Nissan: 5-ಸೀಟರ್.. 5.99 ಲಕ್ಷ.. ಹೊಸ ನಿಸ್ಸಾನ್ ಮ್ಯಾಗ್ನೈಟ್ ಖರೀದಿಸಬೇಕೇ, ಆನ್-ರೋಡ್ ಬೆಲೆ ಎಷ್ಟು.. EMI ಏನು?
ಜಪಾನ್ ಮೂಲಕ ಪ್ರಮುಖ ವಾಹನ ತಯಾರಕ ಕಂಪನಿ ನಿಸ್ಸಾನ್ (Nissan), ದೇಶೀಯ ಮಾರುಕಟ್ಟೆಯಲ್ಲಿ 2020ರಲ್ಲಿ ಮ್ಯಾಗ್ನೈಟ್ (Magnite) ಕಾರನ್ನು ಬಿಡುಗಡೆಗೊಳಿಸಿತ್ತು. ಇದೊಂದು ಎಸ್‌ಯುವಿಯಾಗಿದ್ದು, ಅಕ್ಟೋಬರ್ 4ರಂದು ಈ ಕಾರಿನ ಫೇಸ್‌ಲಿಫ್ಟ್ ಅಂದರೆ ನವೀಕರಿಸಿದ ಮಾದರಿಯನ್ನು (Model) ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿತ್ತು. ನೀವು ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಖರೀದಿಸಲು ಆಲೋಚಿಸಿದ್ದೀರಾ.. ನಾವಿಲ್ಲಿ ನೂತನ ಕಾರಿನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
ಬೆಂಗಳೂರಿನಲ್ಲಿ ನೂತನ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ (Nissan Magnite Facelift) ಎಸ್‌ಯುವಿ, ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಲಭ್ಯವಿದೆ. ಇದರ ವಿಸಿಯಾ (Visia) ರೂಪಾಂತರ, ರೂ.7.44 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.1 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಖರೀದಿಸಿದರೆ, ರೂ.6.44 ಲಕ್ಷ ಸಾಲವಿರುತ್ತದೆ. ಅದಕ್ಕೆ ಶೇಕಡ 9.8% ಬಡ್ದಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.13,625 ಇಎಂಐ ಕಟ್ಟಬೇಕು.

ಈ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ವಿಸಿಯಾ ಪ್ಲಸ್ (Visia Plus) ರೂಪಾಂತರ, ರೂ.8.08 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ರೂ.1 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಹೊಸ ಮ್ಯಾಗ್ನೈಟ್ ಕಾರನ್ನು ತೆಗೆದುಕೊಂಡರೆ, ರೂ.7.08 ಲಕ್ಷ ಸಾಲ ಬಾಕಿಯಿರುತ್ತದೆ. ಆ ಮೊತ್ತಕ್ಕೆ ಶೇಕಡ 9.8% ಬಡ್ಡಿ ಹಾಕಿ, 5 ವರ್ಷದ ಅವಧಿಗೆ ಮಾಸಿಕ ರೂ.14,976 ಇಎಂಐ ಪಾವತಿಸಬೇಕು.
ನೂತನ ಕಾರಿನ ಅಸೆಂಟಾ (Acenta) ರೂಪಾಂತರ ರೂ.8.87 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಇದನ್ನು ರೂ.1 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ರೂ.7.87 ಲಕ್ಷ ಸಾಲ ಉಳಿಯುತ್ತದೆ. ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.16,643 ಇಎಂಐ ಕಟ್ಟಬೇಕು.

ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಅಸೆಂಟಾ ಎಎಂಟಿ (Acenta AMT) ರೂಪಾಂತರ, ರೂ.9.62 ಲಕ್ಷ ಆನ್-ರೋಡ್ ದರವನ್ನು ಒಳಗೊಂಡಿದೆ. ರೂ.1 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಈ ಕಾರನ್ನು ಖರೀದಿಸಿದರೆ, ರೂ.8.62 ಲಕ್ಷ ಸಾಲವಿರುತ್ತದೆ. ಶೇಕಡ 9.8% ಬಡ್ಡಿಯನ್ನು ಹಾಕಿ, 5 ವರ್ಷದ ಅವಧಿಗೆ ಮಾಸಿಕ ರೂ.18,230 ಇಎಂಐ ಪಾವತಿಸಬೇಕು.
ಈ ಕಾರಿನ ಟೆಕ್ನಾ ಪ್ಲಸ್ ಟರ್ಬೊ (Tekna Plus Turbo) ರೂಪಾಂತರ, ರೂ.12.98 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.1 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಮ್ಯಾಗ್ನೈಟ್ ಎಸ್‌ಯುವಿಯನ್ನು ತೆಗೆದುಕೊಂಡರೆ, ರೂ.11.98 ಲಕ್ಷ ಸಾಲ ಬಾಕಿಯಿರುತ್ತದೆ. ಶೇಕಡ 9.8% ಬಡ್ಡಿಯೊಂದಿಗೆ 5 ವರ್ಷಕ್ಕೆ ತಿಂಗಳಿಗೆ 25,334 ಇಎಂಐ ಕಟ್ಟಬೇಕು.

ನೂತನ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಎಸ್‌ಯುವಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. ಈ ಕಾರಿನಲ್ಲಿ 5 ಸುಲಭವಾಗಿ ಓಡಾಟ ನಡೆಸಬಹುದು. ಜೊತೆಗೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದ್ದು, 16-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.
ಹೊಸ ನಿಸ್ಸಾನ್ ಮ್ಯಾಗ್ನೈಟ್ ಕಾರು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾಗಳನ್ನು ಹೊಂದಿದೆ.
ನಿಮ್ಮ ಗಮನಕ್ಕೆ.. ಇಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಎಸ್‌ಯುವಿಯ ಕೆಲವು ರೂಪಾಂತರಗಳ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆ ಬಗ್ಗೆ ಮಾತ್ರ ವಿವರಿಸಿದ್ದೇವೆ. ಉಳಿದ ರೂಪಾಂತರಗಳ ಸಂಬಂಧ ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








