ಬಿಡುಗಡೆ ಮುನ್ನವೇ ಲೀಕ್ ಆದವು ಥಾರ್ 5-ಡೋರ್ ಫೋಟೊಗಳು: ರಗಡ್ ಲುಕ್!
ಮಹೀಂದ್ರಾ ಥಾರ್ 5-ಡೋರ್ (ಅರ್ಮಡಾ ಎಂದು ಹೆಸರಿಡುವ ನಿರೀಕ್ಷೆಯಿದೆ) ಅಧಿಕೃತ ಬಿಡುಗಡೆಗೂ ಮುನ್ನವೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿವೆ. ಮಹೀಂದ್ರಾ ಅರ್ಮಡಾ 5-ಡೋರ್‌ನ ಸೋರಿಕೆಯಾದ ಚಿತ್ರಗಳು ಎಸ್‌ಯುವಿ ಹೇಗಿರಲಿದೆ ಎಂಬುದರ ವಿವರವಾದ ನೋಟವನ್ನು ನೀಡುತ್ತಿದೆ. ಹಾರ್ಸ್ಶೂ ಆಕಾರದ ಡಿಆರ್ಎಲ್‌ಗಳೊಂದಿಗೆ ಪರಿಷ್ಕೃತ ಹೆಡ್‌ಲೈಟ್‌ಗಳು, ಮುಂಭಾಗದ ಬಂಪರ್ ಮತ್ತು ವ್ಹೀಲ್ ಆರ್ಚ್‌ಗಳನ್ನು 3-ಡೋರ್ ಥಾರ್‌ನಂತೆ ಅಲ್ಲದೇ ಸ್ವಲ್ಪ ಬದಲಾಯಿಸಲಾಗಿದೆ. ಒಟ್ಟಾರೆ ಮಹೀಂದ್ರಾ ಆರ್ಮಡಾ ಡಿಸೈನ್ ಸಾಕಷ್ಟು ರಗಡ್ ಲುಕ್‌ನಲ್ಲಿ ಕಾಣುತ್ತಿದೆ. ಕೆಲವು ಬದಲಾವಣೆಗಳು ಹೊಸ ಆವೃತ್ತಿಯನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿವೆ.
ನಿರೀಕ್ಷೆಗಳು: ಥಾರ್ ಅರ್ಮಡಾ 5 ಡೋರ್ (Mahindra Thar 5-door), ಅದರ 3 ಡೋರ್ ಆವೃತ್ತಿಯತೆಯೇ ಮಹೀಂದ್ರಾ ಸ್ಕಾರ್ಪಿಯೋ-ಎನ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. 3 ಡೋರ್ ಥಾರ್‌ನಲ್ಲಿ ನೀಡುವ ಅದೇ ಎಂಜಿನ್ ಆಯ್ಕೆಗಳನ್ನು ಇದಕ್ಕೂ ನೀಡಲಾಗುವುದು. ಹೆಚ್ಚಿನ ತೂಕವನ್ನು ಸರಿದೂಗಿಸಲು ಎಂಜಿನ್ ಟ್ಯೂನ್ ಮಾಡುವ ಸಾಧ್ಯತೆಯಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಸ್ಕಾರ್ಪಿಯೋ-ಎನ್‌ನಂತೆಯೇ ಟ್ಯೂನ್ ಆಗುವ ನಿರೀಕ್ಷೆಯಿದೆ.

ಎರಡೂ ಎಂಜಿನ್‌ಗಳ ಗೇರ್ ಬಾಕ್ಸ್ ಗಳನ್ನು 6 ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಆಟೋಮ್ಯಾಟಿಕ್ ಆಯ್ಕೆಗಳನ್ನು ಹೊಂದಲಿವೆ. ಲೆವೆಲ್ 2 ADAS ಜೊತೆಗೆ ಎಕ್ಸ್‌ಯುವಿ 700 ನಲ್ಲಿ ಕಂಡುಬರುವ ಅನೇಕ ವೈಶಿಷ್ಟ್ಯಗಳನ್ನು ಥಾರ್ ಅರ್ಮಡಾ 5 ಡೋರ್ ಆವೃತ್ತಿ ಪಡೆಯಲಿದೆ. 5 ಡೋರ್ ಥಾರ್ ಅರ್ಮಡಾವನ್ನು 2024 ರ ಆಗಸ್ಟ್ 15 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.
ಸೋರಿಕೆಯಾದ ಚಿತ್ರಗಳಲ್ಲಿ ಫ್ರಂಟ್ ವ್ಯೂ: ಥಾರ್ 5-ಡೋರ್ ಮುಂಭಾಗವು ಮಹೀಂದ್ರಾ ಥಾರ್ ಸರಣಿಯಂತೆಯೇ ಒರಟಾದ ನೋಟವನ್ನು ಪಡೆದಿದೆ. ಗ್ರಿಲ್ ಉದ್ದವಾದ ಸ್ಲಾಟ್‌ಗಳನ್ನು ಹೊಂದಿದ್ದು, ಹೆಚ್ಚು ಆಧುನಿಕವಾಗಿ ಕಾಣುತ್ತದೆ. ಗ್ರಿಲ್ ದೊಡ್ಡದಾಗಿರುವುದರಿಂದ ಹೆಚ್ಚು ಸ್ಪಷ್ಟತೆಯೊಂದಿಗೆ ದಿಟ್ಟ ಉಪಸ್ಥಿತಿಯನ್ನು ನೀಡುತ್ತದೆ. ವೃತ್ತಾಕಾರದ ಹೆಡ್ ಲೈಟ್‌ಗಳನ್ನು ಆಧುನಿಕ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ.

ಮುಂಭಾಗದ ಬಂಪರ್ ದೃಢವಾಗಿದ್ದು, ಮೆಟಾಲಿಕ್ ಫಿನಿಶ್ ಮತ್ತು ಇಂಟಿಗ್ರೇಟೆಡ್ ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ. ಮಹೀಂದ್ರಾ ಉದ್ದೇಶಪೂರ್ವಕವಾಗಿ 10 ಸ್ಲಾಟ್ ಗ್ರಿಲ್ ಅನ್ನು ಆಯ್ಕೆ ಮಾಡಿಕೊಂಡಿದೆ ಎಂದು ತೋರುತ್ತದೆ. ಏಕೆಂದರೆ 5 ಡೋರ್ ಥಾರ್ ಅರ್ಮಡಾ ಕೇವಲ ಭಾರತೀಯ ಮಾರುಕಟ್ಟೆಗಳಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ರಫ್ತು ಮಾರುಕಟ್ಟೆಗಳಿಗೂ ಹೋಗಲಿದೆ.
ಸೋರಿಕೆಯಾದ ಚಿತ್ರಗಳಲ್ಲಿ ಸೈಡ್ ವ್ಯೂ: ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚುವರಿ ಎರಡು ಬಾಗಿಲುಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಸ್ತೃತ ವ್ಹೀಲ್ ಬೇಸ್ ನೀಡಲಾಗಿದೆ. ವಾಹನವು ಅತಿಯಾಗಿ ವಿಸ್ತರಿಸಿದಂತೆ ಎಲ್ಲೂ ಕಾಣುವುದಿಲ್ಲ. ಬಾಗಿಲ ವಿನ್ಯಾಸ ಮತ್ತು ವಿಂಡೋ ಲೈನ್ ನೇರವಾಗಿದ್ದು, ಆಫ್-ರೋಡ್ ವಾಹನದ ವಿಶಿಷ್ಟವಾದ ಒರಟಾದ ಡಿಸೈನ್ ಅನ್ನು ಕಾಪಾಡಿಕೊಂಡಿದೆ.
ಫ್ಲೇರ್ಡ್ ವೀಲ್ ಆರ್ಚ್‌ಗಳು ಮಸ್ಕುಲರ್ ನೋಟವನ್ನು ಹೆಚ್ಚಿಸುತ್ತವೆ, ಆಲ್-ಟೆರೈನ್ ಟೈರ್‌ಗಳು ವಾಹನದ ಆಫ್-ರೋಡ್ ಸಾಮರ್ಥ್ಯಗಳನ್ನು ಸೂಚಿಸುತ್ತವೆ. ಸಿ-ಪಿಲ್ಲರ್ ವಿಚಿತ್ರವಾದ ಕಿಂಕ್ ಅನ್ನು ಹೊಂದಿದ್ದು, ಇದು ಉದ್ದೇಶಪೂರ್ವಕವಾಗಿ ತೋರುವ ಮತ್ತೊಂದು ವಿನ್ಯಾಸದ ಬಿಟ್ ಆಗಿರಬಹುದು, ಈ ಎಸ್‌ಯುವಿ ಜೀಪ್ ರಾಂಗ್ಲರ್‌ನಂತೆ ಕಂಡರು 5 ಡೋರ್ ಥಾರ್ ಆರ್ಮಡಾ ತನ್ನದೇ ಆದ ಸಾಂಪ್ರದಾಯಿಕ ಡಿಸೈನ್ ಪಡೆದುಕೊಂಡಿದೆ.
ಒಟ್ಟಾರೆ ಅನಿಸಿಕೆ: ಈ ಫೋಟೋಗಳಲ್ಲಿ ಕಾಣುವ ಮಹೀಂದ್ರಾ ಥಾರ್ 5-ಡೋರ್ ಆವೃತ್ತಿಯು ಜನಪ್ರಿಯ ಥಾರ್ ಶ್ರೇಣಿಯ ಉತ್ತಮ ವಿಸ್ತರಣೆಯಾಗಿದೆ. ದೊಡ್ಡ ಕುಟುಂಬಗಳಿಗೆ ಹೆಚ್ಚಿನ ಪ್ರಾಯೋಗಿಕತೆ ಮತ್ತು ಸ್ಥಳವನ್ನು ನೀಡುವಾಗ ಒರಟಾದ ಆಫ್-ರೋಡ್ ಎಸ್‌ಯುವಿ ಆಗಲಿದೆ. ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ನವೀಕರಿಸಿದ ಗ್ರಿಲ್ ಗ್ರಾಹಕರಿಗೆ ಹೊಸ ಅನುಭವ ನೀಡಲಿವೆ.


Click it and Unblock the Notifications