ಭರ್ಜರಿ ಆಫರ್ ಬಾಚಿಕೊಂಡ ಅಶೋಕ್ ಲೇಲ್ಯಾಂಡ್: 2,104 ಆಧುನಿಕ ಸರ್ಕಾರಿ ಬಸ್‌ಗಳಿಗೆ ಒಪ್ಪಂದ

ಹಿಂದೂಜಾ ಗ್ರೂಪ್‌ನ ಭಾರತೀಯ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಅಶೋಕ್ ಲೇಲ್ಯಾಂಡ್, ವೈಕಿಂಗ್ ಪ್ಯಾಸೆಂಜರ್ ಬಸ್‌ಗಳಿಗಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) ಯಿಂದ ಬೃಹತ್ ಆರ್ಡರ್ ಸ್ವೀಕರಿಸಿದೆ. ಈಗಾಗಲೇ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 15,000 ಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿರುವ ದೇಶದ ಅತಿದೊಡ್ಡ ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿದ್ದು, ಈಗ ಅಶೋಕ್‌ ಲೇಲ್ಯಾಂಡ್‌ಗೆ 2,104 ಯುನಿಟ್‌ ಸಂಪೂರ್ಣ ನಿರ್ಮಿತ ಬಸ್‌ಗಳ ಆರ್ಡರ್ ಅನ್ನು ನೀಡಿದೆ. ಇದು ಬಸ್ ವಿಭಾಗದಲ್ಲಿ ಅಶೋಕ್ ಲೇಲ್ಯಾಂಡ್‌ನ ಪ್ರಬಲ ಸ್ಥಾನವನ್ನು ಬಲಪಡಿಸಲು ಮತ್ತಷ್ಟು ಕೊಡುಗೆ ನೀಡುತ್ತದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಅಶೋಕ್ ಲೇಲ್ಯಾಂಡ್ ವಿಶ್ವದ ಟಾಪ್ 5 ಅತಿದೊಡ್ಡ ಬಸ್ ತಯಾರಕ ಕಂಪನಿಗಳಲ್ಲಿ ಒಂದಾಗಿದ್ದು, ಈ ಆರ್ಡರ್‌ನೊಂದಿಗೆ ಬಸ್‌ಗಳು ಅದರ ಫ್ಲೀಟ್‌ನಲ್ಲಿ ಮತ್ತಷ್ಟು ಪ್ರಾಬಲ್ಯ ಸಾಧಿಸಲಿವೆ. ಆಧುನಿಕ ಹಾಗೂ ಸಂಪೂರ್ಣವಾಗಿ ನಿರ್ಮಿಸಲಾದ ಬಸ್‌ಗಳು ಇತ್ತೀಚಿನ CMVR ಮಾನದಂಡಗಳಿಗೆ ಅನುಗುಣವಾಗಿರುತ್ತವೆ. AIS 153 ಕಂಪ್ಲೈಂಟ್ ಮಾಡಲಾದ ದೇಹವನ್ನು ಒಳಗೊಂಡಿರುತ್ತವೆ ಎಂದು ಕಂಪನಿ ತಿಳಿಸಿದೆ.

ashok-leyland-bags-order-of-2104-fully-built-buses-from-msrtc

ಅಲ್ಲದೇ 197 HP H-ಸರಣಿಯ ಎಂಜಿನ್‌ನೊಂದಿಗೆ ಸಾಬೀತಾಗಿರುವ iGEN6 BS VI OBD II ತಂತ್ರಜ್ಞಾನ, ರಿಯರ್ ಏರ್ ಸಸ್ಪೆನ್ಷನ್ ಹೊಂದಿವೆ. ಈ ಬಸ್‌ಗಳನ್ನು ಅಶೋಕ್ ಲೇಲ್ಯಾಂಡ್‌ನ ವಿಶೇಷ ಬಸ್ ಬಾಡಿ ಪ್ಲಾಂಟ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತಯಾರಿಸಲಾಗುವುದು. ವರ್ಧಿತ ಸುರಕ್ಷತೆ, ಸುಧಾರಿತ ಸೌಕರ್ಯ ಮತ್ತು MSRTC ಗಾಗಿ ಕಡಿಮೆ ಒಟ್ಟು ಮಾಲೀಕತ್ವವನ್ನು ನೀಡುತ್ತದೆ ಎಂದು ಅಶೋಕ್ ಲೇಲ್ಯಾಂಡ್ ತಿಳಿಸಿದೆ.

ಅಶೋಕ್ ಲೇಲ್ಯಾಂಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶೇನು ಅಗರ್ವಾಲ್ ಮಾತನಾಡಿ, "ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದೊಂದಿಗೆ (MSRTC) ನಮ್ಮ ದೀರ್ಘಕಾಲದ ಪಾಲುದಾರಿಕೆಯನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ. ಈ ಹೊಸ ಆರ್ಡರ್‌ನಿಂದ ಹೆಚ್ಚು ಪರಿಣಾಮಕಾರಿ ಮತ್ತು ತಾಂತ್ರಿಕವಾಗಿ ಮುಂದುವರಿದ ಉತ್ಪನ್ನಗಳನ್ನು ಉತ್ಪಾದಿಸುವ ನಮ್ಮ ಸಮರ್ಪಣೆಯನ್ನು ಒತ್ತಿಹೇಳುತ್ತದೆ ಎಂದರು.

ಅಶೋಕ್ ಲೇಲ್ಯಾಂಡ್ M&HCV (ಮಧ್ಯಮ ಮತ್ತು ಬೃಹತ್ ವಾಣಿಜ್ಯ ವಾಹನ) ಅಧ್ಯಕ್ಷ ಸಂಜೀವ್ ಕುಮಾರ್ ಮಾತನಾಡಿ, "ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಈ ಬೃಹತ್ ಆರ್ಡರ್‌ ನಮ್ಮ ಸಾಮರ್ಥ್ಯವನ್ನು ನೆನಪಿಸುತ್ತದೆ. ಈ ಆರ್ಡರ್ ಗೆಲುವು ನಮ್ಮ ಉತ್ಪನ್ನಗಳಲ್ಲಿ ನಮ್ಮ ಗ್ರಾಹಕರು ಹೊಂದಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಒತ್ತಿಹೇಳುತ್ತದೆ. MSRTC ಸಂಸ್ಥೆಯ ವಿಶಿಷ್ಟ ಅವಶ್ಯಕತೆಗಳನ್ನು ಪೂರೈಸಲು ವಿಶಿಷ್ಟವಾಗಿ ಬಸ್‌ಗಳನ್ನು ವಿನ್ಯಾಸಗೊಳಿಸುತ್ತೇವೆ.

ನಮ್ಮ ಬಸ್‌ಗಳು ನಮ್ಮ ಉತ್ಪನ್ನಗಳ ವಿಶ್ವಾಸಾರ್ಹತೆ, ಬಾಳಿಕೆ ಮತ್ತು ದೃಢತೆಗೆ ಸಾಕ್ಷಿಯಾಗಿವೆ. MSRTC ಮತ್ತು ಮಹಾರಾಷ್ಟ್ರದ ಜನರಿಗೆ ಆಧುನಿಕ ಫ್ಲೀಟ್ ಅನ್ನು ನೀಡಲು ನಾವು ಹೆಮ್ಮೆಪಡುತ್ತೇವೆ. ಉತ್ತಮ ಸೌಕರ್ಯ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟವನ್ನು ನೀಡಲು ಸಜ್ಜಾಗಿದ್ದೇವೆ. ಈ ಆರ್ಡರ್ ಅಶೋಕ್ ಲೇಲ್ಯಾಂಡ್ ಮೇಲೆ ನಮ್ಮ ಗ್ರಾಹಕರು ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಇತ್ತೀಚಿನ ಆರ್ಡರ್ ಭಾರತೀಯ ಮತ್ತು ಜಾಗತಿಕ ಬಸ್ ಮಾರುಕಟ್ಟೆಯಲ್ಲಿ ಅಶೋಕ್ ಲೇಲ್ಯಾಂಡ್‌ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ. ವಿದೇಶಿ ಬ್ರಾಂಡ್‌ಗಳಿಗೆ ಹೋಲಿಸಿದರೆ ದೇಶದಲ್ಲಿ ಭಾರತೀಯ ಬ್ರಾಂಡ್‌ಗಳು ಉತ್ತಮ ಗುಣಮಟ್ಟವನ್ನು ಒದಗಿಸುತ್ತವೆ ಎಂದು ಹೇಳಲು ಈ ಬೃಹತ್ ಆರ್ಡರ್ ಸಾಕ್ಷಿಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಆಧುನಿಕ ಬಸ್‌ಗಳನ್ನು ಪರಿಚಯಿಸಲು ಶ್ರಮಿಸುತ್ತೇವೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, July 15, 2024, 15:23 [IST]
English summary
Ashok leyland bags order of 2104 fully built buses from msrtc
Read more on ashok leyland india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+