Maruti Suzuki: ಹೊಸ ಸ್ವಿಫ್ಟ್, ಡಿಜೈರ್‌ ಕಾರುಗಳು ಹೇಗಿರಲಿವೆ?.. ಸಖತ್ ಫೀಚರ್ಸ್, 24 ಕಿ.ಮೀ ಮೈಲೇಜ್!

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited), ನವೀಕರಿಸಿದ 2024ರ ಸ್ವಿಫ್ಟ್ (Swift) ಮತ್ತು ಡಿಜೈರ್‌ (Dzire) ಕಾರುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲು ತಯಾರಿಯನ್ನು ನಡೆಸುತ್ತಿದೆ. ಈಗಾಗಲೇ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಇವೆರೆಡು ಮಾದರಿಗಳು ಕಂಡುಬಂದಿವೆ.

ಮುಂಬರಲಿರುವ ಈ ಸ್ವಿಫ್ಟ್ ಹಾಗೂ ಡಿಜೈರ್‌ ಕಾರುಗಳು ಹೊರ ಹಾಗೂ ಒಳಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದಿರಲಿವೆ. ಕೆಲವೇ ತಿಂಗಳ ಹಿಂದೆ, ಜಪಾನ್‌ನಲ್ಲಿ ಸುಜುಕಿ ಹೊಸ ತಲೆಮಾರಿನ 'ಸ್ವಿಫ್ಟ್' ಆವೃತ್ತಿಯನ್ನು ಬಹಿರಂಗಪಡಿಸಿತ್ತು. ಆದರೆ, ಯಾವುದೇ ವಿವರಗಳನ್ನು ತಿಳಿಸಿರಲಿಲ್ಲ. ಇದು ಬಹುತೇಕ ಹಳೆಯ ಮಾದರಿಗೆ ಹೋಲಿಕೆಯಾಗುತ್ತಿತ್ತು. ಭಾರತದಲ್ಲಿ ಬರಲಿರುವ ನೂತನ ಸ್ವಿಫ್ಟ್ ನವೀನ ಬಂಪರ್ ಮತ್ತು ಅತ್ಯಾಧುನಿಕ ಅಲಾಯ್ ವೀಲ್ಸ್ ಒಳಗೊಂಡಿರುವ ಸಾಧ್ಯತೆಯಿದೆ.

2024 Maruti Suzuki Swift Dzire Launch Soon Super Features 24 Km Mileage Expected

ಡಿಜೈರ್‌ (Dzire) ಒಂದು ಸೆಡಾನ್ ಆಗಿದ್ದು, ಈ ಕಾರನ್ನು ಎಲ್ಲಿಯೂ ಪ್ರದರ್ಶನ ಮಾಡಲಾಗಿಲ್ಲ. ಆದರೂ ಪ್ರಾಯೋಗಿಕ ಸಂಚಾರ ನಡೆಸುವಾಗ ಸ್ಪೈ (ಪತ್ತೆದಾರಿ) ಚಿತ್ರಗಳು ಲಭ್ಯವಾಗಿವೆ. ಇದು ಮುಂಭಾಗ ಹಾಗೂ ಹಿಂಭಾಗ ಆಕರ್ಷಕ ವಿನ್ಯಾಸವನ್ನು ಹೊಂದಿರಲಿದ್ದು, ಹೊಚ್ಚ ಹೊಸ ಹೆಡ್‌ಲ್ಯಾಂಪ್ಸ್, ಅತ್ಯುತ್ತಮ ಟೈಲ್ ಲ್ಯಾಂಪ್ಸ್ ಅನ್ನು ಪಡೆದಿರುವ ನಿರೀಕ್ಷೆಯಿದೆ.

ಮುಂಬರಲಿರುವ ನೂತನ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್‌ ಕಾರುಗಳೆರೆಡು ಒಳಭಾಗವು ಹೆಚ್ಚು ಆಕರ್ಷಣೀಯವಾಗಿರಲಿವೆ. ಸ್ವಿಫ್ಟ್ ಬ್ಲ್ಯಾಕ್ & ಆಫ್-ವೈಟ್ ಥೀಮ್ ಹೊಂದಿದ್ದರೆ, ಡಿಜೈರ್ ಬೀಜ್ ಜೊತೆಯಲ್ಲಿ ಬ್ಲ್ಯಾಕ್ ಥೀಮ್ ಒಳಗೊಂಡಿರುವ ನಿರೀಕ್ಷೆಯಿದೆ. ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್ ವಿನ್ಯಾಸ ಬಲೆನೊ ಕಾರಿಗೆ ಹೋಲಿಕೆಯಾಗಲಿದ್ದು, ಅದೇ ರೀತಿಯ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪಡೆದಿರುವ ಸಾಧ್ಯತೆಯಿದೆ.

2024 Maruti Suzuki Swift Dzire Launch Soon Super Features 24 Km Mileage Expected

ಹೊಸ ಮಾರುತಿ ಸುಜುಕಿ ಸ್ವಿಫ್ಟ್ (Swift) ಮತ್ತು ಡಿಜೈರ್‌ (Dzire) ಮಾದರಿಗಳು 3-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಪಡೆದಿರಲಿದ್ದು, 80 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 108 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಬಹುದು ಎನ್ನಲಾಗಿದೆ. ಅದಕ್ಕೆ ಸರಿಹೊಂದುವಂತೆ 24 ಕೆಎಂಪಿಎಲ್ ಮೈಲೇಜ್ ನೀಡಲಿವೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ, ಭಾರತದಲ್ಲಿ ಖರೀದಿಗೆ ಲಭ್ಯವಿರುವ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 22.38 ರಿಂದ 30.90 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಡಿಜೈರ್‌ ರೂ.6.57 ಲಕ್ಷದಿಂದ ರೂ.9.39 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಇದು ಕೂಡ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಒಳಗೊಂಡಿದ್ದು, 22.41 ರಿಂದ 31.12 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ನಂತಹ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 22, 2024, 16:36 [IST]
English summary
2024 maruti suzuki swift dzire launch soon super features 24 km mileage expected
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+