14 ಲಕ್ಷ ಬೆಲೆಯ ಬೆಸ್ಟ್ 7-ಸೀಟರ್ ಫ್ಯಾಮಿಲಿ ಕಾರು: ಸನ್‌ರೂಫ್, ADAS, 7 ಏರ್‌ಬ್ಯಾಗ್‌ಗಳು
2021ರ ಆಗಸ್ಟ್ ತಿಂಗಳಿನಲ್ಲಿ ಮೊದಲ ಬಾರಿ ಮಹೀಂದ್ರಾ ಕಂಪನಿಯು ಜನಪ್ರಿಯ XUV700 ಎಸ್‍ಯುವಿಯನ್ನು ಬಿಡುಗಡೆ ಮಾಡಿತು. ಈ ಎಸ್‍ಯುವಿಯು ಬಿಡುಗಡೆಯಾದಗಿನಿಂದ 1.40 ಲಕ್ಷಕ್ಕೂ ಹೆಚ್ಚು ಯುನಿಟ್ ಕಾರುಗಳು ಮಾರಾಟವಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ಹೆಚ್ಚು ಬೇಡಿಕೆಯಿರುವ ಈ ಕಾರನ್ನು ಕಂಪನಿ ನವೀಕರಿಸಿ (Updated) ಇತ್ತೀಚೆಗೆ ಮತ್ತೊಮ್ಮೆ ಬಿಡುಗಡೆಗೊಳಿಸಿದೆ. ಈ ಹೊಸ ಮಹೀಂದ್ರಾ XUV700 ಎಸ್‍ಯುವಿ ಆರಂಭಿಕ ಬೆಲೆಯು ರೂ.13.99 ಲಕ್ಷವಾದರೆ, ಇದರ ಟಾಪ್ ವೆರಿಯೆಂಟ್ ಬೆಲೆಯು ರೂ.23.99 (ಎಕ್ಸ್ ಶೋರೂಂ ಬೆಲೆಗಳು) ಲಕ್ಷವಾಗಿದೆ. MX, AX3, AX5, AX7 ಮತ್ತು AX7L ಎಂಬ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ.
ವಿನ್ಯಾಸ: 2024ರ ಮಹೀಂದ್ರಾ XUV700 ಎಸ್‍ಯುವಿಯ ವಿನ್ಯಾಸವು ಹಿಂದಿನ ಮಾದರಿಗೆ ಹೋಲುತ್ತದೆ. ಮೂಲ ವಿನ್ಯಾಸ ಮತ್ತು ಸಿಲೂಯೆಟ್ ಹಿಂದಿನಂತೆಯೇ ಇರುತ್ತದೆ. ಈ ಎಸ್‍ಯುವಿಯ AX7L ಮತ್ತು AX7 ರೂಪಾಂತರಗಳಿಗೆ ಹೊಸ ನಾಪೋಲಿ ಬ್ಲ್ಯಾಕ್ ಪೇಂಟ್ ಆಯ್ಕೆಯನ್ನು ಸೇರಿಸಲಾಗಿದೆ. ಈ ಎರಡು ರೂಪಾಂತರಗಳು ಆಪ್ಷನಲ್ ಡ್ಯುಯಲ್-ಟೋನ್ ಬಣ್ಣದೊಂದಿಗೆ ಬರುತ್ತವೆ.

ಫೀಚರ್ಸ್: ಮಹೀಂದ್ರಾ XUV700 ಎಸ್‍ಯುವಿಯಲ್ಲಿ ಅಡ್ರಿನಾಕ್ಸ್ ಸೂಟ್‌ನೊಂದಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಸಾಮರ್ಥ್ಯದೊಂದಿಗೆ ಬರುತ್ತದೆ ಎಂದು ಮಹೀಂದ್ರಾ ಹೇಳಿದೆ. ಈ ಎಸ್‍ಯುವಿಯಲ್ಲಿ EcoSense ಲೀಡರ್‌ಬೋರ್ಡ್, M ಲೆನ್ಸ್ ಮತ್ತು ಟೋಲ್ ಡೈರಿಯಂತಹ 13 ಹೊಸ ಫೀಚರ್ಸ್ ಅನ್ನು ಸೇರ್ಪಡೆ ಮಾಡಲಾಗಿದೆ. ಈ ಸಾಫ್ಟ್‌ವೇರ್ ಸೂಟ್ 83 ಕನೆಕ್ಟಿವಿಟಿ ಕಾರ್ ಫೀಚರ್ಸ್‌ಗಳೊಂದಿಗೆ ಬರುತ್ತದೆ.
ಇಂಟಿರಿಯರ್: ಮಹೀಂದ್ರಾ XUV700 ಎಸ್‍ಯುವಿ ನವೀಕರಿಸಿದ ಕ್ಯಾಬಿನ್, ಏರ್ ವೆಂಟ್‌ಗಳು ಮತ್ತು ಸೆಂಟ್ರಲ್ ಕನ್ಸೋಲ್‌ನಲ್ಲಿ ಡಾರ್ಕ್ ಕ್ರೋಮ್ ಫೀನಿಶಿಂಗ್ ಪಡೆಯುತ್ತದೆ. ಈ ಎಸ್‍ಯುವಿಯ AX7L ರೂಪಾಂತರವು ಕಸ್ಟಮ್ ಸೀಟ್ ಪ್ರೊಫೈಲ್‌ಗಳಿಗೆ ಲಿಂಕ್ ಮಾಡಲಾದ ಮೊದಲ-ಇನ್-ಸೆಗ್ಮೆಂಟ್ ಮೆಮೊರಿ ORVM ಗಳೊಂದಿಗೆ ಮತ್ತು AX7 ಮತ್ತು AX7L ರೂಪಾಂತರಗಳಲ್ಲಿ ಕ್ಯಾಪ್ಟನ್ ಸೀಟ್‌ಗಳ ಆಯ್ಕೆಯೊಂದಿಗೆ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳೊಂದಿಗೆ ಬಂದಿದೆ.

ಎಂಜಿನ್: 2024ರ ಮಹೀಂದ್ರಾ XUV700 ಎಸ್‍ಯುವಿಯ ಪೆಟ್ರೋಲ್ ಮಾದರಿಯು 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ, ಆದರೆ ಡೀಸೆಲ್ ರೂಪಾಂತರವು 2.2-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇದು ಹಿಂದಿನ ಮಾದರಿಯಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇವುಗಳ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಒಂದೇ ಆಗಿದೆ.
ಮೇ ತಿಂಗಳ ರಿಯಾಯಿತಿ: 2023ರ ಮಹೀಂದ್ರಾ XUV700 ಎಸ್‍ಯುವಿಯ ಡೀಸೆಲ್-MT, ಡೀಸೆಲ್-AT, ಮತ್ತು ಪೆಟ್ರೋಲ್-MT ನಲ್ಲಿ AX5 7-ಸೀಟರ್ ಹೊರತುಪಡಿಸಿ ಎಲ್ಲಾ ರೂಪಾಂತರಗಳ ಮೇಲೆ ರೂ. 1.5 ಲಕ್ಷದ ಫ್ಲಾಟ್ ನಗದು ರಿಯಾಯಿತಿಯನ್ನು ಘೋಷಿಸಿದೆ. ಹಾಗೆಯೇ ಮಹೀಂದ್ರಾ XUV700 (Mahindra XUV700) ಎಸ್‍ಯುವಿಯು X5 ರೂಪಾಂತರದ ಮೇಲೆ ರೂ 1.3 ಲಕ್ಷ ರಿಯಾಯಿತಿಯನ್ನು ಹೊಂದಿವೆ.

ಸದ್ಯ, ಮಹೀಂದ್ರಾ ಕಂಪನಿಯ ಈ ಜನಪ್ರಿಯ ಎಕ್ಸ್‌ಯುವಿ 700 ಎಸ್‌ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ ಕಾಣುತ್ತಿದೆ. ಹೊಸ ಮಹೀಂದ್ರಾ XUV700 (Mahindra XUV700) ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಸಫಾರಿ ಮತ್ತು MG ಹೆಕ್ಟರ್ ಪ್ಲಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications