2024 Dzire: ಹೊಸ ಮಾರುತಿ ಡಿಜೈರ್ ಖರೀದಿಸಲು ಪ್ಲಾನ್ ಮಾಡಿದ್ದೀರಾ.. ಈ ವಿಷಯಗಳನ್ನು ಯಾರು ಹೇಳಲ್ಲ!
ಮಾರುತಿ ಸುಜುಕಿ (Maruti Suzuki), ಸೋಮವಾರ ಹೊಚ್ಚ ಹೊಸ ನಾಲ್ಕನೇ ತಲೆಮಾರಿನ ಡಿಜೈರ್ (4th Generation Dzire) ಸೆಡಾನ್‌ನ್ನು ಮಾರಾಟಕ್ಕೆ ತಂದಿತ್ತು. ಈ ಕಾರು, ರೂ.6.79 ಲಕ್ಷದಿಂದ ರೂ.10.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಹಾಗೂ ಝಡ್ಎಕ್ಸ್ಐ ಪ್ಲಸ್ ಎಂಬ 4 ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ನಾವಿಲ್ಲಿ ಪ್ರತಿಯೊಂದು ರೂಪಾಂತರಗಳ ವಿಶೇಷತೆ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
ಮಾರುತಿ ಸುಜುಕಿ ಡಿಜೈರ್ ಎಲ್ಎಕ್ಸ್ಐ (Maruti Suzuki Dzire LXi) ರೂಪಾಂತರ, ಸಾಕಷ್ಟು ಅತ್ಯಾಧುನಿಕವಾಗಿದೆ. 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು, 14-ಇಂಚಿನ ಸ್ಟೀಲ್ ವೀಲ್‌ಗಳು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸೀಟ್‌ಬೆಲ್ಟ್ ರಿಮೈಂಡರ್ ಸಿಸ್ಟಮ್, ರಿಮೋರ್ಟ್ ಕೀಲೆಸ್ ಎಂಟ್ರಿ, ಟಿಲ್ಟ್-ಅಡ್ಜಸ್ಟಬಲ್ ಸ್ಟೀರಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನೂತನ ಡಿಜೈರ್ ವಿಎಕ್ಸ್ಐ (Dzire VXi) ರೂಪಾಂತರ ಕೂಡ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವೀಲ್ ಕವರ್‌ನೊಂದಿಗೆ 14-ಇಂಚಿನ ಸ್ಟೀಲ್ ವೀಲ್‌ಗಳು, ಮುಂಭಾಗ (ಫ್ರಂಟ್) ವಿನೂತನವಾಗಿರುವ ಗ್ರಿಲ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸ್ಟೀರಿಂಗ್ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ವಾಯ್ಸ್ ಅಸಿಸ್ಟೆಂಟ್, ಒಟಿಎ ಅಪ್‌ಡೇಟ್‌ಗಳು, ಯುಎಸ್‌ಬಿ & ಬ್ಲೂಟೂತ್ ಕನೆಕ್ಟಿವಿಟಿ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡಿಜೈರ್ ಝಡ್ಎಕ್ಸ್ಐ (Dzire ZXi) ರೂಪಾಂತರವು ಬಹಳಷ್ಟು ಉತ್ತಮವಾಗಿದೆ. ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ಸ್, ಅಲಾಯ್ ವೀಲ್‌ಗಳು, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 4 ಸ್ಪೀಕರ್‌ಗಳು, ವೈರ್‌ಲೆಸ್ ಚಾರ್ಜರ್, ಎಂಜಿನ್ ಸ್ಟಾರ್ಟ್-ಸ್ಟಾಪ್ ಬಟನ್ ಮತ್ತು ಸ್ಮಾರ್ಟ್ ಕೀ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಮಾರುತಿ ಸುಜುಕಿ ಡಿಜೈರ್ ಝಡ್ಎಕ್ಸ್ಐ ಪ್ಲಸ್ (Maruti Suzuki Dzire ZXi+) ರೂಪಾಂತರ ಸಹ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 15-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಅರ್ಕಾಮಿಸ್-ಸೌಂಡ್ ಮ್ಯೂಸಿಕ್ ಸಿಸ್ಟಮ್ ಒಳಗೊಂಡಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.
ನೂತನ ಮಾರುತಿ ಸುಜುಕಿ ಡಿಜೈರ್ ಕಾರು, ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ ಮತ್ತು ಬ್ಲ್ಯೂಯಿಷ್ ಬ್ಯ್ಲಾಕ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಈ ಸೆಡಾನ್‌ನಲ್ಲಿ 5 ಮಂದಿ ಸುಲಭವಾಗಿ ಓಡಾಟವನ್ನು ನಡೆಸಬಹುದು. ಜೊತೆಗೆ ಪ್ರವಾಸದ ವೇಳೆಯಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 382 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇನ್ ಕೂಡ ಒಳಗೊಂಡಿದೆ.

ಈ ಡಿಜೈರ್ ಸೆಡಾನ್ 1.2-ಲೀಟರ್ 3 ಸಿಲಿಂಡರ್ ಝಡ್ ಸೀರೀಸ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟೆಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಇದರ ಪೆಟ್ರೋಲ್ ಚಾಲಿತ ರೂಪಾಂತರಗಳು 24.79 ರಿಂದ 25.71 ಕೆಎಂಪಿಎಲ್ ಹಾಗೂ ಸಿಎನ್‌ಜಿ ಚಾಲಿತ ರೂಪಾಂತರಗಳು 33.73 ಕೆಎಂ/ಕೆಜಿ ವರೆಗೆ ಮೈಲೇಜ್‌ನ್ನು ಕೊಡುತ್ತವೆ.
ಇನ್ನು, ಸುರಕ್ಷತೆಗಾಗಿ ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿರುವುದರಿಂದ ಹೊಸ ಮಾರುತಿ ಡಿಜೈರ್ ಕಾರಿನ ಮೇಲೆ ಗ್ರಾಹಕರ ವಿಶ್ವಾಸ ನೂರುಪಟ್ಟು ಹೆಚ್ಚಾಗಿದೆ. ಅದರಲ್ಲೂ ಈ ಸೆಡಾನ್ ಕೈಗೆಟುಕುವ ಬೆಲೆ ಹೊಂದಿರುವುದರಿಂದ ಬಹುತೇಕ ಖರೀದಿದಾರರು ತಮ್ಮ ಕುಟುಂಬದ ಆಯ್ಕೆಯ ವಾಹನವಾಗಿ ಪರಿಗಣಿಸಲು ಮುಂದಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications