ಕೊನೆಗೂ 2024 ಮಾರುತಿ ಸ್ವಿಫ್ಟ್ ಬುಕಿಂಗ್ ಆರಂಭಿಸಿದ ಕಂಪನಿ: ರಾಶಿ ಫೀಚರ್ ಕಂಡು ಗ್ರಾಹಕರು ಫಿಧಾ!
2024 ರ ಮಾರುತಿ ಸುಜುಕಿ ಸ್ವಿಫ್ಟ್ ಯಾವಾಗ ಲಾಂಚ್ ಆಗುತ್ತದೆ ಎಂದು ಹಲವರು ಕಾಯುತ್ತಾ ಕುಳಿತಿರುವುದು ಹೊಸದೇನಲ್ಲ. ಹಲವರು ಹೊಸ ಕಾರನ್ನು ಕೊಳ್ಳಲು ಮುಂದಾದರೂ, ಈ ಕಾರು ಲಾಂಚ್ ಆದಮೇಲೆ ಕಾರು ಕೊಳ್ಳೋಣ ಎಂದು ತಮ್ಮ ಯೋಜನೆಯನ್ನು ಮುಂದಕ್ಕೆ ಹಾಕಿರುವವರೇ ಹೆಚ್ಚು. ಅಂತಹವರಿಗೆ ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ.
ಮಾಹಿತಿಗಳ ಪ್ರಕಾರ ಮೇ 9, 2024 ರಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಲಿದೆ ಎಂಬ ಮಾಹಿತಿಗಳು ಹೊರಬಿದ್ದಿರುವುದರ ಜೊತೆಗೆ ಇದೀಗ ಈ ಕಾರಿನ ಬುಕಿಂಗ್ ಸಹ ಓಪನ್ ಆಗಿದೆ. ಕಂಪನಿ ಇದೀಗ ಔದ್ಯೋಗಿಕವಾಗಿ ಈ ಕಾರಿನ ಬುಕಿಂಗ್ ಅನ್ನು ಸ್ವೀಕರಿಸುತ್ತಿದ್ದು, ಈ ಕಾರು ಕೊಳ್ಳಬೇಕು ಎಂದುಕೊಂಡಿರುವವರು ಸುಮಾರು 11,000 ರೂಗಳನ್ನು ಪಾವತಿಸಿ ಬುಕ್ ಮಾಡಬಹುದಾಗಿದೆ.

ಲಾಂಚ್ ಆದ ಬಳಿಕ ಈ ಕಾರಿನ ಡೆಲಿವರಿಯನ್ನು ಕಂಪನಿಯು ಜೂನ್ ತಿಂಗಳಿಂದ ಆರಂಭಿಸಿಲಿದೆ ಎಂದು ಕಂಪನಿ ಮೂಲಗಳು ತಿಳಿಸಿದೆ. ಈ ಕಾರಿನ ಲಾಂಚ್ ಬಳಿಕ ಇದೇ ವರ್ಷದ ಮೊದಲಾರ್ಧದ ನಂತರ ಮಾರುತಿ ಸುಜುಕಿ ಸ್ವಿಫ್ಟ್ (2024 Maruti Suzuki Swift) ಡಿಸೈರ್ ಅನ್ನು ಸಹ ಮಾರುತಿ ಭಾರತೀಯ ಮಾರುಕಟ್ಟೆಗೆ ಇಳಿಸಲಿದ್ದು, ಅದನ್ನೂ ಸಹ ಜನರು ಎದುರು ನೋಡುತ್ತಿದ್ದಾರೆ.
ಈ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಕಳೆದ ಬರಿಯ ಮಾದರಿಗಿಂತಲೂ ಹೆಚ್ಚು ಅಪ್‌ಡೇಟ್ ಆಗಿದೆ. ಸ್ಟೈಲ್ ಮತ್ತು ಫೀಚರ್‌ಗಳಲ್ಲಿ ಈ ಕಾರು ಇದೀಗ ಹಿಂದೆಂದಿಗಿಂತಲೂ ಒಂದು ಹೆಜ್ಜೆ ಮುಂದಿದೆ. ಈ ಕಾರಿನಲ್ಲಿ ಆಗಿರುವ ಬಹುದೊಡ್ಡ ಬದಲಾವಣೆಗಳಲ್ಲಿ ಎಂಜಿನ್ ಸಹ ಒಂದು. ಇದೀಗ ಈ ಕಾರಿನಲ್ಲಿ ಹೊಸ ಝೆಡ್ ಸರಣಿಯ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಲಭ್ಯವಾಗುತ್ತಿದೆ. ಪ್ರಮುಖವಾಗಿ ಈ ಕಾರು ನಿಯೋಸ್ ಐಟೆನ್ ಮತ್ತು ಟಿಯಾಗೋ ಕಾರುಗಳಿಗೆ ಸ್ಫರ್ಧೆಯನ್ನು ನೀಡಲಿದೆ.

ಈ ಕಾರಿನ ವಿನ್ಯಾಸವನ್ನು ಗಮನಿಸುವುದಾದರೆ, ಇದರಲ್ಲಿ ಹೊಸದಾಗಿ ಡಿಸೈನ್ ಮಾಡಲಾಗಿರುವ ಫ್ರಂಟ್ ಬಂಪರ್ ಸಿಗಲಿದೆ. ಕಪ್ಪು ಬಣ್ಣದಿಂದ ಆವೃತವಾಗಿರುವ ಗ್ರಿಲ್ ಈ ಕಾರಿನಲ್ಲಿ ಸಿಗಲಿದ್ದು, ಇದು ಈ ಕಾರಿನ ನೋಟವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಉಳಿದಂತೆ ಈ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳು ಸಿಗಲಿದೆ. ಇದನ್ನು ಸಹ ಮಾರುತಿ ಸುಜುಕಿ ಮರು ವಿನ್ಯಾಸಗೊಳಿಸಿದೆ ಎಂದು ತಿಳಿದು ಬಂದಿದೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ . ರೂಪಾಂತರಗಳಿಗೆ ಅನುಗುಣವಾಗಿ 22.38 - 22.56 kmpl ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ 2024, ಹೈಬ್ರಿಡ್ ಎಂಜಿನ್ ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಹೇಳಲಾಗಿತ್ತು. ಆದರೆ ಇದಕ್ಕಾಗಿ ಗ್ರಾಹಕರು ಇನ್ನೂ ಕೊಂಚ ಕಾಯಬೇಕಾಗಿದೆ. ಈ ಮೂಲಕ ಈಗಿರುವ ಮಾರುತಿ ಸುಜುಕಿ ಸ್ವಿಫ್ಟ್‌ಗಿಂತಲೂ, ಅಧಿಕ ಮೈಲೇಜ್ ಮತ್ತು ಹೆಚ್ಚು ರಿಫೈನ್ ಆಗಿರುವ ಎಂಜಿನ್ ಈ ಕಾರಿನಲ್ಲಿ ಸಿಗಲಿದೆ ಎನ್ನಲಾಗುತ್ತಿದೆ. ಸಾಧಾರಣವಾಗಿ ಸ್ವಿಫ್ಟ್ ಉತ್ತಮ ಮೈಲೇಜ್ ನೀಡುತ್ತಿದೆಯಾದರೂ, ಹೈಬ್ರಿಡ್ ಎಂಜಿನ್ ಬಂದರೆ ಈ ಕಾರು ಏನಿಲ್ಲವೆಂದರೂ ಸುಮಾರು 35 ಕಿಮೀ ಮೈಲೇಜ್ ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications