ಬರಿಗೈಯಲ್ಲಿ ಮೆಜೆಸ್ಟಿಕ್‌ಗೆ ಬಂದಿಳಿದಿದ್ದ ಆರ್ಯವರ್ಧನ್‌ ಗುರೂಜಿ: ಇಂದು 3 ಕೋಟಿ ಬೆಲೆಯ ಕಾರಿಗೆ ಒಡೆಯ!

ಮನುಷ್ಯನ ಲಕ್‌, ಯಾವ ಕ್ಷಣದಲ್ಲಿ ಹೇಗೆ ಬದಲಾಗುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ. ಇದೀಗ ಈ ಸಾಲಿಗೆ ಮತ್ತೊಂದು ಉದಾಹರಣೆ ಸೇರಿಕೊಂಡಿದ್ದು, ನಮಗೆ ನಿಮಗೆಲ್ಲರಿಗೂ ಇವರ ಬಗ್ಗೆ ಸಾಕಷ್ಟು ತಿಳಿದಿದೆ. ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಇವರು ಕೋಟಿ ಬೆಲೆಯ ಕಾರನ್ನು ಖರೀದಿ ಮಾಡಿದ್ದಾರೆ.

ಬಿಗ್‌ಬಾಸ್‌ ಒಟಿಟಿ ಸೀಸನ್‌ 1 ರಲ್ಲಿ ಭಾಗವಹಿಸಿದ್ದ ಆರ್ಯವರ್ಧನ್‌ ಗುರೂಜಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆ ಸೀಸನ್‌ನಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಆರ್ಯವರ್ಧನ್‌ ಗುರೂಜಿಯ ಪಾತ್ರ ಅಪಾರ. ಇವರದ್ದು ಮತ್ತು ರೂಪೇಶ್‌ ರಾಜಣ್ಣ ಅವರ ಕಾಂಬೋ, ಕನ್ನಡಿಗರಿಗೆ ಸಾಕಷ್ಟು ಮನರಂಜನೆಯನ್ನು ನೀಡಿತ್ತು. ಇದೀಗ ಅದೇ ಆರ್ಯವರ್ಧನ್‌ ಗುರೂಜಿಯವರು ಸುಮಾರು 2.8 ಕೋಟಿ ಬೆಲೆಬಾಳುವ ಲಕ್ಷುರಿ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ.

Aryavardhan Guruji Brought Brand New Range Rover SV Carmel Edition Luxury SUV

ಆರ್ಯವರ್ಧನ್ ಗುರೂಜಿ ಖರೀದಿ ಮಾಡಿರುವ ಕಾರು ರೇಂಜ್‌ ರೋವರ್‌ ಕಂಪನಿ ಹೊಸದಾಗಿ ಪರಿಚಯಿಸಿರುವ ರೇಂಜ್‌ ರೋವರ್‌ ಎಸ್‌ವಿ ಕಾರ್ಮೆಲ್ ಎಂದು ತಿಳಿದು ಬಂದಿದೆ. ಭಾರತದಲ್ಲಿ ಸುಮಾರು 2.3 ರಿಂದ 2.8 ಕೋಟಿ ರೂ (ಎಕ್ಸ್‌ ಶೋರೂಮ್‌) ಬೆಲೆ ಬಾಳುವ ಈ ಕಾರು ಲಕ್ಷುರಿ ಎಸ್‌ಯುವಿಯ ಪರಮಾವಧಿ ಎಂದೇ ಹೆಳಬಹುದು. 2023ರಲ್ಲಿ ಈ ಕಾರು ಅನಾವರಣಗೊಂಡಿದ್ದ ಈ ಕಾರು 2024ರಲ್ಲಿ ಬಿಡುಗಡೆಯಾಗಿದೆ. ಐಷಾರಾಮಿ, ಆರಾಮದಾಯಕ ಪ್ರಯಾಣ ಹಾಗೂ ಗರಿಷ್ಠ ಸುರಕ್ಷತೆಯ ಕಾರಿದು.

ಈ ಕಾರಿನ (Range Rover SV Carmel Edition) ಎಂಜಿನ್‌ ಬಗ್ಗೆ ನೋಡುವುದಾದರೆ, 2996 cc - 4395 cc ಎಂಜಿನ್‌ ಆಯ್ಕೆಗಳು ಸಿಗುತ್ತವೆ. ಅದೇ ರೀತಿ ಈ ಕಾರಿನ ಪವರ್‌ ಬಗ್ಗೆ ನೋಡುವುದಾದರೆ, 750 Nm ಟಾರ್ಕ್‌ ಮತ್ತು 345.98 - 523 ಬುಹೆಚ್‌ಪಿ ಪವರ್‌ ಅನ್ನು ಉತ್ಪಾದಿಸುತ್ತವೆ. ಈ ಕಾರಿನ ಮೈಲೇಜ್‌ ಬಗ್ಗೆ ನೋಡುವುದಾದರೆ 13.16 kmpl ನೀಡುತ್ತಿದ್ದು, ಈ ಕಾರಿನ ರಿಫೈನ್‌ಮೆಂಟ್‌ ಎಷ್ಟಿದೆ ಎಂಬುದು ತಿಳಿಸುತ್ತದೆ.

Aryavardhan Guruji Brought Brand New Range Rover SV Carmel Edition Luxury SUV

ಇನ್ನು ರೇಂಜ್ ರೋವರ್‌ ಕಂಪನಿ ಬಗ್ಗೆ ನೋಡುವುದಾದರೆ, ಟಾಟಾ ಮಾಲಿಕತ್ವದ ತೆಕ್ಕೆಗೆ ಬಂದ ಮೇಲಂತೂ ಸಾಕಷ್ಟು ಪ್ರಯೋಗಕ್ಕೆ ಮುಂದಾಗುತ್ತಿದೆ. ಹಾಗಾಗಿಯೇ ಕಳೆದ ಕೆಲವು ವರ್ಷದ ಅಂತರದಲ್ಲಿ ಹಲವಾರು ಕಾರು ಮಾದರಿಗಳನ್ನು ಮಾರುಕಟ್ಟೆಗೂ ತಂದಿದೆ. ಇದು ಮಾತ್ರವಲ್ಲದೇ ಈ ಲಕ್ಷುರಿ ಎಸ್‌ಯುವಿ ದೈತ್ಯ ಎಲೆಕ್ಟ್ರಿಕ್‌ ಕ್ಷೇತ್ರಕ್ಕೂ ಕಾಲಿಡುವ ತಯಾರಿಯನ್ನು ನಡೆಸುತ್ತಿದೆ.

ಮಾಹಿತಿಗಳ ಪ್ರಕಾರ ರೇಂಜ್‌ ರೋವರ್‌ ತನ್ನ ಪ್ರಸಿದ್ದ ಕಾರು ಮಾದರಿಗಳಲ್ಲಿ ಒಂದಾದ ರೇಂಜ್‌ ರೋವರ್‌ ಸ್ಪೋರ್ಟ್‌ (Range Rover Sport Electric) ಅನ್ನು ಎಲೆಕ್ಟ್ರಿಕ್‌ ರೂಪಕ್ಕೆ ತರಲಿದೆ ಎಂದು ತಿಳಿದು ಬಂದಿದೆ. ಹೌದು, ರೇಂಜ್‌ ರೋವರ್‌ ಸ್ಪೋರ್ಟ್‌ ಎಲೆಕ್ಟ್ರಿಕ್‌ ಅನ್ನು ಈ ವರ್ಷದಲ್ಲೇ ಕಂಪನಿ ಅನಾವರಣಗೊಳಿಸಲಿದೆ. ತನ್ನ ಆರು ಎಲೆಕ್ಟ್ರಿಕ್‌ ಕಾರು ಮಾದರಿಗಳಲ್ಲಿ ಇದು ಎರಡನೆಯದಾಗಿದ್ದು, 2024 ರ ವೇಳೆಗೆ ಉಳಿದ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ತರಲಿದೆ.

Aryavardhan Guruji Brought Brand New Range Rover SV Carmel Edition Luxury SUV

ಕೆಲವು ವರ್ಷಗಳ ಹಿಂದೆಯಿಂದಲೇ ರೇಂಜ್‌ ರೋವರ್‌ ಎಲೆಕ್ಟ್ರಿಕ್‌ ವಾಹನಗಳನ್ನು ಅಭಿವೃದ್ದಿ ಪಡಿಸುವ ಕೆಲಸವನ್ನು ಆರಂಭಿಸಿತ್ತು. ಮುಂದಿನ ವರ್ಷಗಳಲ್ಲಿ ಕಂಪನಿಯು ತನ್ನ ಇತರ ಪ್ರಸಿದ್ದ ಕಾರು ಮಾದರಿಗಳಾದ ರೇಂಜ್‌ ರೋವರ್, ರೇಂಜ್ ರೋವರ್‌ ವೇಲಾ, ಇವೋಕ್‌ ಮತ್ತು ಇತರ ಮಾದರಿಗಳನ್ನು ಭಾರತದಲ್ಲಿ ಅನಾವರಣ ಮಾಡಲಿದೆ ಎಂದು ತಿಳಿದು ಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, May 29, 2024, 11:14 [IST]
English summary
Aryavardhan guruji brought brand new range rover sv carmel edition luxury suv
Read more on range rover india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+