ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ ವಿಶೇಷತೆಗಳು

ಟಾಟಾ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ತನ್ನ 2025ರ ರೇಂಜ್ ರೋವರ್ ಸ್ಪೋರ್ಟ್ (Range Rover Sport) ಎಸ್‍ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.45 ಕೋಟಿಯಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಬೆಲೆಯು ರೂ.5 ಲಕ್ಷ ಹೆಚ್ಚಳ ಪಡೆದುಕೊಂಡಿದೆ. ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ ಡೈನಾಮಿಕ್ SE ರೂಪಾಂತರದ ಸ್ಥಗಿತಗೊಳಿಸಿದ ಕಾರಣ ಡೈನಾಮಿಕ್ HSE ಅನ್ನು ಹೊಸ ಎಂಟ್ರಿ ಲೆವೆಲ್ ಆಯ್ಕೆಯಾಗಿ ನೀಡಲಾಗಿದೆ

ಬೆಲೆ ಏರಿಕೆಯ ಹೊರತಾಗಿಯೂ, ರೇಂಜ್ ರೋವರ್ ಸ್ಪೋರ್ಟ್ ಐಷಾರಾಮಿ ಮತ್ತು ಭರ್ಜರಿ ಪರ್ಫಾಮೆನ್ಸ್ ಮಿಶ್ರಣವನ್ನು ನೀಡುವುದನ್ನು ಮುಂದುವರೆಸಿದೆ. ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಡೈನಾಮಿಕ್ HSE ಮಾದರಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳು ಲಭ್ಯವಿದೆ. ಈ ರೇಂಜ್ ರೋವರ್ ಸ್ಪೋರ್ಟ್‌ನ ಡೈನಾಮಿಕ್ ಎಚ್‌ಎಸ್‌ಇ ರೂಪಾಂತರವು ಈಗ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಹೊಸ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Range Rover Sport

ಎಂಜಿನ್: 2025ರ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿವೆ. ಈ ಐಷಾರಾಮಿ ಎಸ್‍ಯುವಿಯ ಪೆಟ್ರೋಲ್ ಡೈನಾಮಿಕ್ SE ರೂಪಾಂತರವು 3.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 394 bhp ಮತ್ತು 550 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನ್ನು ಹೊಂದಿದೆ.

ಇನ್ನು ಈ ಎಸ್‍ಯುವಿಯ ಡೀಸೆಲ್ ಡೈನಾಮಿಕ್ SE ರೂಪಾಂತರದಲ್ಲಿ 3.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 346 bhp ಮತ್ತು 700 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕುತೂಹಲಕಾರಿಯಾಗಿ, ಕಂಪನಿಯು ದೇಶದಲ್ಲಿ ಉತ್ಪಾದಿಸುವ ಯುನಿಟ್ ಗಳು ಭಾರತಕ್ಕೆ ಪ್ರತ್ಯೇಕವಾಗಿದೆ ಎಂದು ಹೇಳಿದೆ.

Range Rover Sport

ಫೀಚರ್ಸ್: ಈ ಹೊಸ ರೇಂಜ್ ರೋವರ್ ಸ್ಪೋರ್ಟ್ ಐಷಾರಾಮಿ ಎಸ್‍ಯುವಿಯು ಡ್ರೈವರ್ ಹೆಡ್-ಅಪ್ ಡಿಸ್ಪ್ಲೇ ಮತ್ತು ಆಟೋ-ಪಾರ್ಕಿಂಗ್ ಅಸಿಸ್ಟ್ ಅನ್ನು ಸಹ ಹೊಂದಿದೆ. ಈ ಹೊಸ ಎಸ್‍ಯುವಿಯು ಡಿಜಿಟಲ್ LED ಹೆಡ್‌ಲೈಟ್‌ಗಳು ಸಿಗ್ನೇಚರ್ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು, ಏರ್ ಸಸ್ಪೆನ್ಷನ್, ಚಾಲಿತ ಮತ್ತು ಹಿಟೆಡ್ ಸೀಟುಗಳು ಮತ್ತು ಮೆರಿಡಿಯನ್ ಸೌಂಡ್ ಸಿಸ್ಟಮ್‌ ಅನ್ನು ಹೊಂದಿದೆ.

ಇದಲ್ಲದೆ, ಜಾಗ್ವಾರ್ ಲ್ಯಾಂಡ್ ರೋವರ್ ಈ ಹಿಂದೆ ಆಟೋಬಯೋಗ್ರಫಿ ರೂಪಾಂತರಕ್ಕೆ ವಿಶೇಷವಾದ ವೈಶಿಷ್ಟ್ಯಗಳನ್ನು ಪರಿಚಯಿಸಿತು. ಮುಂಭಾಗದ ಮಸಾಜ್ ಫಂಕ್ಷನ್, ಮುಂಭಾಗ ಮತ್ತು ಹಿಂಭಾಗದ ವಿಂಡ್ ಹೆಡ್‌ರೆಸ್ಟ್‌ಗಳು, ಪ್ರಕಾಶಿತ ಸೀಟ್ ಬೆಲ್ಟ್ ಬಕಲ್‌ಗಳು ಮತ್ತು ರೇಂಜ್ ರೋವರ್ ಅಕ್ಷರಗಳಿಂದ ಅಲಂಕರಿಸಲ್ಪಟ್ಟ ಅಲ್ಯೂಮಿನಿಯಂ ಟ್ರೆಡ್ ಪ್ಲೇಟ್‌ಗಳನ್ನು ಹೊಂದಿದೆ. ಇದರೊಂದಿಗೆ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡುವುದನ್ನು ಮುಂದುವರೆಸಿದೆ.

Range Rover Sport

ಬಣ್ಣಗಳ ಆಯ್ಕೆ: 2025ರ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಫ್ಯೂಜಿ ವೈಟ್, ಸ್ಯಾಂಟೋರಿನಿ ಬ್ಲಾಕ್, ಜಿಯೋಲಾ ಗ್ರೀನ್, ವರೆಸಿನ್ ಬ್ಲೂ ಮತ್ತು ಚಾರೆಂಟೆ ಗ್ರೇ ಸೇರಿದಂತೆ ಐದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಜನಪ್ರ್ಪಿಯ ಕಾರು ತಯಾರಕರು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ತನ್ನ ಪ್ರಮುಖ ಎಸ್‍ಯುವಿಗಳ ಸ್ಥಳೀಯ ಉತ್ಪಾದನೆಯನ್ನು ಪ್ರಾರಂಭಿಸಿದರು ಮತ್ತು ರೇಂಜ್ ರೋವರ್ LWB ಮತ್ತು ರೇಂಜ್ ರೋವರ್ ಸ್ಪೋರ್ಟ್ ಎರಡರಲ್ಲೂ ಬೆಲೆಗಳನ್ನು ಕಡಿಮೆ ಮಾಡಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, December 22, 2024, 11:30 [IST]
English summary
2025 range rover sport suv top things details
Read more on range rover india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+