33 ಕಿ.ಮೀ ಮೈಲೇಜ್ ನೀಡುವ ಕಾರು ಇಷ್ಟು ಕಡಿಮೆ ಬೆಲೆಯೇ? ಈ ದೀಪಾವಳಿ ಭಾರತ ಎಂದೂ ಮರೆಯೋದಿಲ್ಲ!

ಮಾರುತಿ ಸುಜುಕಿ ಇತ್ತೀಚೆಗೆ 2024ರ ಸ್ವಿಫ್ಟ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದೇ ಸ್ವಿಫ್ಟ್ ಸಿಎನ್‌ಜಿ ಮಾದರಿ ಕೂಡ ಬಿಡುಗಡೆಯಾಗಿದೆ. ಈಗ ಎಲ್ಲರ ಕಣ್ಣು ಹೊಸ ಡಿಜೈರ್ ಮೇಲಿದೆ, ಕಂಪನಿಯು ಈ ಹೊಸ ಡಿಜೈರ್ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನ ಮಾರುತಿ ಸುಜುಕಿ ಡಿಜೈರ್‌ನ ನವೀಕರಿಸಿದ ಆವೃತ್ತಿಯ ಮೊದಲ ಟೀಸರ್ ಬಿಡುಗಡೆ ಮಾಡಿದೆ. ಇದು 2024 ಡಿಜೈರ್‌ನ ಮೊದಲ ಅಧಿಕೃತ ಟೀಸರ್ ಆಗಿದ್ದು, ಬಿಡುಗಡೆ ಬಳಿಕ ಈ ಕಾರು ಟಾಟಾ ಟಿಗೋರ್, ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್ ಮುಂತಾದ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಡಿಜೈರ್ ಕಾರಿನ ಬಿಡುಗಡೆಯ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಹೊಸ ಡಿಜೈರ್ 2024ರ ಹಬ್ಬದ ಸೀಸನ್ (ದಸರಾ-ದೀಪಾವಳಿ) ಮೊದಲು ಯಾವುದೇ ಸಮಯದಲ್ಲಾದರು ದೇಶದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಾರ್ ದೇಖೋ ಪ್ರಕಾರ, ಹೊಸ ಡಿಜೈರ್ ರೂ.6.70 (ಎಕ್ಸ್ ಶೋರೂಂ) ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

2024-maruti-suzuki-dzire-1st-teaser-out

ಈ ಹಿಂದೆ ಹೊರಬಂದ ಸೋರಿಕೆಯಾದ ಚಿತ್ರಗಳ ಆಧಾರದ ಮೇಲೆ, ಮಾರುತಿ ಸುಜುಕಿ ಡಿಜೈರ್‌ನ ಇತ್ತೀಚಿನ ಆವೃತ್ತಿಯು ತನ್ನ ಹಳೆಯ ಕಾರಿಗಿಂತ ವಿಭಿನ್ನವಾಗಿದೆ. ಸ್ವಿಫ್ಟ್ ಗೆ ಹೋಲಿಸಿದರೆ ಅನೇಕ ವ್ಯತ್ಯಾಸಗಳನ್ನು ಒಳಗೊಂಡಿದೆ. ಈ ಬದಲಾವಣೆಗಳಲ್ಲಿ ಪ್ರಮುಖವಾಗಿ ಹೆಡ್‌ಲ್ಯಾಂಪ್ ಹಾಗೂ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಿದ ಮುಂಭಾಗದ ಫ್ಯಾಸಿಯಾವನ್ನು ಕಾಣಬಹುದು.

ಇದಕ್ಕೆ ಪೂರಕವಾಗಿ ಸಮತಲವಾದ ಸ್ಲಾಟ್ ವಿನ್ಯಾಸ ಮತ್ತು ಹೊಸ ಬಂಪರ್ ಹೊಂದಿರುವ ದೊಡ್ಡ ಗ್ರಿಲ್ ಅನ್ನು ಕೂಡ ಹೊಂದಿದೆ. ಸೋರಿಕೆಯಾದ ಚಿತ್ರಗಳ ಪ್ರಕಾರ ಕಾರಿನ ಹಿಂಭಾಗದಲ್ಲಿ ರ್ಯಾಪ್-ಅರೌಂಡ್ ಎಲ್ಇಡಿ ಟೈಲ್ ಲೈಟ್‌ಗಳು ಮತ್ತು ದೊಡ್ಡ ಬೂಟ್ ನೊಂದಿಗೆ ಸಜ್ಜಾಗಿದೆ. ಹೆಚ್ಚುವರಿಯಾಗಿ, ಬ್ರಾಂಡ್ ಹೊಸದಾಗಿ ವಿನ್ಯಾಸಗೊಳಿಸಿದ ಅಲಾಯ್ ವೀಲ್‌ಗಳನ್ನು ಕೂಡ ಹೊಂದಿದೆ.

2024-maruti-suzuki-dzire-1st-teaser-out

ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಹೊಸ ಡಿಜೈರ್ ಸನ್‌ರೂಫ್ ಅನ್ನು ಪಡೆದಿದೆ. ಹೌದು, ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಮಾರುತಿ ಹೊಸ ಡಿಜೈರ್‌ನೊಂದಿಗೆ ಸಿಂಗಲ್-ಪ್ಯಾನ್ ಸನ್ ರೂಫ್ ಅನ್ನು ಪರಿಚಯಿಸಲಿದೆ. ಮಾರುತಿ ಸುಜುಕಿ ಈ ಹಿಂದೆ ತನ್ನ ಕಾರುಗಳಿಗೆ ಸನ್‌ರೂಫ್ ಅನ್ನು ಪರಿಚಯಿಸಲು ಹಿಂಜರಿಯುತ್ತಿತ್ತು. ಆದರೆ ಈಗ ಸನ್‌ರೂಫ್ ಮಾರಾಟವನ್ನು ಹೆಚ್ಚಿಸಲಿದೆ ಎಂಬುದನ್ನು ಅರಿತಿದೆ.

ಇನ್ನು ಹೊಸ 2024 ರ ಮಾರುತಿ ಸುಜುಕಿ ಡಿಜೈರ್ ಇಂಟೀರಿಯರ್ ವಿಷಯಕ್ಕೆ ಬಂದರೆ ಸ್ವಿಫ್ಟ್‌ಗೆ ಕೆಲವು ಹೋಲಿಕೆಗಳನ್ನು ಹೊಂದಬಹುದು. ಫೀಚರ್ಸ್ ವಿಷಯಕ್ಕೆ ಬಂದರೆ, 9 ಇಂಚಿನ ಫ್ರೀ-ಫ್ಲೋಟಿಂಗ್ ಇನ್ಫೋಟೈನ್ಮೆಂಟ್ ಸ್ಕ್ರೀನ್ ಮತ್ತು ಕ್ಲೈಮೆಟ್ ಕಂಟ್ರೋಲ್ ವ್ಯವಸ್ಥೆಯಂತಹ ಫೀಚರ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

2024-maruti-suzuki-dzire-1st-teaser-out

ಎಂಜಿನ್ ವಿಷಯಕ್ಕೆ ಬಂದರೆ ಇದು 1.2-ಲೀಟರ್ 3 ಸಿಲಿಂಡರ್ ಝಡ್-ಸೀರಿಸ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. ಈ ಎಂಜಿನ್ 82 ಬಿಹೆಚ್‌ಪಿ ಪವರ್ ಮತ್ತು 112 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಸಿಎನ್‌ಜಿ ವಿಷಯಕ್ಕೆ ಬಂದರೆ, 69.75 ಬಿಹೆಚ್ ಪವರ್ ಮತ್ತು 101 ಎನ್ಎಂ ಟಾರ್ಕ್ ಹೊಂದಿರಲಿದೆ. ಪೆಟ್ರೋಲ್ ಯುನಿಟ್ ಎಎಂಟಿ ಆಯ್ಕೆಯೊಂದಿಗೆ ಎಂಟಿ ಗೇರ್‌ಬಾಕ್ಸ್ ಹೊಂದಿರಲಿದೆ, ಆದರೆ ಸಿಎನ್‌ಜಿನಲ್ಲಿ ಎಂಟಿ ಮಾತ್ರ ನೀಡಲಾಗುತ್ತದೆ.

ಮೈಲೇಜ್ ವಿಷಯಕ್ಕೆ ಬಂದರೆ ಹೊಸ ಡಿಜೈರ್ ಎಂಜಿನ್ ಭಾರೀ ಸುಧಾರಣೆ ಕಂಡಿದೆ. ಹೊಸ ಸ್ವಿಫ್ಟ್ ಝಡ್-ಸೀರಿಸ್ ಎಂಜಿನ್ ಇದರಲ್ಲೂ ಕಾಣಬಹುದಾಗಿದ್ದು, ಪೆಟ್ರೋಲ್‌ನಲ್ಲಿ 25 ಕಿ.ಮೀ ಮೈಲೇಜ್ ಹಾಗೂ ಸಿಎನ್‌ಜಿನಲ್ಲಿ ಬರೋಬ್ಬರಿ 33 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೊಸ ಡಿಜೈರ್ ಬಗ್ಗೆ ನಿಮ್ಮ ನಿರೀಕ್ಷೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Thursday, September 26, 2024, 15:13 [IST]
English summary
2024 maruti suzuki dzire 1st teaser out
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+