ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
ಮಾರುತಿ ಸುಜುಕಿ ಸ್ವಿಫ್ಟ್ ದೀರ್ಘಕಾಲದಿಂದಲೇ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಮಾರುಕಟ್ಟೆಗೆ ಬಂದರೂ ಮಾರುತಿ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಈ ಬಹುಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಯಾಗಿತ್ತು.
ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸ್ವಿಫ್ಟ್ ಕಾರು 2018ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಯಿತು. ಇನ್ನು ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಹೊಸ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ಕಂಪನಿಯು ಮೇ 9 ರಂದು ಅಧಿಕೃತವಾಗಿ ಹೊಸ ಸ್ವಿಫ್ಟ್ ಕಾರನ್ನು ಪರಿಚಯಿಸಬಹುದು ಎಂದು ವರದಿಯಾಗಿದೆ. ಇನ್ನು ಸುಜುಕಿ ಕಂಪನಿಯು ಈಗಾಗಲೇ ಈ ಮಾದರಿಯನ್ನು ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ.

ಹೊಸ ಸ್ವಿಫ್ಟ್ ಕಾರು ಫ್ರೆಂಚ್ ಮಾರುಕಟ್ಟೆಯಲ್ಲಿಯೂ ಕೂಡ ಸಹ ಮಾರಾಟವಾಗುತ್ತಿದೆ. ಇತ್ತೀಚೆಗೆ ಸುಜುಕಿ ಫ್ರಾನ್ಸ್ ಹೊಸ ಸ್ವಿಫ್ಟ್ ಕಾರಿಗಾಗಿ TVC ಅನ್ನು ಬಿಡುಗಡೆಗೊಳಿಸಿದೆ. ಈ ಜಾಹೀರಾತು ಮಹಿಳೆಯೊಬ್ಬರು ತನ್ನ ಸ್ನೇಹಿತರಿಗೆ ಮೆಸೇಜ್ ಕಳುಹಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಆಕೆಯ ಸ್ನೇಹಿತೆ ಮೆಸೇಜ್ ಸ್ವೀಕರಿಸಿ ಹ್ಯಾಚ್‌ಬ್ಯಾಕ್‌ನ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಲ್ಲಿ ತನಗೆ ಬಂದ ಮೆಸೇಜ್ ಅನ್ನು ಪಡೆಪರಿಶೀಲಿಸುತ್ತಾಳೆ. ಇದರ ನಂತರ, ಅವಳು ತನ್ನ ಸ್ನೇಹಿತೆಯ ಬಳಿ ಬರುತ್ತಾಳೆ.
ಹೊಸ ಸ್ವಿಫ್ಟ್‌ನ ಹಲವಾರು ಡೈನಾಮಿಕ್ ಶಾಟ್‌ಗಳನ್ನು ತೋರಿಸಿದ ಆಕೆಯ ಸ್ನೇಹಿತ ಕಲ್ಪನೆಯಲ್ಲಿ ಹೋಗುವುದನ್ನು ಇದು ತೋರಿಸುತ್ತದೆ. ಇಬ್ಬರೂ ಸ್ನೇಹಿತರು ಫ್ರಾನ್ಸ್‌ನ ನಗರ ಮತ್ತು ರಮಣೀಯ ರಸ್ತೆಗಳಲ್ಲಿ ಹೊಸ ಸ್ವಿಫ್ಟ್‌ನ ಚಾಲನೆಯನ್ನು ಆನಂದಿಸುತ್ತಿರುವುದನ್ನು ನೋಡಲಾಯಿತು. ಟಿವಿಸಿಯಲ್ಲಿನ ಈ ನಿರ್ದಿಷ್ಟ ಕಾರನ್ನು ಫ್ರಾಂಟಿಯರ್ ಬ್ಲೂನ ಜೊತೆ ಬ್ಲ್ಯಾಕ್ ಬಣ್ಣದ ರೂಫ್ ಅನ್ನು ನೀಡಲಾಗಿದೆ.

ಹೊಸ ಸುಜುಕಿ ಸ್ವಿಫ್ಟ್ (Suzuki Swift) ಕಾರನ್ನು ಜಪಾನ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಇತ್ತೀಚೆಗೆ ಪರೀಕ್ಷಿಸಲಾಗಿದ್ದು, ಹೊಸ ಸ್ವಿಫ್ಟ್ 4-ಸ್ಟಾರ್ ರೇಟಿಂಗ್ ಗಳಿಸಿದೆ. ಈ ಕ್ರ್ಯಾಶ್ ಟೆಸ್ಟ್ ಕ್ರೂಸ್ ಕಂಟ್ರೋಲ್ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿದೆ. ಕ್ರ್ಯಾಶ್ ಟೆಸ್ಟ್ ಮೌಲ್ಯಮಾಪನದಲ್ಲಿ, ಸ್ವಿಫ್ಟ್ 55 ಕಿ.ಮೀ ವೇಗದಲ್ಲಿ ಮುಂಭಾಗದ ಪರೀಕ್ಷೆಗೆ ಒಳಗಾಯಿತು. ನಂತರ ಅದರ ಆಕ್ಟಿವ್ ಸುರಕ್ಷತಾ ತಂತ್ರಜ್ಞಾನಗಳ ಮೌಲ್ಯಮಾಪನಗಳನ್ನು ಮಾಡಲಾಯಿತು.
ಇವುಗಳಲ್ಲಿ ಆಕ್ಟಿವ್ ಎರ್ಮಜನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್ ಫೀಚರ್ಸ್ ನಂತಹ ಸ್ವಿಫ್ಟ್‌ನ ಆಕ್ಟಿವ್ ಸುರಕ್ಷತಾ ಫೀಚರ್ಸ್ ಗಳನ್ನು ಪರೀಕ್ಷಿಸಲಾಯಿತು. ಈ ಟೆಸ್ಟ್ ಗಳನ್ನು ಗಂಟೆಗೆ 50-60 ಕಿಮೀ ವೇಗದಲ್ಲಿ ನಡೆಸಲಾಯಿತು. ADAS ಫೀಚರ್ಸ್ ಗಳನ್ನು ಪರೀಕ್ಷಿಸಿದ ನಂತರ, ಕಾರನ್ನು ಕ್ರಮವಾಗಿ 55 ಮತ್ತು 64 ಕಿ.ಮೀ ವೇಗದಲ್ಲಿ ಮುಂಭಾಗವನ್ನು ಟೆಸೃ ಮಾಡಿದ್ದಾರೆ. ಹೊಸ ಸ್ವಿಫ್ಟ್‌ನಲ್ಲಿ ಸೈಡ್ ಇಂಪ್ಯಾಕ್ಟ್ ಟೆಸ್ಟ್ ಅನ್ನು ನಡೆಸಲಾಯಿತು.

ಈ ಕಾರು ಸಂಪೂರ್ಣ ಸುತ್ತು-ಮುಂಭಾಗ, ಆಫ್-ಸೆಟ್ ಮುಂಭಾಗದ ಘರ್ಷಣೆ ಮತ್ತು ಪ್ರಯಾಣಿಕರ ಸೀಟ್ ಬೆಲ್ಟ್ ರಿಮೈಂಡರ್ ಟೆಸ್ಟ್ ನಲ್ಲಿ 4 ಸ್ಟಾರ್ ಗಳಿಸಿದೆ. ಇನ್ನು ಸೈಡ್ ಡಿಕ್ಕಿ, ಕುತ್ತಿಗೆ ಗಾಯದ ರಕ್ಷಣೆ ಮತ್ತು ಪಾದಚಾರಿ ಲೆಗ್ ರಕ್ಷಣೆ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಗಳಿಸಿತು. ಒಟ್ಟಾರೆಯಾಗಿ, ಸ್ವಿಫ್ಟ್ 197 ಅಂಕಗಳಲ್ಲಿ 117.80 ಅಂಕಗಳೊಂದಿಗೆ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಜಪಾನ್ ನಲ್ಲಿ ನಡೆದ ಕ್ರ್ಯಾಶ್ ಟೆಸ್ಟ್ ಆಗಿದೆ.
ಭಾರತದಲ್ಲಿಯೂ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸ್ವಿಫೃ ಇದೇ ರೀತಿಯ ಸುರಕ್ಷತಾ ಸಾಮರ್ಥ್ಯವನ್ನು ತೊರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಭಾರತದಲ್ಲಿ ಕೆಲವು ಮಾರುತಿ ಸುಜುಕಿ ಡೀಲರ್‌ಶಿಪ್‌ಗಳು ಮುಂಬರುವ ಸ್ವಿಫ್ಟ್ ಮಾದರಿಯ ಪ್ರಿ-ಬುಕಿಂಗ್‌ಗಳನ್ನು ಅನಧಿಕೃತವಾಗಿ ಸ್ವೀಕರಿಸಲು ಪ್ರಾರಂಭಿಸಿವೆ ಎಂದು ವರದಿಯಾಗಿದೆ. ಹೊಸ ಸುಜುಕಿ ಸ್ವಿಫ್ಟ್ ಕಾರು ಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಇಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಇಂಟಿಯರ್ ಗಳೊಂದಿಗೆ ಬರುತ್ತಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಗುಜರಾತ್‌ನ ಮಾರುತಿ ಸುಜುಕಿಯ ಹಂಸಲ್‌ಪುರ ಘಟಕದಲ್ಲಿ ತಯಾರಿಸಲಿದೆ. ಹೊಸ ಸ್ವಿಫ್ಟ್ ಕಾರಿನ ಎಂಜಿನ್‌ನಲ್ಲಿ 12V ನ ಮೈಲ್ಡ್ ಹೈಬ್ರಿಡ್ ಸಹ ಇರಲಿದ್ದು, ಇದರಿಂದ ಈ ಕಾರಿನ ಮೈಲೇಜ್ 35 ಕಿಮೀ ವರೆಗೂ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಈ ಮಾರುತಿ ಸ್ವಿಫ್ಟ್ ಕಾರು, 1.2 - ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಅನ್ನು ಒಳಗೊಂಡಿದೆ.


Click it and Unblock the Notifications








