ಕೊನೆಗೂ ಹೊರಬಿತ್ತು 2024 ಮಾರುತಿ ಸ್ವಿಫ್ಟ್‌ ಬೆಲೆ: ಸ್ಪರ್ಧೆಗೆ ಬಿದ್ದು ಇತರ ಕಾರುಗಳ ಬೆಲೆಯೂ ಇಳಿಯಬಹುದೇ?

ಮಾರುತಿ ಸುಜುಕಿ ಲಾಂಚ್ ಎಂದರೆನೇ ಹಾಗೆ. ಭಾರತೀಯ ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಗೆ ಹೆಚ್ಚು ಫೀಚರ್‌ಗಳು ಮತ್ತು ಅವರ ಜೇಬಿಗೆ ಕತ್ತರಿ ಬೀಳದಂತೆ ಕಾರು ನಿರ್ಮಾಣ ಮಾಡುವುದರಲ್ಲಿ ಈ ಕಂಪನಿ ಎತ್ತಿದ ಕೈ. ಇದೀಗ ಅತೀ ಹೆಚ್ಚು ನಿರೀಕ್ಷೆಗಳು ಮತ್ತು ಕುತೂಹಲದಿಂದ ಕಾಯುತ್ತಿರುವ ಕಾರೆಂದರೆ ಅದು ಹೊಸ ಸ್ವಿಫ್ಟ್‌.

ಈಗಾಗಲೇ ಈ ಕಾರಿನ ಫೀಚರ್‌ಗಳು ಮತ್ತು ಇತರ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಕಷ್ಟು ಹೊಸ ಫೀಚರ್‌ಗಳು ಮತ್ತು ಹೈಬ್ರಿಡ್‌ ಎಂಜಿನ್‌ ಜೊತೆ ಭಾರತಕ್ಕೆ ಈ ಕಾರು ಕಾಲಿಡಲಿದೆ ಎಂದು ಮಾಹಿತಿ ನೀಡಿರುವ ಅಧಿಕೃತ ಮೂಲಗಳು ಈ ಕಾರಿನ ಬೆಲೆಯನ್ನು ಮಾತ್ರ ಇನ್ನೂ ಹೊರೆಗೆ ಬಿಟ್ಟಿಲ್ಲ. ಆದರೆ ಕೆಲವು ಕಾರು ಪಂಡಿತರು ಈ ಕಾರಿನ ಬೆಲೆಯನ್ನು ಲೆಕ್ಕಾಚಾರ ಹಾಕಿದ್ದು, ಇದರ ಬೆಲೆ ಎಷ್ಟಿರಬಹುದು ಎಂಬುದನ್ನು ಹೊರಬಿಟ್ಟಿದ್ದಾರೆ.

2024 Maruti Suzuki Swift Expected Price Revealed

ಮಾಹಿತಿಗಳ ಪ್ರಕಾರ ಹೊಸ 2024 ಮಾರುತಿ ಸುಜುಕಿ ಸ್ವಿಫ್ಟ್‌ (2024 Maruti Suzuki Swift) ಬೆಲೆ ಮಧ್ಯಮ ವರ್ಗದವರಿಗೆ ಖರೀದಿಸಲು ಸಾಧ್ಯವಿರುವಷ್ಟು ಇರಲಿದೆ ಎಂದು ತಿಳಿದು ಬಂದಿದೆ. ಈ ಕಾರಿನ ಬೆಲೆ ಸದ್ಯಕ್ಕೆ ರೂ7.05 lakh - 10.51 ಲಕ್ಷ ರೂಗಳ ಆಸುಪಾಸಿನಲ್ಲಿ ಇದ್ದು, ಹೊಸ ಮಾಡೆಲ್‌ಗೆ ಖಂಡಿತವಾಗಿಯೂ ಇದಕ್ಕಿಂತ ಹೆಚ್ಚೇ ಇರಲಿದೆ ಎಂಬುದು ಕಾರು ಪಂಡಿತರ ಅಭಿಪ್ರಾಯ. ಇದಕ್ಕೆ ಪ್ರಮುಖ ಕಾರಣ ಹೊಸ ಎಂಜಿನ್‌ಗಳು ಮತ್ತು ಇತರ ಫೀಚರ್‌ಗಳು.

ಹೊಸ 2024 ಮಾರುತಿ ಸುಜುಕಿ ಸ್ವಿಫ್ಟ್ ಮಾರುಕಟ್ಟೆಗೆ ಬದ ಮೇಲೆ ಸುಮಾರು ರೂ 7.50 ಲಕ್ಷದಿಂದ ರೂ 11.15 ಲಕ್ಷದವರೆಗೂ ಬೆಲೆ ಬಾಳಲಿದೆ ಎಂದು ತಿಳಿದು ಬಂದಿದೆ. ಅಂದರೆ ಈಗಿರುವ ಕಾರಿಗಿಂತಲೂ ಸುಮಾರು 40 ರಿಂದ 80 ಸಾವಿರದ ರೂಗಳ ವರೆಗೆ ಹೆಚ್ಚು ಬೆಲೆ ಹೊಸ ಕಾರಿಗೆ ಇರಲಿದೆ ಎನ್ನಲಾಗುತ್ತಿದೆ. ಈ ಕಾರಿನಲ್ಲಿ ಸದ್ಯಕ್ಕೆ ನಿರೀಕ್ಷೆ ಮಾಡಬಹುದಾದ ವಿಷಯವೆಂದರೆ ಅದು ಹೊಸ ಎಂಜಿನ್‌.

2024 Maruti Suzuki Swift Expected Price Revealed

ಮಾರುತಿ ಸುಜುಕಿ 2024, ಹೈಬ್ರಿಡ್‌ ಎಂಜಿನ್‌ ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಮೂಲಕ ಈಗಿರುವ ಮಾರುತಿ ಸುಜುಕಿ ಸ್ವಿಫ್ಟ್‌ಗಿಂತಲೂ, ಅಧಿಕ ಮೈಲೇಜ್‌ ಮತ್ತು ಹೆಚ್ಚು ರಿಫೈನ್‌ ಆಗಿರುವ ಎಂಜಿನ್‌ ಈ ಕಾರಿನಲ್ಲಿ ಸಿಗಲಿದೆ ಎನ್ನಲಾಗುತ್ತಿದೆ. ಸಾಧಾರಣವಾಗಿ ಸ್ವಿಫ್ಟ್‌ ಉತ್ತಮ ಮೈಲೇಜ್‌ ನೀಡುತ್ತಿದೆಯಾದರೂ, ಹೈಬ್ರಿಡ್‌ ಎಂಜಿನ್‌ ಬಂದರೆ ಈ ಕಾರು ಏನಿಲ್ಲವೆಂದರೂ ಸುಮಾರು 35 ಕಿಮೀ ಮೈಲೇಜ್‌ ನೀಡಲಿದೆ ಎಂದು ಹೇಳಲಾಗುತ್ತಿದೆ.

ಮುಂಬರಲಿವ ಈ ಕಾರು, 1.2 - ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ - ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆಯಿದ್ದು, 30 - 35 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ. ಮತ್ತೊಂದು, ನಾನ್ ಹೈಬ್ರಿಡ್ 1.2 - ಲೀಟರ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಆಯ್ಕೆಯೊಂದಿಗೂ ಖರೀದಿದಾರಿಗೆ ಲಭ್ಯವಾಗಬಹುದು.

2024 Maruti Suzuki Swift Expected Price Revealed

ಅಲ್ಲದೆ, ನೂತನ ಸ್ವಿಫ್ಟ್, ಮರು - ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್‌, ಡ್ಯುಯಲ್ - ಟೋನ್ ವೀಲ್ಸ್ ಕೂಡ ಹೊಂದಿದೆ. ಇದನ್ನು ಜಾಗತಿಕವಾಗಿ ಪ್ರದರ್ಶಿಸಲಾದ ಮಾದರಿಯಲ್ಲಿ ನೋಡಬಹುದು. ಸುರಕ್ಷತೆಯ ಸಲುವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಆಗಬಹುದು ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 29, 2024, 19:06 [IST]
English summary
2024 maruti suzuki swift expected price revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+