ಹೋಲಿಸಿದರೆ ಶೇ3.67 ಬೆಳವಣಿಗೆಯನ್ನು ದಾಖಲಿಸಿದೆ. ಎಂದಿನಂತೆ ಎಸ್‌ಯುವಿಗಳು ಸಕಾರಾತ್ಮಕ ಬೆಳವಣಿಗೆ ಕಾಯ್ದುಕೊಂಡಿವೆ. ವಾಹನ ಮಾರಾಟದಲ್ಲಿ ತನ್ನ ಅಗ್ರ ಸ್ಥಾನ ಬಿಟ್ಟುಕೊಡದೆ ಮಾರುತಿ ಸುಜುಕಿ ಭದ್ರಪಡಿಸಿಕೊಂಡಿದೆ. ಈ ಭಾರಿ ಎರಡನೇ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಹ್ಯುಂಡೈ ಕಂಪನಿ ಟಾಟಾವನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ದಕ್ಕಿಸಿಕೊಂಡಿದೆ. ಹಾಗಾದ್ರೆ ಈ ಕಂಪನಿಗಳು ಎಷ್ಟು ಕಾರುಗಳನ್ನು ಮಾರಾಟ ಮಾಡಿವೆ ಇಲ್ಲಿ ನೋಡೋಣ.

ಜೂನ್ 2024 ರಲ್ಲಿ ಮಾರುತಿ ಒಟ್ಟು 1,79,228 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ದೇಶೀಯವಾಗಿ 1,39,918 ಯುನಿಟ್ ಕಾರುಗಳು ಮಾರಾಟವಾದರೆ, ಇತರ OEM(ಮೂಲ ಉಪಕರಣ ತಯಾರಕ)ಗಳಿಗೆ 8,277 ಯುನಿಟ್‌ಗಳು ಮತ್ತು 31,033 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿದೆ. ಆಲ್ಟೋ ಮತ್ತು ಎಸ್-ಪ್ರೆಸ್ಸೊದಂತಹ ಮಿನಿ-ಸೆಗ್ಮೆಂಟ್ ಕಾರುಗಳ ಮಾರಾಟ ಕುಸಿದಿದೆ.

2024-june-car-sales-report-maruti-suzuki-tata-motors-hyundai

ಕಾಂಪ್ಯಾಕ್ಟ್ ಕಾರು ವಿಭಾಗದಲ್ಲಿ, 64,049 ಯುನಿಟ್‌ಗಳು ಮಾರಾಟವಾಗಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ ಮಾರಾವಾಗಿದ್ದ 64,471 ಯುನಿಟ್‌ಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. ಬ್ರೆಝಾ, ಗ್ರ್ಯಾಂಡ್ ವಿಟಾರಾ, ಎರ್ಟಿಗಾ ಮತ್ತು XL6 ಸೇರಿದಂತೆ ಮಾರುತಿಯ ಯುಟಿಲಿಟಿ ವಾಹನಗಳು 52,373 ಯುನಿಟ್‌ಗಳ ಮಾರಾಟದೊಂದಿಗೆ ಗಮನಾರ್ಹವಾದ ಉತ್ತೇಜನವನ್ನು ಕಂಡಿವೆ.

ಹ್ಯುಂಡೈ ಮೋಟಾರ್: ಹ್ಯುಂಡೈ ಮೋಟಾರ್ ಇಂಡಿಯಾ ಜೂನ್ 2024 ರಲ್ಲಿ ಒಟ್ಟು 64,803 ಯುನಿಟ್‌ ಕಾರುಗಳ ಮಾರಾಟವನ್ನು ದಾಖಲಿಸಿದೆ. ಇದರಲ್ಲಿ 50,103 ಕಾರುಗಳು ದೇಶೀಯವಾಗಿ ಮಾರಾಟವಾಗಿವೆ. 14,700 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಮಾರಾಟವಾದ 50,001 ಯುನಿಟ್‌ಗಳಿಗೆ ಹೋಲಿಸಿದರೆ ಶೇ0.2 ಬೆಳವಣಿಗೆ ಕಂಡಿದೆ.

2024-june-car-sales-report-maruti-suzuki-tata-motors-hyundai

ಟಾಟಾ ಮೋಟಾರ್ಸ್: ದೇಶಿಯ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಕುಸಿತ ಕಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಪ್ರಯಾಣಿಕ ವಾಹನಗಳ ಮಾರಾಟವು ಜೂನ್‌ನಲ್ಲಿ ಶೇಕಡಾ 8 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ ಮಾರಾಟವಾಗಿದ್ದ 47,359 ಯುನಿಟ್‌ಗಳಿಗೆ ಹೋಲಿಸಿದರೆ ಈ ಬಾರಿ ಒಟ್ಟು 43,624 ಯುನಿಟ್‌ಗಳು ಮಾರಾಟವಾಗುವ ಮೂಲಕ ತುಸು ಕುಸಿತವನ್ನು ಕಂಡಿದೆ.

2024 - 25ರ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳ ಮೊದಲ ತ್ರೈಮಾಸಿಕ ಮಾರಾಟದಲ್ಲಿ ಟಾಟಾ ಮೋಟಾರ್ಸ್‌ನ ಒಟ್ಟು 2,29,891 ವಾಹನಗಳು ಮಾರಾಟವಾಗಿವೆ. 2023 - 24 ರ ಮೊದಲ ತ್ರೈಮಾಸಿಕದಲ್ಲಿ ಮಾರಾಟವಾದ 2,26,245 ಯುನಿಟ್‌ಗಳಿಗೆ ಹೋಲಿಸಿದರೆ ತುಸು ಹೆಚ್ಚಾಗಿದೆ ಎಂದು ವರದಿಯಾಗಿದೆ.

2024-june-car-sales-report-maruti-suzuki-tata-motors-hyundai

ಟಾಟಾ ಮೋಟಾರ್ಸ್‌ನ ಈ ಮಾರಾಟದಲ್ಲಿ ನೆಕ್ಸಾನ್, ಪಂಚ್, ಹ್ಯಾರಿಯರ್, ಸಫಾರಿ, ಟಿಯಾಗೋ, ಆಲ್ಟ್ರೋಜ್ ​​ಮತ್ತು ಟಿಗೋರ್ ಅನ್ನು ಒಳಗೊಂಡಿದೆ. ಜೊತೆಗೆ Punch EV ಮತ್ತು Nexon EV ಯಂತಹ ಜನಪ್ರಿಯ EV ಮಾದರಿಗಳನ್ನು ಸಹ ಒಳಗೊಂಡಿದೆ. ಈ ತಿಂಗಳು ಹೆಚ್ಚಿನ ಮಾರಾಟ ನಿರೀಕ್ಷೆಯಿದ್ದು, ಇತ್ತೀಚೆಗೆ ಬಿಡುಗಡೆಯಾದ ಆಲ್ಟ್ರೋಜ್ ರೇಸರ್ ಮಾರಾಟದ ಹೆಚ್ಚಳಕ್ಕೆ ಸಹಕರಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, July 5, 2024, 14:43 [IST]
English summary
2024 june car sales report maruti suzuki tata motors hyundai
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+