19 Km ಮೈಲೇಜ್. ಲಕ್ಷುರಿ ಫೀಚರ್ಸ್‌ನ ಹೊಸ ಹೋಂಡಾ ಕಾರಿಗೆ ಭಾರೀ ಬೇಡಿಕೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ (Honda Cars India) ತನ್ನ ಮುಂಬರುವ ಮೂರನೇ ತಲೆಮಾರಿನ ಅಮೇಜ್ ಕಾರನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ಡಿಜೈರ್ ಮಾದರಿಯು ಈಗಾಗಲೇ ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ಅಮೇಜ್ ಕಾರಿಗೆ ಪ್ರಬಲ ಎದುರಾಳಿಯಾಗಿದೆ. ಮಾರುತಿ ಡಿಜೈರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾಡೆಲ್ ಆಗಿರುವುದರಿಂದ ಹೋಂಡಾ ಅಮೇಜ್ ಮಾದರಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ದೊಡ್ಡ ಸವಾಲು ಇದೆ.
ಹೊಚ್ಚ ಹೊಸ ಹೋಂಡಾ ಅಮೇಜ್ (Honda Amaze) ಸೆಡಾನ್ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಈ ಕಾರು, ರೂ.8 ಲಕ್ಷದಿಂದ ರೂ.10.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಹೊಸ ಅಮೇಜ್ ಸೆಡಾನ್ ವಿ, ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ರೂಪಾಂತರಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಹೊಸ ಹೋಂಡಾ ಅಮೇಜ್‌ಗಾಗಿ ಈಗಾಗಲೇ ದೇಶದಾದ್ಯಂತ ಬುಕ್ಕಿಂಗ್‌ಗಳು ಪ್ರಾರಂಭವಾಗಿವೆ.

ಹೊಸ ಹೋಂಡಾ ಅಮೇಜ್ ಕಾರಿಗಾಗಿ ಟಾಪ್-ಎಂಡ್, ಸಂಪೂರ್ಣ-ಲೋಡ್ ಮಾಡಲಾದ ZX ರೂಪಾಂತರವು ಒಟ್ಟು ಬುಕಿಂಗ್‌ಗಳಲ್ಲಿ ಸುಮಾರು 60 ಪ್ರತಿಶತವನ್ನು ಹೊಂದಿದೆ. ಈ ಹೋಂಡಾ ಅಮೇಜ್ ಕಾರು ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಹೊಸದಾದ ಬಂಪರ್‌ಗಳನ್ನು ಪಡೆದಿದೆ. ವಿನೂತನವಾದ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ಇಡಿ ಡಿಆರ್‌ಎಲ್‌ಗಳು ಹೊಂದಿದೆ.
ಇದರೊಂದಿಗೆ ಎಲ್ಇಡಿ ಫಾಗ್ ಲೈಟ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು, 15-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರ್‌ಗಳನ್ನು ಒಳಗೊಂಡಿದೆ. ಈ ಹೋಂಡಾ ಅಮೇಜ್ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಇದರೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (8-ಇಂಚು), ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, 3 - ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳು ಸೇರಿದಂತೆ ವಿವಿಧ ಫೀಚರ್ಸ್ ಗಳನ್ನು ಹೊಂದಿವೆ.

ಹೋಂಡಾ ಅಮೇಜ್ ಸೆಡಾನ್ 1.2-ಲೀಟರ್ ನ್ಯಾಚುರಲಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿದೆ. 90 ಪವರ್ ಮತ್ತು 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಈ ಕಾರು 18.65 ರಿಂದ 19.46 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಈ ಹೋಂಡಾ ಅಮೇಜ್ ಕಾರು ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಸ್ಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆದಿದೆ. ಹೋಂಡಾ ಅಮೇಜ್ ಸೆಡಾನ್‌ನ ವಿತರಣೆಗಳು 2025ರ ಜನವರಿಯಿಂದ ಪ್ರಾರಂಭವಾಗಲಿದೆ.

ಈ ಸೆಡಾನ್ ಕಾರಿಗೆ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ನೇರ ಎದುರಾಳಿಯಾಗಿದೆ. ಇದರೊಟ್ಟಿಗೆ ಹ್ಯುಂಡೈ ಔರಾ (Hyundai Aura) ಮತ್ತು ಟಾಟಾ ಟಿಗೂರ್ (Tata Tigor) ಕಾರುಗಳು ಕೂಡ ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಈ ಹೋಂಡಾ ಅಮೇಜ್ ಕಾರಿಗೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








