Tata Sumo: 9-ಸೀಟರ್.. ಎರಡು ಕುಟುಂಬ ಹೋಗಬಹುದು, ಕಡಿಮೆ ಬೆಲೆಗೆ ಹೊಸ ಟಾಟಾ ಸುಮೋ ಮಾರಾಟಕ್ಕೆ?

ಟಾಟಾ ಮೋಟಾರ್ಸ್ (Tata Motors) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುತ್ತಿದ್ದ ಸುಮೋ (Sumo) ಎಂಪಿವಿ ಪ್ರತೇಕವಾದ ಅಭಿಮಾನಿ ಬಳಗವನ್ನು ಹೊಂದಿತ್ತು. ಈ ಕಾರು ದಶಕಗಳ ಕಾಲ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿತು. ಹಲವು ರೂಪದಲ್ಲಿ ಬಿಡುಗಡೆಗೊಂಡ 'ಟಾಟಾ ಸುಮೋ' 1994 ರಿಂದ 2019 ರವರೆಗೆ ಬರೋಬ್ಬರಿ 25 ವರ್ಷಗಳ ಕಾಲ ಕಿರೀಟವಿಲ್ಲದ ರಾಜನಂತೆ ಮೆರೆದಿತ್ತು. ಅದರಲ್ಲೂ ನಗರ ಪ್ರದೇಶದಂತೆ ಗ್ರಾಮೀಣ ಭಾಗದಲ್ಲಿಯೂ ಹೆಚ್ಚು ಜನಮನ್ನಣೆ ಗಳಿಸಿತ್ತು.

ಟಾಟಾ ಕಂಪನಿಯು ಶೀಘ್ರದಲ್ಲಿಯೇ ಹೊಸ ರೂಪದಲ್ಲಿ 'ಸುಮೋ' ಎಂಪಿವಿಯನ್ನು ಬಿಡುಗಡೆಗೊಳಿಸಲಿದೆ ಎಂಬ ಗಾಳಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತವಾದ ವಿವರಗಳು ಲಭ್ಯವಾಗಿಲ್ಲ. ಹೊಸ 'ಟಾಟಾ ಸುಮೋ' ಸಫಾರಿ ಕಾರಿಂದಂತೆ ವಿನ್ಯಾಸವನ್ನು ಒಳಗೊಂಡಿರುವ ನೀರಿಕ್ಷೆಯಿದೆ. ಹಳೆಯ ಸುಮೋಗೆ ಹೋಲಿಕೆ ಮಾಡಿದರೆ, ಮತ್ತಷ್ಟು ವಿಶಾಲವಾಗಿರಲಿದೆ ಎಂದು ತಿಳಿದುಬಂದಿದೆ.

9-Seater Tata Sumo Expected To Relaunch Price Mileage Features Details

ಮುಂಬರುವ ಟಾಟಾ ಸುಮೋ (Tata Sumo) ಎಂಪಿವಿ ಶಕ್ತಿಯುತವಾದ 1.2 - ಲೀಟರ್ ಪೆಟ್ರೋಲ್ ಹಾಗೂ 1.5 - ಲೀಟರ್ ಡೀಸೆಲ್ ಎಂಜಿನ್ ಹಾಗೂ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿರುವ ಸಾಧ್ಯಯಿದೆ. ಸರಿ ಸುಮಾರು 20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ.

ನೂತನ ಟಾಟಾ ಸುಮೋ ರೂ.8 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಮಾರಾಟಕ್ಕೆ ಬರಬಹುದು ಎನ್ನಲಾಗಿದೆ. ಜೊತೆಗೆ 7 ಅಥವಾ 9 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿಬಹುದು ಎಂಬ ನೀರಿಕ್ಷೆಯಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈಮೆಂಟ್ ಸಿಸ್ಟಮ್, ಪವರ್ ಸ್ಟೀರಿಂಗ್ ವೀಲ್ ಮತ್ತು ಪವರ್ ವಿಂಡೋಗಳು ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ.

9-Seater Tata Sumo Expected To Relaunch Price Mileage Features Details

2019ರಲ್ಲಿ ಮಾರಾಟದಿಂದ ಸ್ಥಗಿತವಾದ 'ಟಾಟಾ ಸುಮೋ ಗೋಲ್ಡ್' ಎಂಪಿವಿ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು ರೂ.5.81 ಲಕ್ಷದಿಂದ ರೂ.8.85 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿತ್ತು. 2956 ಸಿಸಿ ಡೀಸೆಲ್ ಎಂಜಿನ್ ಹಾಗೂ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿತ್ತು. 14.65 ಕೆಎಂಪಿಎಲ್‌ವರೆಗೆ ನೀಡುತ್ತಿತ್ತು. 7, 9 ಮತ್ತು 10 ಆಸನಗಳನ್ನು ಪಡೆದಿತ್ತು.

ಟಾಟಾ ಸುಮೋ ಹೆಸರಿನ ಹಿಂದಿನ ರಹಸ್ಯವೇನು: ಟಾಟಾ ಕಂಪನಿಯ ಏಳಿಗೆಗೆ ಶ್ರಮಿಸಿದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಮೂಲ್ಗಾವ್ಕರ್ ಅವರ ಗೌರವಾರ್ಥ 'ಸುಮೋ' ಎಂಬ ಹೆಸರನ್ನು ಇಡಲಾಗದೆ. ಸುಮಂತ್ ಪದದ ಮೊದಲ ಅಕ್ಷರವಾದ 'ಸು' ಮತ್ತು ಮೂಲ್ಗಾವ್ಕರ್ ಪದದ ಮೊದಲ ಅಕ್ಷರವಾದ 'ಮೂ' ಒಟ್ಟಿಗೆ ಸೇರಿ ಸುಮೋ ಆಗುತ್ತದೆ.

9-Seater Tata Sumo Expected To Relaunch Price Mileage Features Details

ಇನ್ನು, ಟಾಟಾ ಸುಮೋ ಎಂಪಿವಿಯನ್ನು ಮತ್ತೆ ಮಾರಾಟ ಮಾರಾಟಕ್ಕೆ ತರುವ ಬಗ್ಗೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಊಹಪೋಹದ ಸುದ್ದಿಗಳು ಮಾತ್ರ ಹರಿಡುತ್ತಿವೆ. ಒಂದೊಮ್ಮೆ ಟಾಟಾ ಸುಮೋ ಮಾರಾಟಕ್ಕೆ ಬಂದರೆ, ಎರಡು ಕುಟುಂಬ ಸುಲಭವಾಗಿ ಪ್ರಯಾಣಿಸಬಹುದು. ಇದರಿಂದ ಮಧ್ಯಮ ವರ್ಗದ ಜನರ ಕುಟುಂಬದ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 28, 2024, 22:44 [IST]
English summary
9 seater tata sumo expected to relaunch price mileage features details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+