ಪನೋರಮಿಕ್ ಸನ್‌ರೂಫ್ ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಎಸ್‌ಯುವಿಗಳು
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಈಗ ಸನ್‌ರೂಫ್ ಎಂಬುದು ಸಾಮಾನ್ಯ ವಿಷಯವಾಗಿದೆ. ಕಾರು ತಯಾರಕರು ಕೂಡ ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಅನೇಕ ಕಾರುಗಳಿಗೆ ಸನ್‌ರೂಫ್ ಅನಿವಾರ್ಯ ಎಂದು ನಂಬಿದ್ದಾರೆ. ಗ್ರಾಹಕರು ಈಗ ದೊಡ್ಡ ಪನೋರಮಿಕ್ ಸನ್‌ರೂಫ್ ಹೊಂದಿರುವ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಇದು ಹೆಚ್ಚಿನ ಬೆಳಕನ್ನು ನೀಡುತ್ತದೆ. ಜೊತೆಗೆ ಕ್ಯಾಬಿನ್‌ಗೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಸಿಂಗಲ್-ಪ್ಯಾನ್ ಎಲೆಕ್ಟ್ರಿಕ್ ಸನ್‌ರೂಫ್ ಈಗ ಕೈಗೆಟುಕುವ ಕಾರುಗಳಲ್ಲಿಯೂ ಲಭ್ಯವಿದೆ. ಹಾಗದ್ರೆ ಸನ್‌ರೂಫ್ ಹೊಂದಿರುವ ಕಡಿಮೆ ಬೆಲೆಯ ಕಾರುಗಳನ್ನು ಇಲ್ಲಿ ನೋಡೋಣ.
1) ಮಹೀಂದ್ರಾ XUV 3XO: ಮಹೀಂದ್ರಾ XUV 3XO ಟಾಪ್ ಎಂಡ್ ಎಎಕ್ಸ್ 7 ಟ್ರಿಮ್‌ನಲ್ಲಿ ಪನೋರಮಿಕ್ ಸನ್ ರೂಫ್ ನೀಡಲಾಗುತ್ತದೆ. ಇದು ಪ್ರಸ್ತುತ ಭಾರತದ ಅತ್ಯಂತ ಕೈಗೆಟುಕುವ ಎಸ್‌ಯುವಿಯಾಗಿದೆ. ಇದರ ಬೆಲೆಗಳು 12.49 ಲಕ್ಷ ರೂ. (ಎಕ್ಸ್ ಶೋರೂಂ) ಗಳಿಂದ ಪ್ರಾರಂಭವಾಗುತ್ತವೆ. ಇದು ಪ್ರಸ್ತುತ ಪನಾರಮಿಕ್ ಸನ್‌ರೂಫ್ ಜೊತೆಗೆ ಸೆಗ್ಮೆಂಟಿನಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಕಾರಾಗಿದೆ.

2) ಎಂಜಿ ಆಸ್ಟರ್: ಸೆಲೆಕ್ಟ್ ಟ್ರಿಮ್‌ನಿಂದ ಎಂಜಿ ಆಸ್ಟರ್‌ನಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ನೀಡಲಾಗುತ್ತದೆ. ಇದರ ಬೆಲೆಯು ಬೆಲೆ: 13.11 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಇದರ 1.5-ಲೀಟರ್, ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿಗೆ ಜೋಡಿಸಲಾಗಿದೆ. ಇದರ ಎಂಜಿನ್ 140 ಬಿಹೆಚ್ ಪವರ್ ಹಾಗೂ 220 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
3) ಕಿಯಾ ಸೆಲ್ಟೋಸ್: ಕಿಯಾ ಎಚ್‌ಟಿಕೆ + ವೇರಿಯೆಂಟ್‌ನಲ್ಲಿ ಪನೋರಮಿಕ್ ಸನ್‌ರೂಫ್ ನೀಡಲಾಗುತ್ತದೆ, ಬೆಲೆಗಳು 14.06 ಲಕ್ಷ ರೂ. (ಎಕ್ಸ್ ಶೋರೂಂ)ಗಳಿಂದ ಪ್ರಾರಂಭವಾಗುತ್ತವೆ. ಗೇರ್ ಬಾಕ್ಸ್ ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನುವಲ್, ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್, 6-ಸ್ಪೀಡ್ ಐಎಂಟಿ, 6-ಸ್ಪೀಡ್ ಸಿವಿಟಿ ಸೇರಿವೆ.

4) ಹ್ಯುಂಡೈ ಕ್ರೆಟಾ: ಹ್ಯುಂಡೈ ಕ್ರೆಟಾ ಇದು ಸೆಲ್ಟೋಸ್ ನಂತೆಯೇ ಅದೇ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದರ ಮಿಡ್-ಸ್ಪೆಕ್ ಎಸ್ (ಒ) ರೂಪಾಂತರದಿಂದ ಪನೋರಮಿಕ್ ಸನ್‌ರೂಫ್ ನೀಡಲಾಗುತ್ತದೆ. ಬೆಲೆಗಳು 14.36 ಲಕ್ಷ ರೂ. (ಎಕ್ಸ್ ಶೋರೂಂ)ಗಳಿಂದ ಪ್ರಾರಂಭವಾಗುತ್ತವೆ.
5) ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ತನ್ನ ಟಾಪ್-ಸ್ಪೆಕ್ ಟ್ರಿಮ್‌ಗಳಲ್ಲಿ ಪನೋರಮಿಕ್ ಸನ್‌ರೂಫ್ ನೀಡುವ ಎರಡನೇ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ನೆಕ್ಸಾನ್ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್‌ನ ಎಲ್ಲಾ ಆಯ್ಕೆಗಳನ್ನಿ ಪನೋರಮಿಕ್ ಸನ್‌ರೂಫ್ ನೊಂದಿಗೆ ಬರುತ್ತದೆ. ಇದರ ಬೆಲೆಗಳು 14.99 ಲಕ್ಷ ರೂ. (ಎಕ್ಸ್ ಶೋರೂಂ)ಗಳಿಂದ ಪ್ರಾರಂಭವಾಗುತ್ತವೆ.

6) ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮೈಲ್ಡ್-ಹೈಬ್ರಿಡ್ ಆವೃತ್ತಿಯ ಆಲ್ಫಾ ರೂಪಾಂತರದಲ್ಲಿ ಪನೋರಮಿಕ್ ಸನ್ ರೂಫ್ ಬರುತ್ತದೆ. ಇದು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗೆ ಜೋಡಿಸಲಾಗಿದೆ. ಇದರ ಬೆಲೆಗಳು ಬೆಲೆ: 15.51 ಲಕ್ಷ ರೂ. (ಎಕ್ಸ್ ಶೋರೂಂ)ಗಳಿಂದ ಪ್ರಾರಂಭವಾಗುತ್ತವೆ.
7) ಹ್ಯುಂಡೈ ಕ್ರೆಟಾ ಎನ್ ಲೈನ್: ಕ್ರೆಟಾ ಎನ್ 8 ಮತ್ತು ಎನ್ 10 ಟ್ರಿಮ್ ಮಟ್ಟಗಳಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ. ಇದರ ಬೆಲೆಗಳು ರೂ.16.82 (ಎಕ್ಸ್ ಶೋರೂಂ) ಲಕ್ಷಗಳಿಂದ ಪ್ರಾರಂಭವಾಗುತ್ತವೆ. ಇದರಲ್ಲಿ ರಿಟ್ಯೂನ್ಡ್ ಸಸ್ಪೆಂಷನ್ ಸೆಟಪ್ ಮತ್ತು ಸ್ಟೀರಿಂಗ್ ಡೈನಾಮಿಕ್ಸ್ ಅನ್ನು ಮರುನಿರ್ಮಾಣ ಮಾಡಲಾಗಿದೆ. ಸ್ಟ್ಯಾಂಡರ್ಡ್ ಕ್ರೆಟಾಕ್ಕಿಂತ ಸ್ಪೋರ್ಟಿಯರ್-ಸೌಂಡಿಂಗ್ ಎಕ್ಸಾಸ್ಟ್ ಪಡೆದಿದೆ.


Click it and Unblock the Notifications