ನಿಸ್ಸಾನ್ ಹೊಸ ಎಸ್‌ಯುವಿ ಟೀಸರ್ ಬಿಡುಗಡೆ: ಡಿಸೈನ್ ನೋಡಿ ಪ್ರತಿಸ್ಪರ್ಧಿಗಳಲ್ಲಿ ಶುರುವಾಯ್ತು ನಡುಕ!

ನಿಸ್ಸಾನ್ ಅಂತಿಮವಾಗಿ ತನ್ನ ಹೊಸ ಎಸ್‌ಯುವಿಯನ್ನು ಶೀಘ್ರದಲ್ಲೇ ಪರಿಚಯಿಸುವುದಾಗಿ ಸುಳಿವು ನೀಡಿದೆ. ಈ ಹಿಂದೆ ನವೆಂಬರ್ 2022 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಸಾಲಿನ ಸೀಟ್‌ಗಳೊಂದಿಗೆ ಎಕ್ಸ್-ಟ್ರೈಲ್ (Nissan X-Trail SUV) ಎಂಬ ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಇದರ ಬಿಡುಗಡೆಗಾಗಿ ಕುತೂಹಲದಿಂದ ಕಾಯಲಾಗುತ್ತಿದ್ದು, ಇದೀಗ ಕಾರಿನ ಟೀಸರ್ ಬಿಡುಗಡೆ ಮೂಲಕ ಹೊಸ ಎಸ್‌ಯುವಿಯ ಪಾದಾರ್ಪಣೆ ಶೀಘ್ರದಲ್ಲೇ ಇರಲಿದೆ ಎಂದು ಸುಳಿವು ನೀಡಿದೆ. ಈ ಹೊಸ ಎಸ್‌ಯುವಿ ಹೊರ ಭಾಗದ ವಿನ್ಯಾಸವನ್ನು ಟೀಸರ್‌ನಲ್ಲಿ ನೋಡಬಹುದಾಗಿದ್ದು, ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಇಲ್ಲಿ ನೋಡೋಣ.

ನಿಸ್ಸಾನ್ ಕಂಪನಿಯು ಭಾರತದಲ್ಲಿ ಈ ಹಿಂದೆ ಎಕ್ಸ್-ಟ್ರೈಲ್ (X-Trail) ಜೊತೆಗೆ ಖಾಶ್ಕೈ (Qashqai) ಮತ್ತು ಜುಕ್ (Juke) ಎಂಬ ಎಸ್‌ಯುವಿಗಳನ್ನು ಕೂಡ ಅನಾವರಣಗೊಳಿಸಿತ್ತು. ಈ ಮೂರು ಎಸ್‌ಯುವಿಗಳಲ್ಲಿ ಒಂದಾದ ಎಕ್ಸ್-ಟ್ರೈಲ್ ಅಂತಿಮವಾಗಿ ಟೀಸರ್ ಮೂಲಕ ಬಿಡುಗಡೆಗೆ ಸಜ್ಜಾಗಿದೆ. ಈ ಮುಂಬರುವ ಮೂರು ಸಾಲಿನ ಎಸ್‌ಯುವಿಯ ಪ್ರಮುಖ ವಿವರಗಳು ಟೀಸರ್‌ನಲ್ಲಿ ಬಹಿರಂಗವಾಗಿವೆ.

2024-nissan-x-trail-suv-teased-ahead-of-its-launch-in-indian

ಹೊಸ ನಿಸ್ಸಾನ್ ಎಕ್ಸ್-ಟ್ರೈಲ್ ಎಸ್‌ಯುವಿ ಡಿಸೈನ್ ವಿಶೇಷತೆಗಳ ಬಗ್ಗೆ ಹೇಳುವುದಾದ್ರೆ, ತಲೆಕೆಳಗಾದ ಎಲ್ - ಆಕಾರದ ಎಲ್ಇಡಿ ಡಿಆರ್‌ಎಲ್‌ಗಳು, ಸ್ಪ್ಲಿಟ್ ಹೆಡ್ ಲ್ಯಾಂಪ್‌ಗಳು, ಫ್ಲಾಟ್ ಸ್ಲಾಟ್‌ಗಳು ಮತ್ತು ಹೊಸ ಗ್ರಿಲ್ ಅನ್ನು ಸುತ್ತುವರಿದ ಕ್ರೋಮ್, ಮುಂಭಾಗದಲ್ಲಿ ಕ್ಯಾಮೆರಾದಂತಹ ವೈಶಿಷ್ಟ್ಯಗಳು ಟೀಸರ್‌ನಲ್ಲಿ ಕಾಣಿಸಿಕೊಂಡಿವೆ.

ಹಾಗೆಯೇ ನಿಸ್ಸಾನ್ ಎಕ್ಸ್-ಟ್ರೈಲ್ ಕಾರಿನಲ್ಲಿ ರ್ಯಾಪ್ ರೌಂಡ್ ಟೂ-ಪೀಸ್ ಟೈಲ್ ಲೈಟ್‌ಗಳು, ಕಾಂಟ್ರಾಸ್ಟ್ ಬಣ್ಣದ ಸ್ಕಿಡ್ ಪ್ಲೇಟ್‌ಗಳು, ರಿಯರ್ ವೈಪರ್, ಡೋರ್ ಕ್ಲಾಡಿಂಗ್ ಮತ್ತು ವಾಷರ್, ಹೈ ಮೌಂಟೆಡ್ ಸ್ಟಾಪ್ ಲ್ಯಾಂಪ್‌ನೊಂದಿಗೆ ಇಂಟಿಗ್ರೇಟೆಡ್ ಸ್ಪಾಯ್ಲರ್, ಶಾರ್ಕ್-ಫಿನ್ ಆಂಟೆನಾ ಮತ್ತು ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ.

2024-nissan-x-trail-suv-teased-ahead-of-its-launch-in-indian

2024ರ ಹೊಸ ಎಕ್ಸ್-ಟ್ರೈಲ್ ಕಾರಿನ ಇಂಟೀರಿಯರ್ ಬಗ್ಗೆ ಹೇಳುವುದಾದ್ರೆ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್-ಸ್ಟಾಪ್ ಬಟನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, 3-ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿ, ದೊಡ್ಡ ಫ್ರೀಸ್ಟಾಂಡಿಂಗ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ADAS ಮತ್ತು ಆಟೋ-ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನಂ‌ತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಕಾರು ಕೇವಲ ಪೆಟ್ರೋಲ್ ರೂಪಾಂತರದಲ್ಲಿ ಮಾತ್ರ ಲಭ್ಯವಾಗುವ ನಿರೀಕ್ಷೆಯಿದೆ. 1.5 ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 201 ಬಿಹೆಚ್‌ಪಿ ಪವರ್ ಮತ್ತು 305 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಸಿವಿಟಿ ಗೇರ್ ಬಾಕ್ಸ್ ಅಳವಡಿಸಲಾಗಿದ್ದು, ಟೂ ವ್ಹೀಲ್ ಡ್ರೈವ್ ಮತ್ತು ಫೋರ್ ವ್ಹೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

2024-nissan-x-trail-suv-teased-ahead-of-its-launch-in-indian

ಈ ಹಿಂದೆ ನಿಸ್ಸಾನ್ ಈ ಕಾರನ್ನು ಭಾರತದಲ್ಲಿ ಪ್ರದರ್ಶಿಸಿದಾಗ, ಇದನ್ನು ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಕಾರು ಎಂದು ಪ್ರದರ್ಶಿಸಲಾಯಿತು. ಆದರೆ ಈಗ ಕಾರಣಾಂತರಗಳಿಂದ ಭಾರತದಲ್ಲಿ ಅದನ್ನು ಪೆಟ್ರೋಲ್ ಎಂಜಿನ್ ಆಗಿ ಮಾತ್ರ ಮಾರಾಟ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಕಂಪನಿಯು ನಿಸ್ಸಾನ್ ಎಕ್ಸ್-ಟ್ರೈಲ್ ಎಸ್‌ಯುವಿಯನ್ನು ಮುಂದಿನ ಆಗಸ್ಟ್ ವೇಳೆಗೆ ಭಾರತದಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

ಈ ಮುಂಬರುವ ಎಸ್‌ಯುವಿಯನ್ನು CBU (ಸಂಪೂರ್ಣ ನಿರ್ಮಿಸಲಾದ ಕಾರು) ಮಾದರಿಯಾಗಿ ಸೀಮಿತ ಸಂಖ್ಯೆಯಲ್ಲಿ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ತನ್ನ ಮೊದಲ ಮತ್ತು ಎರಡನೇ ತಲೆಮಾರುಗಳಲ್ಲಿ ಮಾರಾಟವಾಗುತ್ತಿದ್ದ ಎಕ್ಸ್-ಟ್ರೈಲ್ ಈಗ ತನ್ನ ನಾಲ್ಕನೇ ತಲೆಮಾರಿನಲ್ಲಿ ಪುನರಾಗಮನ ಮಾಡಲಿದೆ.

More from DriveSpark

Article Published On: Tuesday, June 25, 2024, 15:10 [IST]
English summary
2024 nissan x trail suv teased ahead of its launch in indian
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+