6 ಲಕ್ಷ.. 5-ಸೀಟರ್.. ಸದ್ದಿಲ್ಲದೇ ಮಾರಾಟಕ್ಕೆ ಬಂದ 'ಟಾಟಾ ಪಂಚ್' ಕುರಿತಂತೆ ನಿಮಗೆ ಗೊತ್ತಿರಬೇಕಾದ ವಿಚಾರಗಳಿವು!

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಮಂಗಳವಾರ ಹಲವು ನವೀಕರಣಗಳೊಂದಿಗೆ ಹೊಚ್ಚ ಹೊಸ ಪಂಚ್ ಫೇಸ್‌ಲಿಫ್ಟ್ (Punch Facelift) ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. 5 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಿರುವ ಈ ಕಾರು, ರೂ.6.12 ಲಕ್ಷದಿಂದ ರೂ.9.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪ್ಯೂರ್, ಪ್ಯೂರ್ (ಒ), ಕ್ರಿಯೇಟಿವ್ ಪ್ಲಸ್, ಅಕಾಂಪ್ಲಿಶ್ಡ್ ಪ್ಲಸ್, ಅಡ್ವೆಂಚರ್ ಮತ್ತು ಅಡ್ವೆಂಚರ್ ಎಸ್ ಸೇರಿದಂತೆ ಒಟ್ಟು 10 ರೂಪಾಂತರಗಳನ್ನು (ವೇರಿಯೆಂಟ್) ಹೊಂದಿದೆ. ನಾವಿಲ್ಲಿ ಯಾವ ರೂಪಾಂತರ ಏನೆಲ್ಲಾ ವೈಶಿಷ್ಟ್ಯಗಳನ್ನು (ಫೀಚರ್) ಪಡೆದುಕೊಂಡಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಪ್ಯೂರ್: ಇದು ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಎಸ್‌ಯುವಿಯ ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್) ಆಗಿದೆ. ಟಿಲ್ಟ್ ಸ್ಟೀರಿಂಗ್, ಸೆಂಟ್ರಲ್ ಲಾಕಿಂಗ್, 90-ಡಿಗ್ರಿ ಡೋರ್ ಓಪನಿಂಗ್, ಐಡಲ್ ಸ್ಟಾರ್ಟ್/ ಸ್ಟಾಪ್, 4-ಇಂಚಿನ ಡಿಜಿಟಲ್ ಕ್ಲಸ್ಟರ್, ಡುಯಲ್ ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎಲ್ಇಡಿ ಇಂಡಿಕೇಟರ್‌ಗಳು, ಫ್ರಂಟ್ ಪವರ್ ವಿಂಡೋಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

2024 Tata Punch Facelift Suv Variants Wise Features Explained You Need To Know

ಪ್ಯೂರ್ (ಒ): ನೂತನ ಟಾಟಾ ಪಂಚ್ ಕಾರಿನ ಈ ರೂಪಾಂತರವು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಆದಾಗ್ಯೂ ಬಹುತೇಕ ವೈಶಿಷ್ಟ್ಯಗಳು 'ಪ್ಯೂರ್'ನಂತೆಯೇ ಇದೆ. ಹೆಚ್ಚುವರಿಯಾಗಿ ಎಲೆಕ್ಟ್ರಿಕಲ್ ಅಡ್ಜಸ್ಟಬಲ್ ಒಆರ್‌ವಿಎಂ, ಪವರ್ ವಿಂಡೋಗಳು, ಫ್ಲಿಪ್ ಕೀಯೊಂದಿಗೆ ಸೆಂಟ್ರಲ್ ರಿಮೋಟ್ ಲಾಕಿಂಗ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಅಡ್ವೆಂಚರ್: ಇದು ಕೂಡ ಅತ್ಯುತ್ತಮವಾಗಿರುವ ರೂಪಾಂತರವಾಗಿದೆ. ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್, ಎಲೆಕ್ಟ್ರಿಕಲ್ ಅಡ್ಜಸ್ಟಬಲ್ ಒಆರ್‌ವಿಎಂ, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳು, ಫುಲ್ ವೀಲ್ ಕವರ್‌ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, 4 ಸ್ಪೀಕರ್‌ಗಳು, ಕೀಯೊಂದಿಗೆ ಸೆಂಟ್ರಲ್ ರಿಮೋಟ್ ಲಾಕಿಂಗ್, 8.89 ಸೆಂ.ಮೀ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಪವರ್ ವಿಂಡೋನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

2024 Tata Punch Facelift Suv Variants Wise Features Explained You Need To Know

ಅಡ್ವೆಂಚರ್ ರಿದಮ್: ಈ ರೂಪಾಂತರವು 'ಅಡ್ವೆಂಚರ್'ನಂತೆಯೇ ಎಲ್ಲ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರೊಟ್ಟಿಗೆ 17.78 ಸೆಂ.ಮೀ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 2 ಟ್ವೀಟರ್‌ಗಳು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ನವೀನ ಶೈಲಿಯ ವೈಶಿಷ್ಟ್ಯಗಳನ್ನು (ಫೀಚರ್) ಒಳಗೊಂಡಿದೆ.

ಅಡ್ವೆಂಚರ್ ಸನ್‌ರೂಫ್: ಇದರ ಹೆಸರೇ ಹೇಳುವುವಂತೆ ಈ ರೂಪಾಂತರ ಎಲೆಕ್ಟ್ರಿಕ್ ಸನ್‌ರೂಫ್ ಆಯ್ಕೆಯನ್ನು ಹೊಂದಿದೆ. ಜೊತೆಯಲ್ಲಿ ರೇರ್ ಎಸಿ ವೆಂಟ್‌ಗಳು, ಶಾರ್ಕ್ ಫಿನ್ ಆಂಟೆನಾ, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟ್ಮೆಂಟ್, ರೇರ್ ಎ-ಟೈಪ್ ಯುಎಸ್‌ಬಿ ಪೋರ್ಟ್, ಆಟೋ ಹೆಡ್‌ಲ್ಯಾಂಪ್‌ಗಳು, ಆರ್ಮ್‌ರೆಸ್ಟ್ ಹಾಗೂ ರೈನ್-ಸೆನ್ಸಿಂಗ್ ವೈಪರ್‌ಗಳನ್ನು ಪಡೆದಿದೆ.

2024 Tata Punch Facelift Suv Variants Wise Features Explained You Need To Know

ಅಡ್ವೆಂಚರ್ ಪ್ಲಸ್ ಸನ್‌ರೂಫ್: ಇದು 'ಅಡ್ವೆಂಚರ್ ಸನ್‌ರೂಫ್' ರೂಪಾಂತರಕ್ಕೆ ಹೋಲಿಕೆಯಾಗುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, 2 ಟ್ವೀಟರ್‌ಗಳು, 17 ಸೆಂ.ಮೀ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ರೇರ್ ವೈಪರ್ & ವಾಶ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾನಂತಹ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಅಕಾಂಪ್ಲಿಶ್ಡ್ ಪ್ಲಸ್: ಈ ರೂಪಾಂತರ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ರೇರ್ ಡಿಫಾಗರ್, ರೇರ್ ಎಸಿ ವೆಂಟ್‌ಗಳು, 26.03 ಸೆಂ.ಮೀ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕೂಲ್ಡ್ ಗ್ಲೋವ್ ಬಾಕ್ಸ್ ಮತ್ತು ಫಾಸ್ಟ್ ಸಿ-ಟೈಪ್ ಯುಎಸ್‌ಬಿ ಪೋರ್ಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಅಕಾಂಪ್ಲಿಶ್ಡ್ ಪ್ಲಸ್ ಸನ್‌ರೂಫ್: ಇದು 'ಅಕಾಂಪ್ಲಿಶ್ಡ್ ಪ್ಲಸ್' ರೀತಿಯಲ್ಲಿಯೇ ಎಲ್ಲ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಮೂಲಕ ಹೆಚ್ಚು ಆಕರ್ಷಣೀಯವಾಗಿದೆ. ಆದಾಗ್ಯೂ ವಿಶೇಷವಾಗಿ ಎಲೆಕ್ಟ್ರಿಕ್ ಸನ್‌ರೂಫ್, ರೈನ್ ಸೆನ್ಸಿಂಗ್ ವೈಪರ್‌ಗಳು, ರೂಫ್ ರೈಲ್ಸ್ ಮತ್ತು ಆಟೋ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯಬಹುದು.

ಕ್ರಿಯೇಟಿವ್ ಪ್ಲಸ್: ಈ ರೂಪಾಂತರವನ್ನು ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಲೆವೆಲ್ ವೇರಿಯೆಂಟ್) ಎಂದೇ ಬಣ್ಣಿಬಹುದಾಗಿದೆ. ಇದರಲ್ಲಿ ಆಟೋ ಹೆಡ್‌ಲ್ಯಾಂಪ್‌ಗಳು, ಲೆದರ್ ಸ್ಟೀರಿಂಗ್, ಡೈಮಂಡ್-ಕಟ್ ಅಲಾಯ್ ವೀಲ್‌ಗಳು, ಪಡ್ಲ್ ಲ್ಯಾಂಪ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ವೈರ್‌ಲೆಸ್ ಚಾರ್ಜರ್, ಆಟೋ ಫೋಲ್ಡಿಂಗ್ ಒವಿಆರ್‌ಎಂಗಳಂತಹ ವಿವಿಧ ವೈಶಿಷ್ಟ್ಯಗಳಿವೆ. ಕ್ರಿಯೇಟಿವ್ ಪ್ಲಸ್ ಸನ್‌ರೂಫ್ ರೂಪಾಂತರವು 'ಕ್ರಿಯೇಟಿವ್ ಪ್ಲಸ್'ನಂತೆಯೇ ಇದ್ದು, ಹೆಚ್ಚುವರಿಯಾಗಿ ಎಲೆಕ್ಟ್ರಿಕ್ ಸನ್‌ರೂಫ್ ಹೊಂದಿದೆ.

ಕಾರ್ಯಕ್ಷಮತೆ: 2024ರ ನವೀಕರಿಸಿದ ಟಾಟಾ ಪಂಚ್ ಫೇಸ್‌ಲಿಫ್ಟ್ ಎಸ್‌ಯುವಿ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿದೆ. 87 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 115 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದ್ದು, ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿಯೂ ದೊರೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, September 19, 2024, 10:34 [IST]
English summary
2024 tata punch facelift suv variants wise features explained you need to know
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+