ಟಾಟಾ ಕರ್ವ್ ಪ್ರತಿಸ್ಪರ್ಧಿ ಈ ಕಾರು: ಎಲೆಕ್ಟ್ರಿಕ್ ರೂಪದಲ್ಲಿ ಬರುವುದು ನಿಶ್ಚಿತ.. ಸದ್ದಿಲ್ಲದೇ ಪರೀಕ್ಷೆ, ಯಾವುದು?
ಫ್ರಾನ್ಸ್ ಮೂಲದ ಸಿಟ್ರನ್ (Citroen) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಆಗಸ್ಟ್‌ನಲ್ಲಿ 'ಟಾಟಾ ಕರ್ವ್'ಗೆ ಕೂಪೆ ಎಸ್‌ಯುವಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಬಸಾಲ್ಟ್ (Basalt) ಕಾರನ್ನು ಪರಿಚಯಿಸಿತ್ತು. ಈ ಎಸ್‌ಯುವಿ ಹೆಚ್ಚು ಆಕರ್ಷಕವಾಗಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸಿಟ್ರನ್ ಕಂಪನಿಯು ಇದೇ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಮಾರಾಟಕ್ಕೆ ತರಲು ಸದ್ದಿಲ್ಲದೇ ತಯಾರಿ ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ಸದ್ಯ, ಸಿಟ್ರನ್ ಬಸಾಲ್ಟ್ ಇವಿ (Citroen Basalt EV) ಎನ್ನಲಾದ ಕಾರೊಂದು ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಅದಕ್ಕೆ ಸಂಬಂಧ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಈ ಕಾರು ಬಹುತೇಕ ಪೆಟ್ರೋಲ್ ಚಾಲಿತ ಬಸಾಲ್ಟ್ ಮಾದರಿಗೆ ಹೋಲಿಕೆಯಾಗುತ್ತಿರುವುದನ್ನು ಸುಲಭವಾಗಿ ಗುರುತಿಸಬಹುದು. ಆದರೆ ಕಪ್ಪು (ಬ್ಲ್ಯಾಕ್) ಕವರ್‌ನಿಂದ ಮುಚ್ಚಿದ್ದ ಹಿನ್ನೆಲೆ, ವಿನ್ಯಾಸದ ಕುರಿತಂತೆ ಅಷ್ಟಾಗಿ ಗೊತ್ತಾಗಲಿಲ್ಲ.

ನೂತನ ಸಿಟ್ರನ್ ಬಸಾಲ್ಟ್ ಎಲೆಕ್ಟ್ರಿಕ್ ಎಸ್‌ಯುವಿ ವಿನ್ಯಾಸದಲ್ಲಿ ಹಲವು ಬದಲಾವಣಿಗಳನ್ನು ಪಡೆದುಕೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ವಿಶೇಷವಾಗಿ ಹೊಸದಾದ ಅಲಾಯ್ ವೀಲ್‌ಗಳು ಹಾಗೂ ರೇರ್ (ಹಿಂಭಾಗ) ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್ ಹೊಂದಿರಲಿದೆ ಎಂದು ತಿಳಿದುಬಂದಿದೆ. ಇದರೊಟ್ಟಿಗೆ ಪೆಟ್ರೋಲ್ ಚಾಲಿತ 'ಬಸಾಲ್ಟ್'ನಂತೆಯೇ ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಶಾರ್ಕ್-ಫಿನ್ ಆಂಟೆನಾ, ರೂಫ್‌ಲೈನ್ ಮತ್ತು ಫ್ಲಾಪ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಹೊಚ್ಚ ಹೊಸ ಸಿಟ್ರನ್ ಬಸಾಲ್ಟ್ ಇವಿ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.2-ಇಂಚು), ವೈರ್‌ಲೆಸ್ ಮೊಬೈಲ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ವೈರ್‌ಲೆಸ್ ಮೊಬೈಲ್ ಕನೆಕ್ಟಿವಿಟಿಯನ್ನು ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ.

ಈ ಸಿಟ್ರನ್ ಬಸಾಲ್ಟ್ ಎಲೆಕ್ಟ್ರಿಕ್ ಕಾರು, 35 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರಲಿದೆ ಎನ್ನಲಾಗಿದೆ. ಸಂಪೂರ್ಣ ಚಾರ್ಜ್‌ನಲ್ಲಿ 450 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿದೆ ಎಂದು ತಿಳಿದುಬಂದಿದ್ದು, 2025 ರಲ್ಲಿ ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಕೈಗೆಟುಕುವ ಬೆಲೆಯನ್ನು ಒಳಗೊಂಡಿರಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಪ್ರಸ್ತುತ ದೇಶೀಯವಾಗಿ ಲಭ್ಯವಿರುವ ಪೆಟ್ರೋಲ್ ಚಾಲಿತ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ ಕನಿಷ್ಠ ರೂ.7.99 ಲಕ್ಷದಿಂದ ರೂ.13.62 ಲಕ್ಷದವರೆಗೂ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. 19.5 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಜನರು ಓಡಾಟ ನಡೆಸಬಹುದು. ಪೋಲಾರ್ ವೈಟ್, ಸ್ಟೀಲ್ ಗ್ರೇ, ಪ್ಲಾಟಿನಂ ಗ್ರೇ ಮತ್ತು ಕಾಸ್ಮೊ ಬ್ಲೂ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.
ನೂತನ ಸಿಟ್ರನ್ ಬಸಾಲ್ಟ್ ಕಾರು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.2-ಇಂಚು), ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ (7-ಇಂಚು), ವೈರ್‌ಲೆಸ್ ಫೋನ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್ ಸೇರಿದಂತೆ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Carwale


Click it and Unblock the Notifications








