2024 Maruti Swift: ಹೊಸ 2024 ಮಾರುತಿ ಸುಜುಕಿ ಸ್ವಿಫ್ಟ್ ಅಕ್ಸೆಸೊರಿಗಳ ವಿವರ

2024ರ ಮಾರುತಿ ಸುಜುಕಿ ಸ್ವಿಫ್ಟ್ (2024 Maruti Suzuki) ಒರಿಜಿನಲ್ ಅಕ್ಸೆಸೊರಿಗಳ ವಿವರ ಬಹಿರಂಗವಾಗಿದೆ. ಇತ್ತೀಚೆಗೆ, ಡೀಲರ್ - ಅಳವಡಿಸಿದ ಅಕ್ಸೆಸೊರಿಗಳೊಂದಿಗೆ ಹೊಸ ಸ್ವಿಫ್ಟ್‌ನ ವೀಡಿಯೊ ವೈರಲ್ ಆಗಿದೆ. ಬನ್ನಿ ಹಾಗಾದ್ರೆ ಈ ಬೇಸ್‌ ವೇರಿಯೆಂಟ್ ಯಾವೆಲ್ಲಾ ಅಕ್ಸೆಸೊರಿಗಳನ್ನು ಪಡೆದಿದೆ ತಿಳಿಯೋಣ.

ಹೊಸ 2024ರ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ LXI ಬೇಸ್ ವೇರಿಯೆಂಟ್ ಅನ್ನು ಕಂಪನಿಯು 6.49 ಲಕ್ಷ ರೂ.ಗಳ (ಎಕ್ಸ್‌ ಶೋರೂಂ) ಬೆಲೆಯೊಂದಿಗೆ ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಡೀಲರ್‌ಶಿಪ್ ಎಲ್ಲಾ ಅಕ್ಸೆಸೊರಿಗಳನ್ನು ತೋರಿಸಲು ಈ ಕಾರನ್ನು ಸಿದ್ಧಪಡಿಸಿ ವಿಡಿಯೋ ಮಾಡಿ ಹರಿಬಿಟ್ಟಿದೆ. ಆಸಕ್ತ ಗ್ರಾಹಕರು ಡೀಲರ್‌ಶಿಪ್ ಮಾಡಿದ ಎಲ್ಲಾ ಮಾರ್ಪಾಡುಗಳೊಂದಿಗೆ ಈ ಸ್ವಿಫ್ಟ್ ಅನ್ನು ಖರೀದಿಸಬಹುದು.

2024-maruti-swift-base-variant-accessories-details

ಅಕ್ಸೆಸೊರಿಗಳ ವಿವರ: ಹೊಸ 2024ರ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬಾನೆಟ್ ಮೇಲೆ ಎರಡು ಸ್ಪೋರ್ಟಿ ಬ್ಲಾಕ್ ಸ್ಟಿಕರಿಂಗ್‌ಗಳು ಫೆಂಡರ್ ಮೇಲೆ ಹಾದುಹೋಗಿ ಕಾರಿನ ರೂಫ್ ಅನ್ನು ಆವರಿಸಿವೆ. ಕಾರಿನ ಗ್ರಿಲ್ ಈಗ ಕ್ರೋಮ್ ಫಿನಿಷ್‌ನೊಂದಿಗೆ ಮುಂಭಾಗದ ಬಂಪರ್‌ನ ಕೆಳಭಾಗದಲ್ಲಿ ಸಿ-ಆಕಾರದ ಕ್ರೋಮ್ ಹೊಂದಿರುವ ಎಲ್‌ಇಡಿ ಫಾಗ್ ಲೈಟ್‌ಗಳ ಸೆಟ್ ಅನ್ನು ನೀಡಲಾಗಿದೆ.

ಟಾಪ್ - ಸ್ಪೆಕ್ ZXI+ ರೂಪಾಂತರದೊಂದಿಗೆ ನೀಡಲಾಗುವ ಅದೇ ಎಲ್ಇಡಿ ಫಾಗ್ ಲೈಟ್‌ಗಳನ್ನು ಇಲ್ಲಿ ನೋಡಬಹುದು. ಸೈಡ್ ಪ್ರೊಫೈಲ್‌ನಲ್ಲಿ ಬ್ಲಾಕ್ ಸೈಡ್ ಸ್ಕರ್ಟ್‌ಗಳೊಂದಿಗೆ ಡಿಸೈನ್ ಮಾಡಲಾಗಿದ್ದು, ನೋಡಲು ಸ್ಪೋರ್ಟಿ ಲುಕ್ ನೀಡುತ್ತದೆ. ಹೆಚ್ಚುವರಿಯಾಗಿ, ವ್ಹೀಲ್ ಆರ್ಚ್‌ಗಳಲ್ಲಿ ಬ್ಲಾಕ್ ಕ್ಲಾಡಿಂಗ್‌ಗಳನ್ನು ಸಹ ಸೇರಿಸಲಾಗಿದೆ.

2024-maruti-swift-base-variant-accessories-details

ಗ್ಲೋಸ್ ಬ್ಲ್ಯಾಕ್ ಬಣ್ಣದಲ್ಲಿ ಸಿದ್ಧಪಡಿಸಿದ ಮಾರುತಿ ಒರಿಜಿನಲ್ ವೀಲ್ ಕವರ್‌ಗಳು, ಲೋವರ್ ವಿಂಡೋ ಟ್ರಿಮ್‌ಗಳಲ್ಲಿ ಕ್ರೋಮ್ ಮತ್ತು ಒರಿಜಿನಲ್ ಮಾರುತಿ ವಿಂಡೋ ವೈಸರ್‌ಗಳನ್ನು ನೀಡಲಾಗಿದೆ. ಡೋರ್ ಹ್ಯಾಂಡಲ್‌ಗಳಿಗೆ ಕ್ರೋಮ್, ಒಆರ್‌ವಿಎಂಗಳ ಮೇಲೆ ಬ್ಲಾಕ್ ರ್ಯಾಪ್, ಮೂಲ LXI ಟ್ರಿಮ್‌ನಲ್ಲಿರುವ ಈ ಒಆರ್‌ವಿಎಂಗಳು ಮ್ಯಾಟ್ ಬ್ಲ್ಯಾಕ್‌ನಲ್ಲಿ ಫಿನಿಶ್ ಆಗಿವೆ.

ಹಿಂಭಾಗದ ವಿಂಡ್ ಸ್ಕ್ರೀನ್‌ನ ಕೆಳಭಾಗದಲ್ಲಿ ಬ್ಲಾಕ್ ಟಾಪ್ ಮತ್ತು ಕ್ರೋಮ್ ಹೊಂದಿರುವ ಸ್ಪಾಯ್ಲರ್ ಅನ್ನು ಸೇರಿಸಲಾಗಿದೆ. ಹಾಗೆಯೇ ಹಿಂಭಾಗದ ಲೋವರ್ ಬಂಪರ್ ರಿಫ್ಲೆಕ್ಟರ್‌ಗಳ ಮೇಲೆ ಕ್ರೋಮ್ ಅನ್ನು ಹೊಂದಿದೆ. ಒಟ್ಟಾರೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹಿಂಭಾಗದಲ್ಲೂ ಸ್ಪೋರ್ಟಿ ಲುಕ್‌ನೊಂದಿಗೆ ನೋಡುಗರನ್ನು ಆಕರ್ಷಿಸುವಂತೆ ಮಾಡುತ್ತದೆ.

2024-maruti-swift-base-variant-accessories-details

ವೇರಿಯೆಂಟ್‌ಗಳ ವಿವರ: ಹೊಸ 2024ರ ಸ್ವಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.49 ಲಕ್ಷಗಳಾಗಿದೆ. ನಂತರ VXI ರೂಪಾಂತರವನ್ನು ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ ಎರಡರೊಂದಿಗೂ ನೀಡಲಾಗುತ್ತದೆ. ಇದರ ಬೆಲೆಯು ರೂ. 7.29 ಲಕ್ಷದಿಂದ 7.79 ಲಕ್ಷ ರೂ. ಆಗಿದೆ. ಇದರ ನಂತರ VXI+ ರೂಪಾಂತರವಿದ್ದು, ಇದು ಮ್ಯಾನುವಲ್ ಮತ್ತು AMT ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯುತ್ತದೆ.

ಈ VXI+ ವೇರಿಯೆಂಟ್ ಬೆಲೆಯನ್ನು ಕ್ರಮವಾಗಿ ರೂ. 7.56 ಲಕ್ಷ ಮತ್ತು 8.06 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಇದು ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್‌ಗಳೊಂದಿಗೆ ZXI ಮತ್ತು ZXI+ ರೂಪಾಂತರಗಳನ್ನು ಸಹ ಒಳಗೊಂಡಿದೆ. ಇವುಗಳ ಬೆಲೆಯನ್ನು ZXI ರೂಪಾಂತರಗಳಿಗೆ ರೂ.8.29 ಮತ್ತು ರೂ.8.79 ಲಕ್ಷ ಮತ್ತು ರೂ.8.09 ಲಕ್ಷ ಮತ್ತು ರೂ.8.49 ಲಕ್ಷಗಳಿಗೆ ನಿಗದಿಪಡಿಸಲಾಗಿದೆ.

2024-maruti-swift-base-variant-accessories-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, May 20, 2024, 19:20 [IST]
English summary
2024 maruti swift base variant accessories details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+