ಕೇವಲ 6 ಲಕ್ಷಕ್ಕೆ ಹೊಸ ಟಾಟಾ ಕಾರು ಖರೀದಿಸಿ: 5-ಸ್ಟಾರ್ ರೇಟಿಂಗ್‌ನ ಸಣ್ಣ ಫ್ಯಾಮಿಲಿ ಕಾರು!

ಮೊದಲಿನಿಂದಲು ಟಾಟಾ ಪಂಚ್ ತನ್ನ ವಿಭಾಗದಲ್ಲಿ ಉತ್ತಮ ಮಾರಾಟದೊಂದಿಗೆ ಮುನ್ನುಗ್ಗುತ್ತಿದೆ. ಉತ್ತಮ ನಿರ್ಮಾಣ ಗುಣಮಟ್ಟ, ಯೋಗ್ಯ ವೈಶಿಷ್ಟ್ಯಗಳು, ಕಡಿಮೆ ಬೆಲೆ ಸೇರಿದಂತೆ ತನ್ನ ಘಾತ್ರಕ್ಕೆ ತಕ್ಕಂತೆ ಎಂಜಿನ್‌ ಪವರ್‌ನೊಂದಿಗೆ ಮೆಚ್ಚುಗೆ ಪಡೆದಿದೆ. ಇದೀಗ 2024ರ ನವೀಕೃತ ಟಾಟಾ ಪಂಚ್ ಎಸ್‌ಯುವಿಯನ್ನು ಇತ್ತೀಚಗೆ ಬಿಡುಗಡೆ ಮಾಡಲಾಗಿದೆ. ಮೈಕ್ರೋ ಎಸ್‌ಯುವಿ ಸೆಗ್ಮೆಂಟಿನಲ್ಲಿ ಪೈಪೋಟಿ ಹೆಚ್ಚಾಗಿರುವುದರಿಂದ ಟಾಟಾ ಮೋಟಾರ್ಸ್ ತನ್ನ ಹೊಸ ಪಂಚ್ ಅನ್ನು ನವೀಕರಣಗೊಳಿಸಿ ಬಿಡುಗಡೆ ಮಾಡಿದೆ. ಹಾಗಾದ್ರೆ ಈ ಹೊಸ ಪಂಚ್‌ನಲ್ಲಿ ಏನೆಲ್ಲಾ ಅಪ್‌ಡೇಟ್‌ಗಳಿವೆ ಎಂಬುದನ್ನು ಇಲ್ಲಿ ನೋಡೋಣ.

ಹೊಸ ಅಪ್‌ಡೇಟ್‌ಗಳು: 2024ರ ಪಂಚ್ ಈಗ ಸೆಂಟರ್ ಕನ್ಸೋಲ್‌ನಲ್ಲಿ USB ಟೈಪ್-ಸಿ ಚಾರ್ಜಿಂಗ್ ಪೋರ್ಟ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಹೊಸ 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಎಲೆಕ್ಟ್ರಿಕ್ ಸನ್‌ರೂಫ್, ಹಿಂಭಾಗದಲ್ಲಿ ಎಸಿ ವೆಂಟ್‌ಗಳು, ಮುಂಭಾಗದಲ್ಲಿ ಆರ್ಮ್ ರೆಸ್ಟ್ ನೀಡಲಾಗಿದೆ.

2024-tata-punch-facelift-top-things-you-should-know

ಹೊಸ ಬೆಲೆ: ಹೊಸ ಟಾಟಾ ಪಂಚ್ ಎಸ್‌ಯುವಿ (Tata Punch SUV) ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 6.12 ಲಕ್ಷಗಳಾಗಿದೆ. ಇದರ ಟಾಪ್ ವೇರಿಯೆಂಟ್ ಬೆಲೆಯು ರೂ. 9.45 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಸಿಟ್ರನ್ ಸಿ3 ಮತ್ತು ಹ್ಯುಂಡೈ ಎಕ್ಸ್‌ಟರ್‌ಗೆ ಪ್ರತಿಸ್ಪರ್ಧಿಯಾಗಿರುವ ಪಂಚ್, ವೇರಿಯೆಂಟ್ ಶ್ರೇಣಿಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಮತ್ತು ಪರಿಷ್ಕರಣೆಯನ್ನು ಪಡೆಯುತ್ತದೆ.

ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ: ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ ಕಾರು ಹಳೆಯ ಪಂಚ್‌ನಂತೆ ಅದೇ 1.2 - ಲೀಟರ್, ಮೂರು ಸಿಲಿಂಡರ್, NA ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಇದು 87 ಬಿಹೆಚ್‍ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್‌ಗಳೊಂದಿಗೆ ಜೋಡಿಸಲಾಗಿದೆ.

2024-tata-punch-facelift-top-things-you-should-know

ಇನ್ನು ಹೊಸ ಪಂಚ್‌ನಲ್ಲಿ ಹೆಚ್ಚುವರಿಯಾಗಿ ಒಟ್ಟು ಏಳು ಆವೃತ್ತಿಗಳಲ್ಲಿ ನೀಡಲಾಗುವ ಸಿಎನ್‌ಜಿ ಟ್ರಿಮ್ ಕೂಡ ಆಫರ್ ನಲ್ಲಿದೆ. ಇದು ಹೀಗಿದ್ದರೇ ಹಳೆಯ ಪಂಚ್‌ಗೆ ಕೂಡ ಅದೇ ಬೇಡಿಕೆ ಪಡೆದಿದೆ. ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 2024ರ ಆಗಸ್ಟ್‌ವರೆಗೆ ಬರೋಬ್ಬರಿ 4 ಲಕ್ಷ ಯುನಿಟ್ ಪಂಚ್ ಎಸ್‌ಯುವಿಗಳು ಮಾರಾಟವಾಗಿವೆ.

ಪಂಚ್ ವೇರಿಯೆಂಟ್‌ಗಳು: ಪ್ಯೂರ್, ಪ್ಯೂರ್ (O), ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಡ್ವೆಂಚರ್ S, ಅಡ್ವೆಂಚರ್ ಪ್ಲಸ್ ಎಸ್, ಅಕಾಂಪ್ಲಿಶ್ಡ್ ಪ್ಲಸ್, ಅಕಾಂಪ್ಲಿಶ್ಡ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್, ಕ್ರಿಯೇಟಿವ್ ಪ್ಲಸ್ ಎಸ್ ಎಂಬ 10 ಆಯ್ಕೆಗಳಲ್ಲಿ ಟಾಟಾ ಪಂಚ್ ಈಗ ಲಭ್ಯವಿದೆ. ಈ ಟಾಟಾ ಪಂಚ್ ಸುರಕ್ಷತೆಯಲ್ಲಿ 5-ಸ್ಟಾರ್ ರೇಟಿಂಗ್‌ ಕೂಡ ಪಡೆದುಕೊಂಡಿದೆ.

2024-tata-punch-facelift-top-things-you-should-know

ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ತನ್ನ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಗಳು ಹೆಚ್ಚಾಗಿರುವ ಕಾರಣ 2024ರ ನವೀಕೃತ ಪಂಚ್ (Tata Punch Facelift) ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಹೊಸ ಕಾರು ತನ್ನ ಸೆಗ್ಮೆಂಟಿನಲ್ಲಿ ಈಗ ಹೊಸ ಅಪ್‌ಡೇಟ್‌ಗಳೊಂದಿಗೆ ಪ್ರತಿಸ್ಪರ್ಧಿಗಳಿಗೆ ಉತ್ತಮ ಪೈಪೋಟಿ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, September 21, 2024, 12:17 [IST]
English summary
2024 tata punch facelift top things you should know
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+