ಭಾರೀ ಮೈಲೇಜ್‌ನ ಹೊಸ ಎರ್ಟಿಗಾ ಕ್ರೂಸ್ ಹೈಬ್ರಿಡ್ 7-ಸೀಟರ್ ಫ್ಯಾಮಿಲಿ ಕಾರ್ ವಿಶೇಷತೆಗಳು
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಹಲವಾರು ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಕಂಪನಿಯ ಸೂಪರ್ ಹಿಟ್ ಎಂಪಿವಿ ಎಂದರೆ ಎರ್ಟಿಗಾ. ಈ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.
ಅಷ್ಟೇ ಅಲ್ಲ ದಕ್ಷಿಣ ಏಷ್ಯಾ ದೇಶಗಳಲ್ಲಿ ಹೆಚ್ಚು ಜನಪ್ರಿಯ ಎಂಪಿವಗಳಲ್ಲಿ ಒಂದು ಎರ್ಟಿಗಾ ಆಗಿದೆ. ಭಾರತದಲ್ಲಿ ಸುಜುಕಿ ಕಂಪನಿ ಮಾರುತಿಯ ಸಹಯೋಗದೊಂದಿಗೆ ಈ ಕಾರನ್ನು ಮಾರುಕಟ್ಟೆಗೆ ತಂದಿರುವುದರಿಂದ ಇದನ್ನು ಮಾರುತಿ ಸುಜುಕಿ ಎರ್ಟಿಗಾ ಎಂದೇ ಕರೆಯುತ್ತಿದ್ದಾರೆ. ಇದೀಗ ಮಾರುತಿ ಸುಜುಕಿ ಎರ್ಟಿಗಾದ ಕ್ರೂಸ್ ಹೈಬ್ರಿಡ್ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ಸುಜುಕಿ ಎರ್ಟಿಗಾ ಕ್ರೂಸ್ ಹೈಬ್ರಿಡ್ (2024 Suzuki Ertiga Cruise Hybrid) ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಈ ಸುಜುಕಿ ಎರ್ಟಿಗಾ ಕ್ರೂಸ್ ಹೈಬ್ರಿಡ್ ಬಿಡುಗಡೆ ಆಗಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಅಲ್ಲ, ಬದಲಾಗಿ ಇಂಡೋನೇಷ್ಯಾದಲ್ಲಿ. ಭಾರತೀಯ ಮಾರುಕಟ್ಟೆಗೆ ಈ ಕಾರು ಲಾಂಚ್ ಆಗಲು ಇನ್ನೂ ಕಾಯಬೇಕಾಗಿದ್ದು, ಲಾಂಚ್ ಆದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಸಂಚಲನ ಮೂಡಿಸುವುದಂತೂ ಖಂಡಿತ. ಈ ಮಾರುತಿ ಸುಜುಕಿಯ ಕಳೆದ ಬಾರಿಯ ಎರ್ಟಿಗಾಗೆ ಹೋಲಿಸಿ ನೀಡಿದರೆ, ಈ ಹೊಸ ಕ್ರೂಸ್ ಹೈಬ್ರಿಡ್ ಹೆಚ್ಚು ಆಕರ್ಷಕವಾಗಿರುವುದು ಮಾತ್ರವಲ್ಲದೇ, ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನೂ ಸಹ ಹೊಂದಿದೆ.
ಸದ್ಯಕ್ಕೆ ಸುಮಾರು ಎಂಟು ಲಕ್ಷ ರೂ ಆಸುಪಾಸಿನಲ್ಲಿ ಸೆವೆನ್ ಸೀಟರ್ ವಾಹನ ಇದಾಗಿದ್ದು, ಒಂದು ಕುಟುಂಬದಲ್ಲಿ ಏಳು ಜನವಿದ್ದರೂ, ಆರಾಮವಾಗಿ ಈ ಕಾರಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ಇಂಡೋನೇಷ್ಯಾ ಇಂಟರ್‌ನ್ಯಾಷನಲ್ ಮೋಟಾರ್ ಶೋ ನಲ್ಲಿ ಈ ಕಾರನ್ನು ಸುಜುಕಿ ಲಾಂಚ್ ಮಾಡಿದ್ದು, ಕಳೆದ ಬಾರಿಯ ಎರ್ಟಿಗಾಗಿಂತ ಹೆಚಗ್ಚಿನ ಅಪ್‌ಡೇಟ್ ಅನ್ನು ಈ ಕಾರು ಹೊಂದಿದೆ.
ವಿನ್ಯಾಸ: ಈ ಹೊಸ ಎರ್ಟಿಗಾದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಳೆದ ಬಾರಿಯ ಎರ್ಟಿಗಾಗಿಂತ ಹೆಚ್ಚು ಸ್ಟೈಲಿಶ್ ಮತ್ತು ಕೊಂಚ ಅಗ್ರೆಸಿವ್ ಲುಕ್ ಅನ್ನು ಹೊಂದಿದೆ. ಸದ್ಯಕ್ಕೆ ಈ ಕಾರು ಪರ್ಲ್ ವೈಟ್ ಮತ್ತು ಕೂಲ್ ಬ್ಲಾಕ್ ಡ್ಯುಯಲ್ ಟೋನ್ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಾಗಲಿದೆ. ಹೆಚ್ಚಿನ ಸ್ಪೋರ್ಟಿ ನೋಟ ಈ ಕಾರಿನ ಅಂದವನ್ನು ಹೆಚ್ಚಿಸಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇದು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿದೆ ಎಂದು ಭವಿಷ್ಯ ನುಡಿಯಲಾಗುತ್ತಿದೆ.
ಎಂಜಿನ್: ಸುಜುಕಿ ಎರ್ಟಿಗಾ ಕ್ರೂಸ್ ಹೈಬ್ರಿಡ್ ಈ ಬಾರಿ K15B ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೊತೆಗೆ 10ah ದೊಡ್ಡ ಬ್ಯಾಟರಿಯನ್ನು ಸಹ ಹೊಂದಿದೆ. ಇದರಿಂದಾಗಿ ಈ ಕಾರಿನಿಂದ ಉತ್ತಮ ಮೈಲೇಜ್ ಅನ್ನು ಸಹ ನಿರೀಕ್ಷಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಬರುತ್ತಿದ್ದು, 104 ಪಿಎಸ್ ಪವರ್ ಮತ್ತು 138 ಎನ್‌ಎಮ್ ಟಾರ್ಕ್ ಅನ್ನು ಈ ಕಾರು ಉತ್ಪಾದಿಸಲಿದೆ.
7 ಜನ ಆರಾಮವಾಗಿ ಪ್ರಯಾಣಿಸಲು ಬೇಕಾಗುವಷ್ಟು ಸ್ಥಳಾವಕಾಶವನ್ನು ಈ ಕಾರು ನೀಡುತ್ತಿದ್ದು, ಬಜೆಟ್ ಫ್ರೆಂಡ್ಲಿ ಸೆವೆನ್ ಸೀಟರ್ ಕಾರಾಗಿದೆ. ನೀವೇನಾದರೂ ನಿಮ್ಮ ಕುಟುಂಬದ ಜೊತೆ ಆಗಾಗ ಪ್ರಯಾಣ ಮಾಡುತ್ತೀರಿ ಎಂದರೆ ಸೆವೆನ್ ಸೀಟ್ (Seven Seater) ಕಾರುಗಳು ತುಂಬಾ ಉತ್ತಮ. ಭಾರತದಲ್ಲಿ ಬೆಲೆ ಏರಿಕೆಯ ಬಳಿಕ, ಮಾರುತಿ ಎರ್ಟಿಗಾ ಮಾದರಿಯ ಬೆಲೆಯು ಈಗ ರೂ. 8.69 ಲಕ್ಷದಿಂದ ರೂ. 13.03 ಲಕ್ಷವಾಗಿದ್ದು, ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications