ಅಗ್ಗದ ಬೆಲೆಯಲ್ಲಿ ಹೈಟೆಕ್ ಮಾರುತಿ ಫ್ಯಾಮಿಲಿ ಕಾರು: 360-ಡಿಗ್ರಿ ಕ್ಯಾಮೆರಾ, 6 ಏರ್‌ಬ್ಯಾಗ್, 33 ಕಿ.ಮೀ ಮೈಲೇಜ್!

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ತನ್ನ ಬಹುನಿರೀಕ್ಷಿತ ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಕಾರು ನವೆಂಬರ್ 11 ರಂದು ಬಿಡುಗಡೆಯಾಗಲಿದೆ. ಈ ಹೊಸ ಮಾರುತಿ ಡಿಜೈರ್ ಕಾರಿನ ಖರೀದಿಗಾಗಿ ಬುಕಿಂಗ್ ಪ್ರಾರಂಭವಾಗಿದೆ. ಈ ಹೊಸ ಮಾರುತಿ ಸುಜುಕಿ ಡಿಜೈರ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಕೇವಲ 11,000 ರೂ.ಗಳ ಟೋಕನ್ ಮೊತ್ತ ಪಾವತಿಸಿ ಡೀಲರ್ ಅಥವಾ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿಕೊಳ್ಳಬಹುದು.

ಹೊಸ ಮಾರುತಿ ಸುಜುಕಿ ಡಿಜೈರ್ ಕಾರನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆಯನ್ನು ಪಡೆದುಕೊಂಡಿದೆ ಮತ್ತು ಇದನ್ನು ಪರಿಪೂರ್ಣ ಫ್ಯಾಮಿಲಿ ಕಾರ್ ಎಂದು ಹೇಳಬಹುದು. ಈ ಕಾರು ಆಕರ್ಷಕ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್, ಸಾಕಷ್ಟು ಸ್ಥಳಾವಕಾಶ ಮತ್ತು ವಸ್ತುಗಳನ್ನು ಸಾಗಿಸಲು ವಿಶಾಲವಾದ ಬೂಟ್ ಸ್ಪೆಸ್ ಅನ್ನು ಹೊಂದಿರುವುದರಿಂದ ಪರ್ಫೆಕ್ಟ್ ಫ್ಯಾಮಿಲಿ ಕಾರ್ ಎಂದು ಹೇಳಬಹುದು.

Maruti Suzuki Dzire

ಹೊಸ ಮಾರುತಿ ಸುಜುಕಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ LXi, VXi, ZXi ಮತ್ತು ZXi+ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಈ ಸಬ್ ಫೂರ್ ಮೀಟರ್ ಸೆಡಾನ್ 3,995 ಎಂಎಂ ಉದ್ದ, 1,735 ಎಂಎಂ ಅಗಲ, 1,525 ಎಂಎಂ ಎತ್ತರ ಮತ್ತು 2,450 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಈ ಮಾದರಿಯು 1,375 ಕೆಜಿ ಒಟ್ಟು ವಾಹನದ ತೂಕವನ್ನು ಹೊಂದಿದೆ.

ಗಮನಾರ್ಹವಾಗಿ, ಮಾರುತಿ ಸುಜುಕಿ ಹೇಳುವಂತೆ ಎಲ್ಲಾ ರೂಪಾಂತರಗಳು ಐಡಲ್ ಸ್ಟಾರ್ಟ್-ಸ್ಟಾಪ್ (ISS) ಸಿಸ್ಟಂ ಅನ್ನು ಹೊಂದಿದೆ. ಇದರಿಂದ ಮೈಲೇಜ್ ಹೆಚ್ಚುತ್ತದೆ ಎಂದು ಎಲ್ಲರೂ ಖುಷಿ ಪಡುತ್ತಾರೆ. ಮತ್ತೊಂದು ಪ್ರಮುಖ ಅಂಶವೆಂದರೆ ಮೂರನೇ ತಲೆಮಾರಿನ ಡಿಜೈರ್ ಸೆಗ್ಮೆಂಟ್-ಮೊದಲ ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಪಡೆಯುತ್ತದೆ. ಈ ಕಾರಿಆ ಡಿಸೈನ್ ನೋಡಿದರೂ ಸೆಡಾನ್ ಐಷಾರಾಮಿ ಕಾರಿನಂತೆ ಕಾಣುತ್ತದೆ.

Maruti Suzuki Dzire

ಹೊಸ ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ LED ಹೆಡ್‌ಲ್ಯಾಂಪ್‌ಗಳು, ಸ್ಲ್ಯಾಟ್‌ಗಳೊಂದಿಗೆ ಪಾಲಿಶ್ ಮಾಡಿದ ಗ್ರಿಲ್, ಹೊಸ ಅಲಾಯ್ ವ್ಹೀಲ್ ಗಳು, ಹೊಸ LED ಟೈಲ್ ಲೈಟ್‌ಗಳು, ಆಟೋಮ್ಯಾಟಿಕ್ ಕ್ರೂಸ್ ಕಂಟ್ರೋಲ್, ಕ್ಲೈಮೇಟ್ ಕಂಟ್ರೋಲ್, ಬ್ಲೈಂಡ್-ಸ್ಪಾಟ್ ಮಾನಿಟರ್, ದೊಡ್ಡ ಫ್ರೀಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 360-ಡಿಗ್ರಿ ಮುಂತಾದ ಆಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ನೀಡಲಾದ ಅದೇ ಎಂಜಿನ್‌ ಅನ್ನು ಹೊಸ ತಲೆಮಾರಿನ ಡಿಜೈರ್‌ನಲ್ಲೂ ನೀಡಲಾಗಿದೆ. ಡಿಜೈರ್ ಕಾರು 1.2 - ಲೀಟರ್ ಝಡ್ - ಸೀರಿಸ್ 3 - ಸಿಲಿಂಡರ್ ಎಂಜಿನ್ ಅನ್ನು ಪಡೆದಿದೆ. ಇದು 5700 ಆರ್‌ಪಿಎಂನಲ್ಲಿ 80 ಬಿಹೆಚ್‍ಪಿ ಪವರ್ ಮತ್ತು 4300 ಆರ್‌ಪಿಎಂನಲ್ಲಿ 112 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Maruti Suzuki Dzire

ಇನ್ನು ಹೊಸ ಡಿಜೈರ್ ಕಾರಿನ ಎಂಜಿನ್‌ನೊಂದಿಗೆ 5 - ಸ್ಪೀಡ್ ಮ್ಯಾನುವಲ್ ಮತ್ತು 5 - ಸ್ಪೀಡ್ ಆಟೋಮೇಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗುವುದು. ಬಿಡುಗಡೆಯಾದ ಕೂಡಲೇ, ಸಿಎನ್‌ಜಿ ಆಯ್ಕೆಯನ್ನು ಸಹ ಪರಿಚಯಿಸುವ ನಿರೀಕ್ಷೆಗಳಿವೆ. ಈಗಾಗಲೇ ಬಿಡುಗಡೆಯಾಗಿರುವ ಸ್ವಿಫ್ಟ್ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದ್ದು, ಡಿಜೈರ್ ಕೂಡ ಭಾರೀ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯಿದೆ.

ಹೊಸ ಮಾರುತಿ ಸುಜುಕಿ ಡಿಜೈರ್ ರೂ.6.70 (ಎಕ್ಸ್ ಶೋರೂಂ) ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪೆಟ್ರೋಲ್‌ನಲ್ಲಿ 25 ಕಿ.ಮೀ ಮೈಲೇಜ್ ಹಾಗೂ ಸಿಎನ್‌ಜಿನಲ್ಲಿ ಬರೋಬ್ಬರಿ 33 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹೊಸ ತಲೆಮಾರಿನ ಸ್ವಿಫ್ಟ್ ಕಾರು, ಕಂಪನಿ ಹೇಳಿಕೊಂಡಂತೆ ಇದೇ ಅಂಕಿಅಂಶಗಳ ಮೈಲೇಜ್ ನೀಡುತ್ತಿದೆ.

ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ಜನರೇಷನ್ ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ ಆರು ಏರ್‌ ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಎರಡನ್ನೂ ಒಳಗೊಂಡಿದೆ.

Article Published On: Thursday, November 7, 2024, 11:43 [IST]
English summary
2024 maruti suzuki dzire unveiled variants features details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+