2024 Swift: ಪ್ರಮುಖ ನಗರಗಳಲ್ಲಿ ನೂತನ ಮಾರುತಿ ಸುಜುಕಿ ಸ್ವಿಫ್ಟ್ ಆನ್-ರೋಡ್ ಬೆಲೆ ಎಷ್ಟಿದೆ?

ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಮೇ.9 ರಂದು ನೂತನ 'ಸ್ವಿಫ್ಟ್‌' ಹ್ಯಾಚ್‌ಬ್ಯಾಕ್‌ನ್ನು ಪರಿಚಯಿಸಿತ್ತು. ಸದ್ಯ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಕಾರು ಹೊಂದಿರುವ ಆನ್-ರೋಡ್ ದರದ ಬಗ್ಗೆ ವಿವರಗಳು ಲಭ್ಯವಾಗಿವೆ.

ನೂತನ ಮಾರುತಿ ಸುಜುಕಿ ಸ್ವಿಫ್ಟ್‌ (Maruti Swift) ಕಾರಿನ ಟಾಪ್ ಎಂಡ್ ಮಾಡೆಲ್ (ಗರಿಷ್ಠ ಶ್ರೇಣಿ) ಆಗಿರುವ 'ಝಡ್ಎಕ್ಸ್ಐ ಪ್ಲಸ್ ಡುಯಲ್-ಟೋನ್ ಎಎಂಟಿ' ಬೆಂಗಳೂರಿನಲ್ಲಿ ರೂ.11.42 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ಹಾಗೆಯೇ ದೆಹಲಿಯಲ್ಲಿ ರೂ.10.8 ಲಕ್ಷ, ಮುಂಬೈನಲ್ಲಿ ರೂ.11.20 ಲಕ್ಷ, ಚೆನ್ನೈನಲ್ಲಿ ರೂ.11.35 ಲಕ್ಷ, ಹೈದರಾಬಾದ್‌ನಲ್ಲಿ ರೂ.11.3 ಲಕ್ಷ, ಕೋಲ್ಕತ್ತಾದಲ್ಲಿ ರೂ.11.1 ಲಕ್ಷ ಹಾಗೂ ಕೊಚ್ಚಿಯಲ್ಲಿ ರೂ.11.35 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ.

2024 Maruti Suzuki Swift Car On-Road Price In Top Cities Include Bengaluru

ಈ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ ಆಕರ್ಷಕವಾದ ವಿನ್ಯಾಸ (ಡಿಸೈನ್)ವನ್ನು ಕೂಡ ಒಳಗೊಂಡಿದ್ದು, ನವೀನವಾಗಿರುವ ಬಂಪರ್‌ಗಳು, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, 15-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್, ಮತ್ತು ಎಲ್ಇಡಿ ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ. ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗಲಿದ್ದು, 5 ಮಂದಿ ಸುಲಭವಾಗಿ ಓಡಾಡಬಹುದು.

ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ ಕಾರು 1.2-ಲೀಟರ್ 3-ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 80 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 112 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ (ಎಎಂಟಿ) ಗೇರ್ ಬಾಕ್ಸ್‌ನೊಂದಿಗೂ ಖರೀದಿಗೆ ಲಭ್ಯವಿದ್ದು, 24.8 ರಿಂದ 25.72 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

2024 Maruti Suzuki Swift Car On-Road Price In Top Cities Include Bengaluru

ಈ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ನವೀನ ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ. 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಯುಎಸ್‌ಬಿ ಟೈಪ್-ಎ - ಟೈಪ್-ಸಿ ಪೋರ್ಟ್‌, ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳಿವೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ನ್ನು ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ. 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಅನ್ನು ಒಳಗೊಂಡಿದೆ. ಈ ಕಾರಿಗೆ ಟಾಟಾ ಪಂಚ್ ಮತ್ತು ಹುಂಡೈ ಎಕ್ಸ್‌ಟರ್ ಮಾದರಿಗಳು ದೊಡ್ಡ ಎದುರಾಳಿಯಾಗಿವೆ.

2024 Maruti Suzuki Swift Car On-Road Price In Top Cities Include Bengaluru

ಸ್ವಿಫ್ಟ್ ಕಾರು ಝಡ್ಎಕ್ಸ್ಐ ಪ್ಲಸ್ ಡುಯಲ್-ಟೋನ್ ಎಎಂಟಿ ಮಾತ್ರವಲ್ಲದೆ, ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗಲಿದ್ದು, ಅದಕ್ಕೆ ಅನುಗುಣವಾಗಿ ಆನ್-ರೋಡ್ (On-Road) ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂನ್ನು ಸಂಪರ್ಕಿಸಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, May 28, 2024, 18:52 [IST]
English summary
2024 maruti suzuki swift car on road price in top cities include bengaluru
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+