ಪನೊರೊಮಿಕ್ ಸನ್‌ರೂಫ್‌ನೊಂದಿಗೆ ಸಿಗುವ 5 ಜನಪ್ರಿಯ ಎಸ್‌ಯುವಿಗಳು.. ಕೈಗೆಟುಕುವ ಬೆಲೆ
ಭಾರತದ ವಾಹನ ಮಾರುಕಟ್ಟೆಯಲ್ಲಿ ಈಗ ಸನ್‌ರೂಫ್ (Sunroof) ಇರುವ ಕಾರುಗಳ ಮಾರಾಟ ಸಾಮಾನ್ಯವಾಗಿ ಬಿಟ್ಟಿದೆ. ಸಿಂಗಲ್-ಪೆನ್ ಎಲೆಕ್ಟ್ರಿಕ್ ಸನ್‌ರೂಫ್ ಹೊಂದಿರುವ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಆದಾಗ್ಯೂ ಹೆಚ್ಚಿನ ಗ್ರಾಹಕರು ದೊಡ್ಡದಾದ ಪನೊರೊಮಿಕ್ ಸನ್‌ರೂಫ್ ಪಡೆದಿರುವ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ, ಇದು ಹೆಚ್ಚು ಬೆಳಕು ಪ್ರವಹಿಸುವಂತೆ ಮಾಡುತ್ತದೆ. ಜೊತೆಗೆ ಕ್ಯಾಬಿನ್‌ಗೂ ಆಕರ್ಷಕವಾದ ನೋಟವನ್ನು ನೀಡುತ್ತದೆ. ಇಲ್ಲಿ ಪನೊರೊಮಿಕ್ ಸನ್‌ರೂಫ್ ಒಳಗೊಂಡಿರುವ 5 ಜನಪ್ರಿಯ ಎಸ್‌ಯುವಿ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಮೊದಲಿಗೆ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಬಗ್ಗೆ ಮಾತನಾಡೋಣ. ಇದು ಪನೊರೊಮಿಕ್ ಸನ್‌ರೂಫ್ ಆಯ್ಕೆಯಲ್ಲಿ ಮಾರಾಟವಾಗುತ್ತಿರುವ ಏಕೈಕ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಈ ಕಾರಿನ ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) 'ಎಎಕ್ಸ್7' ಸನ್‌ರೂಫ್‌ನೊಂದಿಗೆ ಖರೀದಿಗೆ ದೊರೆಯುತ್ತಿದ್ದು, ರೂ.12.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಈ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನೊಂದಿಗೆ ಸಿಗಲಿದ್ದು, 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಬಹುದು. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಡಿಸ್ಪ್ಲೇಗಳು, ಕ್ರೂಸ್ ಕಂಟ್ರೋಲ್, ಡುಯಲ್-ಝೋನ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ನ್ನು ಪಡೆದಿದೆ.
ಎಂಜಿ ಆಸ್ಟರ್ (MG Astor) ಎಸ್‌ಯುವಿಯ ಆಯ್ದ ರೂಪಾಂತರಗಳಲ್ಲಿ ಪನೊರೊಮಿಕ್ ಸನ್‌ರೂಫ್‌ನ್ನು ನೀಡಲಾಗುತ್ತದೆ. ಈ ಆಯ್ಕೆಯನ್ನು ಹೊಂದಿರುವ ಕಾರಿನ ಬೆಲೆ ರೂ.13.11 ಲಕ್ಷದಿಂದ ಆರಂಭವಾಗುತ್ತದೆ. ಇದು ಪೆಟ್ರೋಲ್ ಎಂಜಿನ್ ಪಡೆದಿದ್ದು, 15.43 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಕಿಯಾ ಸೆಲ್ಟೋಸ್ (Kia Seltos) ಕಾರಿನ ಹೆಚ್‌ಟಿಕೆ ಪ್ಲಸ್ ಮೇಲ್ಪಟ್ಟ ರೂಪಾಂತರಗಳು ಪನೊರೊಮಿಕ್ ಸನ್‌ರೂಫ್ ಆಯ್ಕೆಯನ್ನು ಪಡೆದಿವೆ. ಇವುಗಳ ಬೆಲೆ ರೂ.14.06 ಲಕ್ಷದಿಂದ ಆರಂಭವಾಗುತ್ತದೆ. ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 17 ರಿಂದ 20.7 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಹ್ಯುಂಡೈ ಕ್ರೆಟಾ (Hyundai Creta) ಜನಪ್ರಿಯ ಎಸ್‌ಯುವಿಯಾಗಿದೆ. ಇದರ ಮಧ್ಯಮ ಶ್ರೇಣಿ (ಮಿಡ್-ಲೆವೆಲ್) 'ಎಸ್ (ಒ)' ನಂತರದ ರೂಪಾಂತರಗಳು ಪನೊರೊಮಿಕ್ ಸನ್‌ರೂಫ್‌ನ್ನು ಪಡೆದಿದ್ದು, ಸರಿ ಸುಮಾರು ರೂ.14.36 ಲಕ್ಷದಿಂದ ದರಗಳು ಶುರುವಾಗುತ್ತವೆ. ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 10.25-ಇಂಚಿನ ಡುಯಲ್ ಡಿಸ್ಪ್ಲೇನಂತಹ ಹಲವು ವೈಶಿಷ್ಟ್ಯಗಳಿವೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಎಸ್‌ಯುವಿಯ ಆಯ್ದ ರೂಪಾಂತರಗಳು ಪನೊರೊಮಿಕ್ ಸನ್‌ರೂಫ್ ಆಯ್ಕೆಯನ್ನು ಹೊಂದಿವೆ. ರೂ.15.51 ಲಕ್ಷ ಆರಂಭಿಕ ಬೆಲೆಯನ್ನು ಪಡೆದಿವೆ. ಈ ಕಾರು ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಹಾಗೂ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications