ಈ 5 ಫೀಚರ್‌ಗಳೇ ಮಾರುತಿ ಸ್ವಿಫ್ಟ್‌ ಜನಪ್ರಿಯತೆಯ ಗುಟ್ಟು: ಎದುರಾಳಿಗಳಿಗೇಕೆ ಇದಿನ್ನೂ ಅರ್ಥವಾಗುತ್ತಿಲ್ಲ!

ಮಾರುತಿ ಸುಜುಕಿಯ ಲೆಜೆಂಡರಿ ಲಾರು ಯಾವುದೆಂದು ಯಾರಾದರೂ ಕೇಳಿದರೆ ಕಣ್ಣು ಮುಚ್ಚಿಕೊಂಡು ಹೇಳಬಹುದಾದ ಹೆಸರು ಮಾರುತಿ ಸುಜುಕಿ ಸ್ವಿಫ್ಟ್. ಕಳೆದ ಕೆಲವು ವಾರಗಳ ಹಿಂದೆಯಷ್ಟೇ ಈ ಕಾರಿನ ೪ನೇ ತಲೆಮಾರಿನ ಮಾಡೆಲ್‌ ಅನ್ನು ಲಾಂಚ್ ಮಾಡಿತ್ತು. ಕಳೆದ ಬಾರಿಯ ಸ್ವಿಫ್ಟ್‌ಗಿಂತ ಹೆಚ್ಚು ಆಕರ್ಷಕವಾಗಿ ಮತ್ತು ಹೊಸ ಎಂಜಿನ್‌ ಜೊತೆ ಲಾಂಚ್ ಆದ ಈ ಕಾರು ಭಾರತೀಯರ ಮನದಲ್ಲಿ ಸ್ಥಾನ ಕಂಡುಕೊಳ್ಳುವಲ್ಲಿ ಒಂದು ಮಟ್ಟಿಗೆ ಯಶಸ್ವಿಯಾಗಿದೆ ಎಂದೇ ಹೇಳಬಹುದು. ನಾವಿಂದು ಈ ಕಾರಿನ ಪ್ರಮುಖ 5 ಫೀಚರ್‌ಗಳನ್ನು ನೋಡಲಿದ್ದೇವೆ.

ಸ್ಟೈಲಿಂಗ್‌: ಈ ಕಾರಿನ ಮೊದಲ ಆಕರ್ಷಣೀಯವಾದ ವಿಷಯವೆಂದರೆ ಈ ಕಾರಿನ ಸ್ಟೈಲಿಂಗ್‌ ಎಂದೇ ಹೇಳಬಹುದು. ಮಾದರಿಯು ಹೊಸ ಮುಂಭಾಗದ ಬಂಪರ್ ಅನ್ನು ಹೊಂದಿದ್ದು, ಇದು ಸ್ವಲ್ಪಮಟ್ಟಿಗೆ ಟ್ವೀಕ್ ಮಾಡಲಾದ ಹೆಡ್ ಲೈಟ್ ಗಳು ಮತ್ತು ಬ್ಲ್ಯಾಕ್ ಬಣ್ಣದ ಮರುವಿನ್ಯಾಸಗೊಳಿಸಲಾದ ಗ್ರಿಲ್ ಅನ್ನು ನೀಡಿದೆ. ಸುಜುಕಿ ಬ್ಯಾಡ್ಜ್ ಗ್ರಿಲ್‌ನ ಮೇಲೆ ಕೂರುತ್ತದೆ ಮತ್ತು ಕರ್ವೇಸಿಯಸ್ ಬಾನೆಟ್ ಹೊಂದಿದೆ. ಈ ಕಾರಿನಲ್ಲಿ 15-ಇಂಚಿನ ಎಲಾಯ್ ವ್ಹೀಲ್ ಗಳಿಗೆ ಹೊಸ ವಿನ್ಯಾಸದ ಆಯ್ಕೆಗಳಿವೆ.

2024 Maruti Suzuki Swift Key to Success In Indian Market

ಸುರಕ್ಷತೆ: ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ ಕಾರಿನಲ್ಲಿ ಹೊಸದಾಗಿ ಕೆಲವು ಸುರಕ್ಷತಾ ಫೀಚರ್ಸ್ ಗಳನ್ನು ಸೇರಿಸಿದೆ. ಈ ಹೊಸ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ISOFIX ಆಂಕರ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, EBD ಜೊತೆಗೆ ABS, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ESC ಅನ್ನು ಒಳಗೊಂಡಿದೆ.

ಎಂಜಿನ್: 2024ರ ಮಾರುತಿ ಸುಜುಕಿ ಸ್ವಿಫ್ಟ್‌ಗೆ ದೊಡ್ಡ ಬದಲಾವಣೆಯನ್ನು ಬಾನೆಟ್ ಅಡಿಯಲ್ಲಿ ಮಾಡಲಾಗಿದೆ. ಸ್ವಿಫ್ಟ್ ಸುಜುಕಿಯ K-ಸರಣಿ ಎಂಜಿನ್‌ಗಳನ್ನು ಕೈಬಿಟ್ಟು Z ಸೀರಿಸ್ ಎಂಜಿನ್ ನೀಡಲಾಗಿದೆ. ಈ 2024ರ ಸ್ವಿಫ್ಟ್ ಕಾರಿನಲ್ಲಿ ಹೊಸ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ 5,700rpm ನಲ್ಲಿ 80.46bhp ಮತ್ತು 4,300rpm ನಲ್ಲಿ 111.7Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

2024 Maruti Suzuki Swift Key to Success In Indian Market

ಮೈಲೇಜ್‌: ಹೊಸ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಸ್ವಿಫ್ಟ್ ಮ್ಯಾನುವಲ್ 24.8 km ಮೈಲೇಜ್ ನೀಡುತ್ತದೆ ಆದರೆ AMT ರೂಪಾಂತರವು 25.75 km ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೊಸ ಸ್ವಿಫ್ಟ್ ಅದರ ಹಿಂದಿನ ಮಾದರಿಗಿಂತ ಸ್ವಲ್ಪ ದೊಡ್ಡದಾಗಿದೆ.

ಫೀಚರ್‌ಗಳು: ಹೊಸ ಸ್ವಿಫ್ಟ್ ತನ್ನ ಕ್ಯಾಬಿನ್ ವಿನ್ಯಾಸವನ್ನು ಮಾರುತಿಯ ಹೆಚ್ಚು ದುಬಾರಿ ಕೊಡುಗೆಯಾದ ಬಲೆನೊದಿಂದ ಎರವಲು ಪಡೆದುಕೊಂಡಿದೆ. ಮಲ್ಟಿ-ಲೇಯರ್ಡ್ ಡ್ಯಾಶ್ ಮಧ್ಯದಲ್ಲಿ ಹೊಸ 9-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಯನ್ನು ನೀಡಿದೆ. ಇದು ಯೂನಿಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ನ್ಯಾವಿಗೇಶನ್ ಮತ್ತು OTA ನವೀಕರಣಗಳನ್ನು ಸಂಪೂರ್ಟ್ ಮಾಡುತ್ತದೆ ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಪ್ರದರ್ಶಿಸುತ್ತದೆ.

2024 Maruti Suzuki Swift Key to Success In Indian Market

ಇನ್ಸ್ ಟ್ರೂಮೆಂಟ್ ಬೈನಾಕಲ್ ಈಗ 4.2-ಇಂಚಿನ ಡಿಜಿಟಲ್ MID ಆಗಿದೆ. ಇನ್ನು ಹಿಂಭಾಗದ ಎಸಿ ವೆಂಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಪವರ್ ಅಡ್ಜಸ್ಟಬಲ್ ORVM ಗಳು, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಇನ್ಫೋಟೈನ್‌ಮೆಂಟ್ ಯುನಿಟ್‌ಗಾಗಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಎಲ್‌ಇಡಿ ಫಾಗ್ ಲ್ಯಾಂಪ್‌ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 14, 2024, 13:15 [IST]
English summary
2024 maruti suzuki swift key to success in indian market
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+