ಹೊಸ ಮಹೀಂದ್ರಾ ಎಸ್‌ಯುವಿ ಇಂಟೀರಿಯರ್ ಬಿಡುಗಡೆ: ಐಷಾರಾಮಿ ಕಾರುಗಳಿಗೆ ಕಾಂಪಿಟೇಷನ್ ಪಕ್ಕಾ!
ಮಹೀಂದ್ರಾ ಕಂಪನಿಯು ಇದೇ ತಿಂಗಳು ತನ್ನ ಹೊಸ XUV 3XO ಎಂಬ ಕಾರನ್ನು ಇದೇ ತಿಂಗಳು ಮಾರುಕಟ್ಟೆಗೆ ತರಲಿದೆ ಎಂಬುದು ಈಗಾಗಲೇ ಜಗಜ್ಜಾಹಿರಾಗಿದೆ. ಈ ಕುರಿತಾಗಿ ಸ್ವತಃ ಮಹೀಂದ್ರಾ ಕಂಪನಿಯೇ ಅಧಿಕೃತ ಘೋಷಣೆಗಳನ್ನೂ ಹೊರಡಿಸಿದ್ದು ಮಾತ್ರವಲ್ಲದೇ ಈ ಕಾರಿನ ಟೀಸರ್ ಅನ್ನು ಜನರ ಮುಂದಿಟ್ಟಿತ್ತು.
ಅತ್ಯಾಧುನಿಕ ವಿಶಿಷ್ಟ ಫೀಚರ್ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ಕಾರು ಈಗಾಗಲೇ ಟೀಸರ್ ಮೂಲಕ ಎಲ್ಲರ ಮನಗೆದ್ದಿದೆ. ಹೊಸ ಮಹೀಂದ್ರಾ ಕಾರನ್ನು ಕೊಳ್ಳಬೇಕು ಎಂದುಕೊಂಡಿದ್ದವರು ಸದ್ಯಕ್ಕೆ ತಮ್ಮ ಹೊಸ ಕಾರು ಕೊಳ್ಳುವ ಯೋಜನೆಗಳನ್ನು ಮುಂದಕ್ಕೆ ಹಾಕಿದ್ದು ಈ ಕಾರು ಮಾರುಕಟ್ಟೆಗೆ ಬರಲಿ ಎಂದು ಕಾಯುತ್ತಿದ್ದಾರೆ.

ಇದೀಗ ಈ ಕಾರಿನ ಒಳಭಾಗದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ಹಳೆಯ XUV 300 ಕಾರನ್ನು ಅಪ್‌ಡೇಟ್ ಮಾಡಿದ್ದು ಮಾತ್ರವಲ್ಲದೇ, ರೀ ಬ್ಯಾಡ್ಜಿಂಗ್ ಮಾಡಿ XUV 3XO ಎಂಬ ಹೆಸರಿನಲ್ಲಿ ಲಾಂಚ್ ಮಾಡುತ್ತಿದೆ. 2018 ರಿಂದಲೂ XUV300 ಕಾರು ಯಾವುದೇ ರೀತಿಯ ಪೇಸ್‌ಲಿಫ್ಟ್ ಅನ್ನು ಪಡೆದಿರಲಿಲ್ಲ. ಇದೀಗ ಆ ಕಾರಿಗೆ ಭರ್ಜರಿ ಅಪ್‌ಡೇಟ್ ಸಿಗುತ್ತಿದೆ ಎಂದರೆ ತಪ್ಪಾಗಲಾರದು.
ಮಹೀಂದ್ರಾ ತನ್ನ ಮುಂಬರುವ SUV XUV 3XOನ 30-ಸೆಕೆಂಡ್ ಟೀಸರ್ ವೀಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದು, ಕಾರಿನ ಹಿಂಭಾಗದ ವಿಭಾಗವನ್ನು ಒಳಗೊಂಡಂತೆ ಕೆಲವು ಮುಖ್ಯಾಂಶಗಳನ್ನು ಭಾಗಶಃ ಬಹಿರಂಗಪಡಿಸಿದೆ. ಹಿಂಬದಿಯ ವಿಭಾಗದಿಂದ ಪ್ರಾರಂಭಿಸಿ, ಮುಂಬರುವ ಮಹೀಂದ್ರಾ XUV 3XO (Mahindra XUV 3XO) ಪೂರ್ಣ-ಅಗಲದ ಎಲ್ಇಡಿ ಟೈಲ್‌ಲ್ಯಾಂಪ್ ಅನ್ನು ತೋರಿಸಲಾಗಿದೆ.

ಇನ್ನು ಈ ಕಾರಿನ ಇಂಟೀರಿಯರ್‌ಗಳನ್ನು ನೊಡುವುದಾದರೆ, ಈ ಕಾರು ಪಕ್ಕಾ ಪ್ರೀಮಿಯಂ ಫೀಲ್ ಕೊಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಗಮನಿಸಿದರೆ ಇದೇ ವರ್ಷ ಲಾಂಚ್ ಆದ XUV400 ಎಲೆಕ್ಟ್ರಿಕ್ ಕಾರಿನ ರೀತಿಯಲ್ಲಿಯೇ ಹೋಲುತ್ತಿದೆ. ಕಾರಿನ ಡ್ಯಾಶ್ ಬೋರ್ಡ್‌ನ ಮಧ್ಯದಲ್ಲಿ ದೊಡ್ಡದಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಕಾಣಬಹುದು. ಈ ಕಾರಿನಲ್ಲಿ ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಸಹ ಪಡೆಯುತ್ತಿದೆ.
ಕಾರಿನ ಹಿಂಭಾಗದ ಆಸನಗಳನ್ನು ಗಮನಿಸಿದರೆ ಮೂರು ಜನ ಆರಾಮವಾಗಿ ಕಾರಿನ ಹಿಂಭಾಗದ ಸೀಟ್‌ನಲ್ಲಿ ಕುಳಿತುಕೊಳ್ಳಬಹುದಾಗಿದ್ದು, ಮೂವರಿಗೂ ಅಡ್ಜಸ್ಟಬಲ್ ಹೆಡ್ ರೆಸ್ಟ್ ಸಿಗುತ್ತದೆ. ಇದರಿಂದ ದೂರ ಪ್ರಯಾಣ ಮಾಡುವವರಿಗೆ ಆರಾಮದಾಯಕವಾಗಿ ಯಾವುದೇ ಒತ್ತಡಗಳಿಲ್ಲದೇ ಪ್ರಯಾಣ ಮಾಡಬಹುದಾಗಿದೆ. ಕಾರಿನ ಡ್ಯಾಶ್‌ಬೊರ್ಡ್ ಗ್ರೇ ಮತ್ತ ಬ್ಲಾಕ್ ಬಣ್ಣದಲ್ಲಿದ್ದು, ಕಾರಿಗೆ ಬೋಲ್ಡ್ ಲುಕ್ ನೀಡುತ್ತದೆ.

ಇನ್ನು ಈ ಕಾರಿನ ಇತರ ವಿಷಯಗಳನ್ನು ನೋಡುವುದಾದರೆ, ಮುಂಬರುವ ಮಹೀಂದ್ರಾ XUV 3XO ಕಾರು, ಮಹೀಂದ್ರಾ XUV300 ಗೆ ಬದಲಿ ಆಗಿದ್ದರೆ, ಮಾದರಿಯು ಅದರ ಪೂರ್ವವರ್ತಿಯಂತೆ ಅದೇ ಪವರ್‌ಟ್ರೇನ್ ಆಯ್ಕೆಗಳನ್ನು ಹಾಗೆಯೇ ಮುಂದುವರೆಸುವ ನಿರೀಕ್ಷೆಯಿದೆ. ಏಕೆಂದರೆ ಮಹೀಂದ್ರಾ XUV300 ಈಗಾಗಲೇ ತನ್ನ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾದ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.
ಪ್ರಸ್ತುತವಿರುವ XUV300 ನಲ್ಲಿನ ಬೇಸ್ 1.2-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (TCMPFi) ಅನ್ನು 108.6bhp ಮತ್ತು 200Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಹಾಗೆಯೇ ಇದರ ಹೆಚ್ಚು ಶಕ್ತಿಶಾಲಿ 1.2-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (TGDi) 128.7 bhp ಪವರ್ ಮತ್ತು 230Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications