7 ಲಕ್ಷದೊಳಗೆ 6 ಏರ್‌ಬ್ಯಾಗ್‌, ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬರುವ ಬಜೆಟ್ ಕಾರುಗಳು!

ಭಾರತೀಯ ಆಟೋ ಉದ್ಯಮವು ಪ್ರಸ್ತುತ ವಿಶ್ವದಲ್ಲಿ ಟಾಪ್‌-3 ಸ್ಥಾನವನ್ನು ಪಡೆಯುವತ್ತ ಹಾರುತ್ತಿದೆ. ಪ್ರತಿ ದಿನವೂ ಸಾವಿರಾರು ಕಾರುಗಳು ದೇಶಾದ್ಯಾಂತ ಮಾರಾಟವಾಗುತ್ತಿವೆ. ಗ್ರಾಹಕರು ಈಗ ಬೆಲೆ ಮತ್ತು ಮೈಲೇಜ್‌ಗಿಂತ ಭದ್ರತೆ ಮತ್ತು ಗುಣಮಟ್ಟವನ್ನು ಮುಖ್ಯವಾಗಿ ಪರಿಗಣಿಸುತ್ತಿದ್ದಾರೆ. ಈ ಹಿಂದೆ ಗ್ರಾಹಕರು ಕೇವಲ ಕಡಿಮೆ ಬೆಲೆಯ ಮತ್ತು ಉತ್ತಮ ಮೈಲೇಜ್ ಕಾರುಗಳನ್ನು ಪರಿಗಣಿಸುತ್ತಿದ್ದರು, ಆದರೆ ಈಗ ಕಾರುಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಾಗಿ ಗಮನಿಸುವಂತಾಗಿದೆ. ಈ ಲೇಖನದಲ್ಲಿ, 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ಭಾರತದ ಅಗ್ಗದ ಕಾರುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

1. ನಿಸ್ಸಾನ್ ಮ್ಯಾಗ್ನೈಟ್: ರೂ.6 ಲಕ್ಷ (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯೊಂದಿಗೆ ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ ಅತ್ಯಂತ ಕೈಗೆಟುಕುವ ಹ್ಯಾಚ್‌ಬ್ಯಾಕ್ ಎಸ್‌ಯುವಿಗಳಲ್ಲಿ ಒಂದಾಗಿದೆ. 6 ಏರ್‌ಬ್ಯಾಗ್‌ಗಳು, ISOfix ಚೈಲ್ಡ್ ಸೀಟ್ ಆಂಕೋರೇಜ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್, 3-ಪಾಯಿಂಟ್ ಸೀಟ್ ಬೆಲ್ಟ್, ಟಿಪಿಎಂಎಸ್, 360 ಡಿಗ್ರಿ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

6-airbag-cars-under-7-lakh-premium-safety-budget-friendly

2. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್: ರೂ. 5.92 ಲಕ್ಷ (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯೊಂದಿಗೆ ಭಾರತದಲ್ಲಿ ಅತ್ಯಂತ ಅಗ್ಗದ ಬೆಲೆಯ ಕಾರುಗಳಲ್ಲಿ ಒಂದಾಗಿರುವ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್, 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ಒದಗಿಸುತ್ತದೆ. ಜೊತೆಗೆ ABS, 3-ಪಾಯಿಂಟ್ ಸೀಟ್ ಬೆಲ್ಟ್, ISOfix ಚೈಲ್ಡ್ ಸೀಟ್ ಆಂಕೋರೇಜ್, ರಿಯರ್ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್ ಹೊಂದಿದೆ.

3. ಹ್ಯುಂಡೈ ಎಕ್ಸ್ಟರ್: ರೂ. 6.13 ಲಕ್ಷ (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯೊಂದಿಗೆ ಹ್ಯುಂಡೈ ಇತ್ತೀಚೆಗೆ ತನ್ನ ಇಂಜಿನ್ ತಂತ್ರಜ್ಞಾನದಲ್ಲಿ ಹೆಚ್ಚಿನ ನವೀಕರಣಗಳನ್ನು ಮಾಡಿದ್ದು, 6 ಏರ್‌ಬ್ಯಾಗ್‌ಗಳನ್ನು ಈ ಕಾರಿನಲ್ಲಿ ಒದಗಿಸಿದೆ. ABS, 3-ಪಾಯಿಂಟ್ ಸೀಟ್ ಬೆಲ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಡ್ಯುಯಲ್ ಡ್ಯಾಶ್ ಕ್ಯಾಮ್, ರಿಯರ್ ಸೆನ್ಸಾರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

6-airbag-cars-under-7-lakh-premium-safety-budget-friendly

4. ಮಾರುತಿ ಸುಜುಕಿ ಸ್ವಿಫ್ಟ್: ರೂ. 6.49 ಲಕ್ಷ (ಎಕ್ಸ್‌ ಶೋರೂಂ) ಆರಂಭಿಕ ಮಾರುತಿ ಸುಜುಕಿ ಸ್ವಿಫ್ಟ್, 6 ಏರ್‌ಬ್ಯಾಗ್‌ಗಳನ್ನು ಹೊಂದಿದ ಮೊದಲ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ. ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ರಿವರ್ಸ್ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್‌ನಂತಹ ಫೀಚರ್‌ಗಳನ್ನು ಹೊಂದಿದೆ.

ಭದ್ರತೆ, ಗುಣಮಟ್ಟ ಮತ್ತು ಲಭ್ಯವಿರುವ ಫೀಚರ್‌ಗಳ ದೃಷ್ಟಿಯಿಂದ, ಈ ಕಾರುಗಳು ಭಾರತೀಯ ಆಟೋಮೋಬೈಲ್ ಮಾರುಕಟ್ಟೆಯಲ್ಲಿ ಅತ್ಯುತ್ತಮ ಆಯ್ಕೆಗಳನ್ನು ನೀಡುತ್ತಿವೆ. 6 ಏರ್‌ಬ್ಯಾಗ್‌ಗಳು, ABS, ISOfix ಚೈಲ್ಡ್ ಸೀಟ್ ಆಂಕೋರೇಜ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಹಾಗೂ ಮತ್ತಿತರ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಕಾರುಗಳು ನಿಮಗೆ ಸುಧಾರಿತ ಸುರಕ್ಷತೆ ಮತ್ತು ಅತ್ಯುತ್ತಮ ಬಜೆಟ್ ಸ್ನೇಹಿ ಅನುಭವವನ್ನು ಒದಗಿಸುತ್ತವೆ.

6-airbag-cars-under-7-lakh-premium-safety-budget-friendly

ಪ್ರಸ್ತುತ ಬಹುತೇಕ ಎಲ್ಲಾ ಕಾರು ತಯಾರಕರು ತಮ್ಮ ಎಂಟ್ರಿ ಲೆವಲ್ ಮಾದರಿಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಮತ್ತು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸಲು ಪ್ರಾರಂಭಿಸಿದ್ದಾರೆ. ಹಳೆಯ ದಿನಗಳಲ್ಲಿ, ಪ್ರೀಮಿಯಂ ಕಾರುಗಳಿಗೆ ಮಾತ್ರ ಸೀಮಿತವಾಗಿದ್ದ ಇಂತಹ ಭದ್ರತಾ ಫೀಚರ್‌ಗಳು ಈಗ ಅತ್ಯಂತ ಕೈಗೆಟುಕುವ, ಬಜೆಟ್ ಸ್ನೇಹಿ ಕಾರುಗಳಲ್ಲಿಯೂ ಲಭ್ಯವಾಗುತ್ತಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, December 30, 2024, 11:24 [IST]
English summary
6 airbag cars under 7 lakh premium safety budget friendly
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+