ಇಂಧನ ಚಾಲಿತ 4 ಮಹೀಂದ್ರಾ ಕಾರುಗಳು ಶೀಘ್ರದಲ್ಲೇ ಎಲೆಕ್ಟ್ರಿಕ್ ಅವತಾರದಲ್ಲಿ ಎಂಟ್ರಿ!
ಜನಪ್ರಿಯ ಎಸ್‌ಯುವಿ ತಯಾರಕ ಕಂಪನಿಯಾದ ಮಹೀಂದ್ರಾ, ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಗೆ ಪರಿವರ್ತನೆ ಹೊಂದಲು ಸಜ್ಜಾಗುತ್ತಿದೆ. ಇದಕ್ಕಾಗಿ, ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತವಿರುವ ತನ್ನ ಪೆಟ್ರೋಲ್ ಚಾಲಿತ ಕಾರುಗಳನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಪರಿಚಯಿಸಲು ನೋಡುತ್ತಿದೆ. ನೀವು ಮಹೀಂದ್ರಾ ಎಸ್‌ಯುವಿ ಪ್ರಿಯರಾಗಿದ್ದರೆ, ಬ್ರಾಂಡ್‌ನಿಂದ ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ. ಇದರಲ್ಲಿ ಸ್ಕಾರ್ಪಿಯೋ, ಬೊಲೆರೋ, ಎಕ್ಸ್‌ಯುವಿ ಹಾಗೂ ಥಾರ್ ಮಾಡೆಲ್‌ಗಳು ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿವೆ.
ಮಹೀಂದ್ರಾ ಥಾರ್ ಎಲೆಕ್ಟ್ರಿಕ್: ಕಳೆದ ವರ್ಷ, ಮಹೀಂದ್ರಾ ತನ್ನ ಜನಪ್ರಿಯ ಆಫ್-ರೋಡರ್ ಥಾರ್‌ನ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶಿಸಿತು. ಇದು INGLO ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಆಫ್-ರೋಡ್ ಸಾಮರ್ಥ್ಯಗಳನ್ನು ಬೆಂಬಲಿಸುವಂತೆ ಇದನ್ನು ನಿರ್ದಿಷ್ಟವಾಗಿ ಮಾರ್ಪಡಿಸಲಾಗುವುದು. ಇದರ ವ್ಹೀಲ್ ಬೇಸ್ 2,775 ಎಂಎಂ ನಿಂದ 2,975 ಎಂಎಂ ವರೆಗೆ ಇರಬಹುದು. ಇದು 5-ಡೋರ್ ಮಾದರಿಯಾಗಿದೆ.

ಇದರ ಪವರ್ ವಿಷಯಕ್ಕೆ ಬಂದರೆ 109 ಬಿಹೆಚ್‌ಪಿ ಮತ್ತು 135 ಎನ್ಎಂ ಫ್ರಂಟ್ ಮೋಟರ್ ಮತ್ತು 286 ಬಿಹೆಚ್‌ಪಿ ಮತ್ತು 535 ಎನ್ಎಂ ಹಿಂಭಾಗದ ಮೋಟರ್‌ನೊಂದಿಗೆ AWD ಸಾಮರ್ಥ್ಯದ ಡ್ಯುಯಲ್ ಮೋಟರ್ ಸೆಟಪ್ ಪಡೆಯಲಿದೆ. 60 ಕಿಲೋವ್ಯಾಟ್ ನಿಂದ 80 ಕಿಲೋವ್ಯಾಟ್ ಬ್ಯಾಟರಿ ಇರಲಿದ್ದು, ಕ್ರಮವಾಗಿ 325 ಕಿ.ಮೀ ಹಾಗೂ 435-450 ಕಿ.ಮೀ ರೇಂಜ್ ನೀಡುತ್ತವೆ.
ಮಹೀಂದ್ರಾ ಸ್ಕಾರ್ಪಿಯೋ ಎಲೆಕ್ಟ್ರಿಕ್: ವರದಿಗಳ ಪ್ರಕಾರ ಇದನ್ನು ಸ್ಕಾರ್ಪಿಯೋ.ಇ ಎಂದು ಹೆಸರಿಸಬಹುದು. ಈ ಮುಂಬರುವ ಎಸ್‌ಯುವಿ ಕೂಡ INGLO ಪ್ಲಾಟ್ ಫಾರ್ಮ್ ಆಧರಿಸಿದೆ. ಆಂತರಿಕವಾಗಿ ಪಿ 1 ಎಂದು ಸಂಕೇತನಾಮವನ್ನು ಹೊಂದಿರುವ ಈ ಪ್ಲಾಟ್ ಫಾರ್ಮ್ 2,775 ಎಂಎಂ ನಿಂದ 2,975 ಎಂಎಂ ವ್ಹೀಲ್ ಬೇಸ್ ಅನ್ನು ಸಪೋರ್ಟ್ ಮಾಡುತ್ತದೆ.

ಇದರ ಮೋಟಾರ್ 109 ಬಿಹೆಚ್‌ಪಿ ಪವರ್ ಮತ್ತು 135 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಿಂಭಾಗದಲ್ಲಿ 286 ಬಿಹೆಚ್‌ಪಿ ಮತ್ತು 535 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬ್ಯಾಟರಿ ಸಂರಚನೆಯನ್ನು ಅವಲಂಬಿಸಿ ನಿರೀಕ್ಷಿತ ವ್ಯಾಪ್ತಿಯು ಸುಮಾರು 325 ಕಿ.ಮೀ ಮತ್ತು 450 ಕಿ.ಮೀ ಆಗಿರಬಹುದು. ಇದು 60 ಕಿಲೋವ್ಯಾಟ್ ನಿಂದ 80 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದುವ ನಿರೀಕ್ಷೆಯಿದೆ.
ಮಹೀಂದ್ರಾ ಎಕ್ಸ್‌ಯುವಿ ಎಲೆಕ್ಟ್ರಿಕ್: ಇದು ಮಹೀಂದ್ರಾ ಎಕ್ಸ್‌ಯುವಿ 700 ನ ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ದೇಶದಲ್ಲಿ ಟೆಸ್ಟಿಂಗ್ ವೇಳೆ ಈ ಎಸ್‌ಯುವಿ ಹಲವಾರು ಬಾರಿ ಕಾಣಿಸಿಕೊಂಡಿದೆ. ಇತ್ತೀಚೆಗೆ, ಇದು ಒಳಭಾಗದಲ್ಲಿ ಮೂರು ಸ್ಕ್ರೀನ್‌ಗಳನ್ನು ಹೊಂದಿರುತ್ತದೆ ಎಂದು ದೃಢಪಡಿಸಲಾಗಿದೆ. ಇದು ಕೂಡ INGLO ಪ್ಲಾಟ್ ಫಾರ್ಮ್ ಅನ್ನು ಆಧರಿಸಿದ್ದು, 80 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ರೇಂಜ್ ಬಗ್ಗೆ ಹೇಳುವುದಾದರೆ, ಇದು ಸುಮಾರು 450-500 ಕಿ.ಮೀ ನೀಡುವ ನಿರೀಕ್ಷೆಯಿದೆ. ಮೋಟರ್‌ಗಳ ವಿಷಯಕ್ಕೆ ಬಂದರೆ, ಇದು ಹೆಚ್ಚಾಗಿ ಡ್ಯುಯಲ್-ಮೋಟರ್ ಸೆಟಪ್ ಅನ್ನು ಹೊಂದಿರಬಹುದು. ಈ ಮೋಟಾರ್ 230 ಬಿಹೆಚ್‌ಪಿ ಪವರ್ ನಿಂದ 350 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಇದು ಈ ವರ್ಷದ ಅಂತ್ಯದ ವೇಳೆಗೆ ಬರುವ ನಿರೀಕ್ಷೆಯಿದೆ.
ಮಹೀಂದ್ರಾ ಬೊಲೆರೊ ಎಲೆಕ್ಟ್ರಿಕ್: ಮಹೀಂದ್ರಾದ ಮತ್ತೊಂದು ಜನಪ್ರಿಯ ಎಸ್ ಯುವಿಗಳಲ್ಲಿ ಒಂದಾದ ಬೊಲೆರೊ ಕೂಡ ಎಲೆಕ್ಟ್ರಿಕ್ ಆಗಲಿದೆ. ಇದು ಕೂಡ INGLO ಪ್ಲಾಟ್ ಫಾರ್ಮ್ ಅನ್ನು ಬಳಸಬಹುದು. ವರದಿಗಳ ಪ್ರಕಾರ, ಬೊಲೆರೊ.ಇ 325 ಕಿ.ಮೀ ನಿಂದ 450 ಕಿ.ಮೀ ರೇಂಜ್ ನೀಡುವ ನಿರೀಕ್ಷೆಯಿದೆ. ಇದನ್ನು 60 ಕಿಲೋವ್ಯಾಟ್ ನಿಂದ 80 ಕಿಲೋವ್ಯಾಟ್ ನಡುವಿನ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಬಹುದು.


Click it and Unblock the Notifications