Maruti Dzire: ಬಿಡುಗಡೆ ಮುನ್ನವೆ ಕಾಣಿಸಿಕೊಂಡ ನ್ಯೂ-ಜೆನ್ ಸ್ವಿಫ್ಟ್ ಡಿಜೈರ್: ಅಗ್ಗದ ಬೆಲೆಗೆ ಸನ್‌ರೂಫ್!
ಕಳೆದ ಕೆಲವು ತಿಂಗಳುಗಳಿಂದ ಮೂರನೇ ತಲೆಮಾರಿನ ಮಾರುತಿ ಡಿಜೈರ್‌ನ ಪರೀಕ್ಷಾ ಹಂತದಲ್ಲಿದ್ದ ಕಾರುಗಳು ಬಿಡುಗಡೆಗೂ ಮುನ್ನ ಹಲವು ಬಾರಿ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದವು. ಈಗ ಹೊಸ ಡಿಜೈರ್ ಕಾರನ್ನು ಭಾರತದಲ್ಲಿ ಪರಿಚಯಿಸಲು ಕಂಪನಿ ಸಜ್ಜಾಗುತ್ತಿದೆ. ನವೆಂಬರ್ 11 ರಂದು ಅಧಿಕೃತವಾಗಿ ಅನಾವರಣಗೊಳಿಸುವುದಾಗಿ ಮಾರುತಿ ಘೋಷಿಸಿದೆ. ಸದ್ಯ ಕುತೂಹಲ ಹೆಚ್ಚಿಸಿರುವ ಹೊಸ ತಲೆಮಾರಿನ ಡಿಜೈರ್ ಬಿಡುಗಡೆ ಮುನ್ನವೇ ಮತ್ತೊಮ್ಮೆ ಅಚ್ಚರಿಗೊಳಿಸುವ ಫೋಟೋಗಳು ಹೊರಬಿದ್ದಿವೆ. ಹೌದು ಸಂಪೂರ್ಣ ನಿರ್ಮಾಣಗೊಂಡಿರುವ ಹೊಸ ಡಿಜೈರ್ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಹಿಂದಿನ ತಲೆಮಾರಿನ ಡಿಜೈರ್‌ಗಿಂತ ಸಾಕಷ್ಟು ಸ್ಟೈಲಿಷ್ ಲುಕ್ ಪಡೆದುಕೊಂಡಿರುವುದು ಚಿತ್ರಗಳು ಬಹಿರಂಗಪಡಿಸಿವೆ.
ವಿನ್ಯಾಸ: ಮೊದಲೇ ಹೇಳಿದಂತೆ ಮಾರುತಿ ಕಂಪನಿಯು ಡಿಜೈರ್‌ನ ವಿನ್ಯಾಸವನ್ನು ಸಂಪೂರ್ಣವಾಗಿ ನವೀಕರಿಸಿದೆ. ಸುಜುಕಿ ಲೋಗೊ ಹೊಂದಿರುವ ಹೊಸ ಗ್ರಿಲ್ ಮತ್ತು ಪಿಯಾನೋ ಬ್ಲ್ಯಾಕ್ ಮತ್ತು ಕ್ರೋಮ್ ಎಲಿಮೆಂಟ್‌ಗಳನ್ನು ಒಳಗೊಂಡಿರುವ ಮುಂಭಾಗದ ಬಾಕ್ಸಿ ವಿನ್ಯಾಸವನ್ನು ನೀಡಲಾಗಿದೆ. ಎರಡು ಹೊಸ ಎಲ್ಇಡಿ ಹೆಡ್ ಲ್ಯಾಂಪ್‌ಗಳನ್ನು ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಟರ್ನ್ ಇಂಡಿಕೇಟರ್‌ಗಳೊಂದಿಗೆ ಜೋಡಿಸಲಾಗಿದೆ.

ಮತ್ತೊಂದು ಪ್ರಮುಖಂಶವೆಂದರೆ ಸಿಂಗಲ್ ಪ್ಯಾನಲ್ ಸನ್‌ರೂಫ್ ಕೂಡ ನೀಡಲಾಗಿದೆ. ಫಾಗ್ ಲ್ಯಾಂಪ್ ಅನ್ನು ಶೈನಿ ಬ್ಲಾಕ್ ಬೆಜೆಲ್ ಒಳಗೆ ಇರಿಸಲಾಗಿದ್ದು, ಗ್ರಿಲ್ ಮತ್ತು ಏರ್ ಡ್ಯಾಮ್ ಅನ್ನು ಫ್ಲಾಟ್ ಸ್ಲಾಟ್‌ಗಳೊಂದಿಗೆ ಬ್ಲಾಕ್-ಔಟ್ ಅಸೆಂಬ್ಲಿಯೊಳಗೆ ಇರಿಸಲಾಗಿದೆ. ಸೈಡ್‌ನಲ್ಲಿ ಮೆಟಲ್ ಫಿನಿಶ್ ವಿಂಡೋ ಸಿಲ್‌ಗಳು ಮತ್ತು ಹೊಸ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳೊಂದಿಗೆ ಡಿಸೈನ್ ಮಾಡಲಾಗಿದೆ.
ಬೆಲೆ: ಕಾರ್ ದೇಖೋ ಪ್ರಕಾರ, ಮಾರುತಿ ಸುಜುಕಿ ಕಂಪನಿಯು ಹೊಸ ಡಿಜೈರ್ ಅನ್ನು ರೂ.6.70 (ಎಕ್ಸ್ ಶೋರೂಂ) ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೈಲೇಜ್ ವಿಷಯಕ್ಕೆ ಬಂದರೆ ಪೆಟ್ರೋಲ್‌ನಲ್ಲಿ 25 ಕಿ.ಮೀ ಮೈಲೇಜ್ ಹಾಗೂ ಸಿಎನ್‌ಜಿನಲ್ಲಿ ಬರೋಬ್ಬರಿ 33 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಎಂಜಿನ್: ಹೊಸ ಡಿಜೈರ್ ತನ್ನ ಒಡಹುಟ್ಟಿದ ಸ್ವಿಫ್ಟ್ ಕಾರಿನಿಂದ 1.2-ಲೀಟರ್ ಮೂರು ಸಿಲಿಂಡರ್ ಝಡ್-ಸೀರಿಸ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಎರವಲು ಪಡೆಯಲಿದೆ. ಈ ಎಂಜಿನ್ 81 ಬಿಹೆಚ್‌ಪಿ ಪವರ್ ಮತ್ತು 111.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆ ನೀಡಲಾಗುವುದು. ಹಾಗೆಯೇ ಡಿಜೈರ್ ಸಿಎನ್‌ಜಿ ಕೂಡ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು.
ವೈಶಿಷ್ಟ್ಯಗಳು: ಒಳಾಂಗಣ ವಿನ್ಯಾಸವು ಹೊಸ ಸ್ವಿಫ್ಟ್ ನಂತೆಯೇ ಇರಲಿದ್ದು, 9 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಕಡಿಮೆ ವೇರಿಯೆಂಟ್‌ಗಳು 7 ಇಂಚಿನ ಟಚ್ ಸ್ಕ್ರೀನ್ ಹೊಂದಿರಲಿವೆ. ಹಳೆಯ ಡಿಜೈರ್‌ಗೆ ಹೋಲಿಸಿಕೊಂಡರೆ ಸಾಕಷ್ಟು ಬದಲಾವಣೆಗಳು ಇಂಟೀರಿಯರ್‌ನಲ್ಲೂ ಮಾಡಲಾಗಿದೆ. ಈ ಬಾರಿ ಹೆಚ್ಚು ಪ್ರೀಮಿಯಂ ಆಗಿ ಒಳಾಂಗಣವನ್ನು ಡಿಸೈನ್ ಮಾಡಲಾಗಿದೆ.

ಹೊಸ ಡಿಜೈರ್‌ನೊಂದಿಗೆ ನೀಡಲಾಗುವ ಇತರ ವೈಶಿಷ್ಟ್ಯಗಳಲ್ಲಿ ವೈರ್ ಲೆಸ್ ಫೋನ್ ಚಾರ್ಜರ್, 360-ಡಿಗ್ರಿ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ - ಇನ್ಫರ್‌ಮೇಷನ್ ಡಿಸ್ಪ್ಲೇ ಹೊಂದಿರುವ ಸೆಮ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಆಗಿ ಮಡಚಬಹುದಾದ ಮತ್ತು ಸರಿಹೊಂದಿಸಬಹುದಾದ ಒಆರ್‌ವಿಎಂಗಳು ಮತ್ತು ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸೇರಿವೆ.
ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ತಲೆಮಾರಿನ ಮಾರುತಿ ಡಿಜೈರ್, ಆರು ಏರ್ ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಎರಡನ್ನೂ ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








